ನಾಟಿ ಕೋಳಿ ಸಾರು ಮಾಡುವ ವಿಧಾನ

0
9696

ನಾಟಿ ಕೋಳಿ ಸಾರು ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: * ಒಂದು ಕೆಜಿ ನಾಟಿ ಕೋಳಿ ಮಾಂಸ * 10 ಒಣ ಕೆಂಪು ಮೆಣಸು * 1 ಚಮಚ ಕೊತ್ತಂಬರಿ ಬೀಜ * ಅರ್ಧ ಚಮಚ ಅರಿಶಿಣ * 1 ಚಮಚ ಜೀರಿಗೆ * 1 ಕಪ್ ತೆಂಗಿನ ತುರಿ * ರುಚಿಗೆ ತಕ್ಕ ಉಪ್ಪು * 1 ನಿಂಬೆ ಹಣ್ಣು * ಕರಿ ಬೇವಿನ ಎಲೆ * ಈರುಳ್ಳಿ 2 * ಬೆಳ್ಳುಳ್ಳಿ 4-6 ಎಸಳು * ಎಣ್ಣೆ * ತುಪ್ಪ * ಚಕ್ಕೆ , ಲವಂಗ, ಏಲಕ್ಕಿ

nati kolisaru

ಮಾಡುವ ವಿಧಾನ: ಚಿಕನ್‌ಗೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಒಂದು ಕಡೆ ಇಡಿ.

ಗಸಗಸೆಯನ್ನು ಗ್ರೈಂಡ್‌ ಮಾಡಿಕೊಳ್ಳಿ, ನಂತರ ಅದಕ್ಕೆ ಲವಂಗ, ಏಲಕ್ಕಿ, ದಾಲ್ಚಿನಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಜೊತೆಯಾಗಿ ಹಾಕಿ ಪೇಸ್ಟ್‌ ಮಾಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ತುಂಡರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಕಂದು ಬಣ್ಣ ಬರುವವರೆಗೆ ಉರಿಯಿರಿ. ನಂತರ ಅದಕ್ಕೆ ಈ ಮೊದಲು ತಯಾರಿಸಿಟ್ಟ ಪೇಸ್ಟ್‌ ಹಾಕಿ. ಮತ್ತೆ ಎಲ್ಲವನ್ನೂ ಜೊತೆಯಾಗಿ ಫ್ರೈ ಮಾಡಿ. ಈ ಮಿಶ್ರಣಕ್ಕೆ ಧನಿಯಾ ಪುಡಿ ಹಾಕಿ ಎರಡು ನಿಮಿಷ ಬೇಯಿಸಿ ನಂತರ ಅದಕ್ಕೆ ಮೆಣಸಿನ ಪುಡಿ ಹಾಕಿ.

ಎರಡು ನಿಮಿಷ ಬೆಂದ ಬಳಿಕ ಈ ಮಸಾಲೆಗೆ ಚಿಕನ್‌ ತುಂಡುಗಳನ್ನು ಹಾಕಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ನಂತರ ಅದಕ್ಕೆ ಟೊಮಾಟೊ ಹಾಕಿ ಮತ್ತೆ ಒಂದು ನಿಮಿಷ ಬೇಯಿಸಿ. ನಂತರ ಅದಕ್ಕೆ ಕಾಯಿ ಹಾಲು ಹಾಕಿ ಪ್ಯಾನ್‌ನ ಮುಚ್ಚಳವನ್ನು ಹಾಕಿ ಗಟ್ಟಿಯಾಗಿ ಮುಚ್ಚಿ.

ಚಿಕನ್‌ ಸರಿಯಾಗಿ ಬೆಂದ ನಂತರ ಅದಕ್ಕೆ ಉಳಿದ ತೆಂಗಿನ ತುರಿಯನ್ನು ಹಾಕಿ. ಮತ್ತೆ ಕೆಲವು ನಿಮಿಷಗಳ ಕಾಲ ಬೇಯಿಸಿ. ಈಗ ರುಚಿಯಾದ ಕೋರಿ ಸಾರು ಸವಿಯಲು ರೆಡಿ.