ಮತ್ತೆ ಇತಿಹಾಸ ಬರೆದ ಕನ್ನಡ ಚಿತ್ರರಂಗ; 2019ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ 10 ಕನ್ನಡ ಸಿನಿಮಾಗಳು..

0
554

ಕನ್ನಡ ಚಿತ್ರರಂಗ ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿದ್ದು ದೇಶ ವಿದೇಶಗಳಲ್ಲಿ ಚಲನಚಿತ್ರ ಪ್ರದರ್ಶನ ಕಾಣುತ್ತಿವೆ ಅದರಂತೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, 2019 ರ ಸಾಲಿನಲ್ಲಿ ಕನ್ನಡಕ್ಕೆ ಬರೋಬ್ಬರಿ 10 ಪ್ರಶಸ್ತಿಗಳು ಲಭಿಸಿದೆ. ಈ ಮೂಲಕ ಭಾರತೀಯ ಭಾಷೆಗಳ ಪೈಕಿ ಅತೀ ಹೆಚ್ಚು ಪ್ರಶಸ್ತಿ ಕನ್ನಡಕ್ಕೆ ಲಭಿಸಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅಲ್ಲದೇ ಒಂದು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆಯಾಗಿದೆ. ಇದು ಒಂದು ರೀತಿಯ ಕನ್ನಡಕ್ಕೆ ಸಿಕ್ಕ ಗೌರವ ಕೂಡಾ ಆಗಿದೆ.

ಕನ್ನಡ ಸಿನಿಮಾಕ್ಕೆ 10 ರಾಷ್ಟೀಯ ಪ್ರಶಸ್ತಿ?

ಹೌದು ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಹತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡ ಹೆಗ್ಗಳಿಕೆ ಪಡೆದುಕೊಂಡಿದೆ. ‘ರಾಮ ರಾಮ ರೇ’ ಸಿನಿಮಾ ನಿರ್ದೇಶನ ಮಾಡಿದ್ದ ಸತ್ಯ ಪ್ರಕಾಶ್ ಅವರ ಒಂದಲ್ಲ ಎರಡಲ್ಲ ಸಿನಿಮಾ ರಾಷ್ಟ್ರೀಯ ಏಕೀಕರಣ ಮತ್ತು ಅತ್ಯುತ್ತಮ ಬಾಲ ನಟ ಪ್ರಶಸ್ತಿ ವಿಭಾಗದಲ್ಲಿ ಆಯ್ಕೆ ಆಗಿದೆ. ಅಲ್ಲದೇ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದೆ.

ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಆಗಿ ಶ್ರುತಿ ಹರಿಹರನ್ ಅಭಿನಯದ ನಾಚಿಚರಾಮಿ ಹಾಗೂ ಅತ್ಯುತ್ತಮ ಆ್ಯಕ್ಷನ್ ಚಿತ್ರವಾಗಿ ಕೆಜಿಎಫ್ ಆಯ್ಕೆಯಾಗಿದೆ. ನಾತಿಚರಾಮಿಯ ಮಾಯಾವಿ ಮನವೆ ಗೀತೆಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ. ರಾಷ್ಟ್ರ ಪ್ರಶಸ್ತಿ ಭಾಜನವಾದ ಕನ್ನಡ ಸಿನಿಮಾಗಳ ಪಟ್ಟಿ ಈ ರೀತಿ ಇದೆ. ಒಂದಲ್ಲ ಎರಡಲ್ಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ನಾತಿಚರಾಮಿ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿವೆ. ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನಾತಿಚರಾಮಿ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಇಡೀ ಭಾರತ ಚಿತ್ರರಂಗವನ್ನೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಸಿನಿಮಾಗೆ ಅತ್ಯುತ್ತಮ ವಿಎಫ್‍ಎಕ್ಸ್ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮುಕಜ್ಜಿಯ ಕನಸುಗಳು ಸಿನಿಮಾ ನ್ಯಾಷನಲ್ ಫಿಲ್ಮ್ ಆರ್ಕೈವ್‍ಗೆ ಆಯ್ಕೆ ಆಗಿದೆ. ಈ ಬಾರಿಯ ಪ್ರಶಸ್ತಿಯ ರೇಸ್‍ನಲ್ಲಿ 40ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಆಯ್ಕೆಯಾಗಿದ್ದವು. ಅದರ ಪೈಕಿ ಹತ್ತು ಸಿನಿಮಾಗಳು ಪ್ರಶಸ್ತಿ ಪಡೆದುಕೊಂಡಿವೆ.

ಕನ್ನಡ ಸಿನಿಮಾ ರಂಗವನ್ನೇ ಬದಲಿಸಿದ ಕೆಜಿಎಫ್ ಎರಡು ಪ್ರಶಸ್ತಿ ಸಿಕ್ಕಿದೆ, ಇನ್ಫಿ ಮೀಡಿಯಾಕ್ಕೆ ಅತ್ಯುತ್ತಮ ವಿಎಫ್ಎಕ್ಸ್ ಪ್ರಶಸ್ತಿ ಸಿಕ್ಕಿದ್ದು, ನಟಿ ಶ್ರುತಿ ಹರಿಹರನ್ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಪಾತ್ರರಾಗಿದ್ದಾರೆ. ಒಂದಲ್ಲ ಎರಡಲ್ಲ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ, ನಾತಿ ಚರಾಮಿ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಮೂಕಜ್ಜಿಯ ಕನಸು ಚಿತ್ರಗಳು ಭಾರಿ ಹೆಸರು ಮಾಡಿವೆ.