ಬಿಎಸ್ಎನ್ಎಲ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಿದ ನಂತರ ಕೆಲಸ ಆರಂಭಿಸುತ್ತಾರೆ

0
1064

 

ತ್ರಿಪುರ: ಮಧ್ಯಪ್ರದೇಶದ ಜಬಲ್‍ಪುರ್ ಮತ್ತು ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿರುವ ಬಿಎಸ್‍ಎನ್‌ಎಲ್ ತರಬೇತಿ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ರಾಷ್ಟ್ರಗೀತೆ ಹಾಡಿದ ನಂತರವೇ ಕೆಲಸ ಆರಂಭಿಸುವ ಸಂಪ್ರದಾಯ ಇದೆ.

ಬಿಎಸ್‍ಎನ್‍ಎಲ್ ಅಗರ್ತಲಾ ಶಾಖೆಯಲ್ಲಿ ಅಲ್ಲಿನ ನೌಕರರು ಮತ್ತು ಉನ್ನತ ದರ್ಜೆಯ ಅಧಿಕಾರಿಗಳು ಕೆಲಸ ಆರಂಭ ಮಾಡುವ ಮುನ್ನ ರಾಷ್ಟ್ರಗೀತೆಯನ್ನು ಹಾಡುತ್ತಾರೆ.

ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಇಲ್ಲಿನ ನೌಕರರು ಕೆಲಸ ಆರಂಭಿಸುವ ಮುನ್ನ ಪ್ರಾರ್ಥನೆಯಾಗಿ ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದ್ದಾರೆ.

ತ್ರಿಪುರಾ ರಾಜ್ಯದಲ್ಲಿ ಇದೇ ಮೊದಲ ಬಾರಿ ಬಿಎಸ್‍ಎನ್‍ಎಲ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಿದ ನಂತರ ಕೆಲಸ ಆರಂಭಿಸುವ ಪರಿಪಾಠ ಆರಂಭವಾಗಿದೆ ಎಂದು ತ್ರಿಪುರಾ ಬಿಎಸ್ಎನ್ಎಲ್ ಪ್ರಧಾನ ಅಕೌಂಟೆಂಟ್ ಆಫೀಸರ್  ಆಶಿಮ್ ಭಟ್ಟಾಚಾರ್ಯ ಹೇಳಿದ್ದಾರೆ.

 

ಇಲ್ಲಿನ ಎಲ್ಲ ನೌಕರರು ಬೆಳಗ್ಗೆ 10 ಗಂಟೆಗೆ ಸಭಾಂಗಣದಲ್ಲಿ ನೆರೆದು ರಾಷ್ಟ್ರಗೀತೆ ಹಾಡುತ್ತಾರೆ ಎಂದು ಅವರು ಹೇಳಿದ್ದಾರೆ.