ಕರ್ನಾಟಕದ ಪ್ರತಿಷ್ಠಿತ ನಗರ ಮಂಗಳೂರು, ಭೂತಾಪಮಾನ ಏರಿಕೆಯಿಂದ ಸಂಪೂರ್ಣವಾಗಿ ಮುಳುಗುತ್ತೆ ಅನ್ನುತ್ತೆ ಹೊಸ ಸಂಶೋಧನೆ!!

0
560

ರಾಜ್ಯದ ಕರಾವಳಿ ಪ್ರದೇಶ ಎಂದ್ಮೆಲೆ ಥಟ್ಟನೆ ನೆನಪಿಗೆ ಬರುವುದು ಮಂಗಳೂರು. ತನ್ನ ಕಡಲ ಕಿನಾರೆ ಹಾಗೂ ಮಿನುಗಾರಿಕೆಯಿಂದ ಸುದ್ದಿಯಲ್ಲಿರುವ ನಗರಿ.. ಆದ್ರೆ ಈಗ ಮಾತ್ರ ಮಂಗಳೂರು ಬೇರೆ ಕಾರಣಕ್ಕೆ ಸುದ್ದಿ ಎಲ್ಲಿದೆ. ಹೌದು.. ಈ ಸುದ್ದಿ ಮಂಗಳೂರು ವಾಸಿಗಳನ್ನು ಬೆಚ್ಚಿಬೀಳಿಸುವುದಂತೂ ಸುಳ್ಳೇನಲ್ಲ. ಅಂದಹಾಗೆ ಕಡಲ ನಗರಿಯ ಜನರು ಈ ಸುದ್ದಿಯನ್ನು ಓದಿ ಬೇರೆ ಕಡೆಗೆ ಸ್ಥಳಾಂತರವಾದ್ರೂ ಅಚ್ಚರಿ ಏನು ಇಲ್ಲ. ರಾಜ್ಯದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಮಂಗಳೂರು ಇನ್ನು ನೂರು ವರ್ಷಗಳಲ್ಲಿ ಸಮುದ್ರದಲ್ಲಿ ಮುಳುಗಲಿದೆಯಂತೆ. ಈ ವಿಷಯವನ್ನು ಯಾವುದೋ ಜ್ಯೋತಿಷಿ, ಅಂಕಿ ಅಂಶ ತಜ್ಞ, ಕವಡೆ ಶಾಸ್ತ್ರಜ್ಞ ಹೇಳಿದ್ರೆ ಅದು ಸುಳ್ಳು ಎನ್ನಬಹುದಿತ್ತು.

ಆದ್ರೆ ಈ ವಿಷಯವನ್ನು ನಾಸಾ ವಿಜ್ಞಾನಿಗಳು ಬಹಿರಂಗ ಪಡೆಸಿದ್ದಾರೆ. ನಾಸಾದ ವಿಜ್ಞಾನಿಗಳು ನಿಡಿರುವ ವರದಿಯಂತೆ ಇನ್ನು 50 ರಿಂದ 100 ವರ್ಷಗಳಲ್ಲಿ ಮಂಗಳೂರು ನಗರ ಸಮುದ್ರದ ರಕ್ಕಸ ಅಬ್ಬರಕ್ಕೆ ಬಲಿಯಾಗಲಿದೆಯಂತೆ. ಗ್ರೇಡಿಯಂಟ್ ಫಿಂಗರ್ ಪ್ರಿಂಟ್ ಮ್ಯಾಪಿಂಗ್ ಎನ್ನುವ ಹವಾಮಾನ ಮುನ್ಸೂಚನೆ ನೀಡುವ ಮಾಪಕ ಈ ಸುದ್ದಿ ಬಹಿರಂಗ ಪಡಿಸಿದೆ. ಈ ಉಪಕರಣ ಯಾವ ಭಾಗದಲ್ಲಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಲಿದೆ ಎನ್ನುವುದನ್ನು ಮಾಹಿತಿ ನೀಡುತ್ತದೆ. ವರದಿಯ ಅನ್ವಯ ವಿಶ್ವದ 290 ನಗರಗಳಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರ ಅನ್ವಯ ಮುಂಬೈ, ಮಂಗಳೂರು ಅಪಾಯದ ಮಟ್ಟದಲಿದೆಯಂತೆ.

ಭೂಮಿಯ ತಾಪಮಾನ ಏರುತ್ತಿರುವುದರಿಂದ ಮಂಜುಗಡ್ಡೆ ಕರಗಲಾರಂಭಿಸಿದೆ. ಹೀಗೆ ಮುಂದುವರೆದಲ್ಲಿ 2100ರ ವೇಳೆಗೆ ದೇಶದ ಕರಾವಳಿ ನಗರಳು ಸಮುದ್ರದಲ್ಲಿ ಲೀನವಾಗಲಿದೆಯಂತೆ. ವರದಿಯ ಪ್ರಕಾರ ಆದಲ್ಲಿ ಸುಮಾರು 14 ಸಾವಿರ ಚದರ ಕಿ.ಮಿ ವ್ಯಾಪ್ತಿಯ ಭೂಪ್ರದೇಶ ಸಮುದ್ರದಲ್ಲಿ ಲೀನವಾಗಲಿದೆ. ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇಕಡ 75ರಷ್ಟು ಅಂಟಾರ್ಟಿಕಾ ಮತ್ತು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲಿದ್ದು, ತಾಪಮಾನ ಏರುತ್ತಾ ಹೋದರೆ ಭೂಮಿಯ ಗತಿ ಶೋಚನೀಯ ಎನ್ನುವ ಮಾಹಿತಿಯನ್ನೂ ವರದಿ ಹೇಳಿದೆ.