ದೇಶಭಕ್ತಿ ಇದ್ದಾರೆ ಸಾಕು, ಅದನ್ನು ಎಲ್ಲೆಂದರಲ್ಲಿ ತೋರಿಸುವ ಅವಶ್ಯಕತೆಯಿಲ್ಲ, ಇನ್ನು ಮುಂದೆ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಇಲ್ಲ: ಸುಪ್ರೀಂಕೋರ್ಟ್

0
404

ಸುಪ್ರೀಂಕೋರ್ಟ್ ನವೆಂಬರ್ 30, 2016 ರಂದು ಒಂದು ಹೊಸ ಆದೇಶವನ್ನು ಹೊರಡಿಸಿತ್ತು. ಆ ಆದೇಶ ಎಲ್ಲರಿಗೆ ಅಚ್ಚರಿ ಮೂಡಿಸಿತ್ತು. ಕೆಲ ಜನ ಅದನ್ನು ಸ್ವಾಗತಿಸಿದರೆ, ಕೆಲವರು ಅದನ್ನು ವಿರೋಧಿಸಿದ್ದರು. ಈಗ ಆ ಆದೇಶವನ್ನು ಹಿಂಪಡೆದಿದೆ. ಅಷ್ಟಕ್ಕೂ ಯಾವುದು ಆ ಆದೇಶ ಅಂತಹುದೆನಿದೆ ಆ ಆದೇಶದಲ್ಲಿ ಅಂತ ತಿಳಿಯುವುದಕ್ಕೆ ಮುಂದೆ ಓದಿ.

ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರ ಶುರುವಾಗುವ ಮುನ್ನ ಪ್ರತಿಬಾರಿಯೂ ರಾಷ್ಟಗೀತೆಯನ್ನು ಹಾಕಬೇಕು, ಮತ್ತು ರಾಷ್ಟ್ರಗೀತೆ ಹಾಕಿದಾಗ ಎಲ್ಲರು ನಿಂತು ಅದಕ್ಕೆ ಗೌರವಿಸಬೇಕು ಎಂದು ಒಂದು ವಿಚಿತ್ರ ತೀರ್ಪನ್ನು ಸುಪ್ರೀಂಕೋರ್ಟ್ 2016 ನವೆಂಬರ್ 30 ರಂದು ಹೊರಡಿಸಿತ್ತು.

ಜಸ್ಟಿಸ್ CJI ದೀಪಕ್ ಮಿಶ್ರ ಹೊರಡಿಸಿದ್ದ ಈ ಆದೇಶವನ್ನು ಈಗ ಜಸ್ಟಿಸ್ D Y ಚಂದ್ರಚೂಡ್ ಅವರು ಹಿಂಪಡೆದಿದ್ದಾರೆ. ಚಿತ್ರಮಂದಿರದಲ್ಲಿ ರಾಷ್ಟ್ರ ಗೀತೆ ಹಾಕುವುದು, ಬಿಡುವುದು ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಜನ ಕೂಡ ತಮ್ಮ ದೇಶಭಕ್ತಿಯನ್ನು ತೋರಿಸಲು ಚಿತ್ರಮಂದಿರದಲ್ಲಿ ಎದ್ದು ನಿಲ್ಲುವ ಅವಶ್ಯಕತೆಯಿಲ್ಲ, ಕುಳಿತರು ಅದೇನು ದೇಶದ್ರೋಹವಲ್ಲ ಎಂದಿದ್ದಾರೆ.

ಇನ್ನು ಈ ಹೊಸ ಆದೇಶವನ್ನು ಸಮರ್ಥಿಸಿಕೊಂಡ ಜಸ್ಟಿಸ್ D Y ಚಂದ್ರಚೂಡ್ ಅವರು, ಜನ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಮತ್ತು ಮನೋರಂಜನೆಗೆಂದು ಬರುತ್ತಾರೆ. ಜನರಿಗೆ ಸಾಕಷ್ಟು ದೇಶಭಕ್ತಿಯಿದೆ ಅದನ್ನು ಈ ರೀತಿ ತೋರಿಸುವ ಅವಶ್ಯಕತೆಯಿಲ್ಲ ಎಂದರು.