ವಿಪರೀತವಾಗಿ ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಕಾರಣವೇನು? ಮನೆಮದ್ದು ಇಲ್ಲಿದೆ ನೋಡಿ..

0
320

ಫಂಗಸ್​ಗಳ ಸೋಂಕು ಅಥವಾ ತುರಿಕೆ ಎಂದು ಕರೆಯಲ್ಪಡುವ ತುರಿಕೆ ರೋಗ ವಿರೋಧಿಗಳಿಗೆ ಬರಬಾರದು ಎನ್ನುವಷ್ಟು ಕಿರಿಕಿರಿ ಮಾಡುತ್ತೆ. ಒಂದು ಬಾರಿ ಬಂದರೆ. ಮತ್ತೆ ಹೋಗುವುದು ಬಹುತೇಕ ಕಡಿಮೆ ಎನ್ನುತ್ತಾರೆ ಅರೋಗ್ಯ ತಜ್ಞರು. ಇದಕ್ಕೆ ವೈದ್ಯಕೀಯವಾಗಿ ಚಿಕಿತ್ಸೆ ಇದ್ದರು ಕೂಡ ಕೆಲವು ದಿನಗಳಲ್ಲಿ ಮತ್ತೆ ಮರುಕಳಿಸಿ ಬರುತ್ತದೆ. ಇದು ಮುಖ್ಯವಾಗಿ ಬ್ಯಾಕ್ಟೀರಿಯಾ, ಫಂಗಸ್​ಗಳ ಸೋಂಕುಗಳು, ಯಾವುದಾದರೂ ಕೀಟಗಳ ಕಡಿತ, ಅಲರ್ಜಿ, ಸೋರಿಯಾಸಿಸ್, ಅಟೋಪಿಕ್ ಡರ್ಮಟೈಟಿಸ್, ಒಣಚರ್ಮ, ಸೂರ್ಯಾಘಾತ ಇನ್ನಿತರ ಚರ್ಮಸಂಬಂಧಿತ ಸಮಸ್ಯೆಗಳಿಂದಾಗಿ ತುರಿಕೆ ಕಂಡು ಬರುತ್ತದೆ.

Also read: ಜೀವನವನ್ನೆ ಬೇಸರ ಮಾಡುವ ತುರಿಕೆಗೆ ಇಲ್ಲಿವೆ ನೋಡಿ ಮನೆ ಮದ್ದುಗಳು..

ತುರಿಕೆಗೆ ಕಾರಣವೇನು?

ತುರಿಕೆ ಇರುವಾಗ ಸಾಧ್ಯವಾದಷ್ಟರ ಮಟ್ಟಿಗೆ ತುರಿಸಿಕೊಳ್ಳುವುದನ್ನು ತಡೆಯುವುದು ಅತಿ ಮುಖ್ಯ. ಜೋರಾಗಿ ತುರಿಸಿಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾಗಳ ಚಟುವಟಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೊತೆಯಲ್ಲಿ ಗಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮಾನಸಿಕ ಒತ್ತಡ, ಖಿನ್ನತೆಯೂ ತುರಿಕೆಗೆ ಕಾರಣವಾಗಬಹುದೆಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ಹೀಗಿದ್ದಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಪ್ರತಿನಿತ್ಯ ಯೋಗ, ಧ್ಯಾನ, ಪ್ರಾಣಾಯಾಮದಂತಹ ಉಪಾಯಗಳು ನಮ್ಮ ಕೈಹಿಡಿಯುತ್ತವೆ. ಸಾಮಾನ್ಯ ತುರಿಕೆಯಾದಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು.
ಫಂಗಸ್​ ಸಮಸ್ಯೆಗೆ ಮನೆಮದ್ದುಗಳು:

1. ಕಹಿಬೇವಿನ ಕಷಾಯ:

ತುರಿಕೆ ಆಗುತ್ತಿರುವ ಭಾಗವನ್ನು ಕಹಿಬೇವಿನ ಕಷಾಯದಿಂದ ಪದೇಪದೆ ತೊಳೆದುಕೊಳ್ಳುವುದರಿಂದ ತುರಿಕೆ ಕಡಿಮೆ ಮಾಡಿಕೊಳ್ಳಲು ಸಾಧ್ಯ. ತುರಿಕೆ ಆಗುತ್ತಿರುವ ಭಾಗದಲ್ಲಿ ಅರಿಶಿಣಪುಡಿ ಹಚ್ಚಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುತ್ತದೆ. ಐಸ್​ಪೀಸ್​ಗಳನ್ನು ತುರಿಕೆ ಆಗುತ್ತಿರುವ ಭಾಗಗಳಲ್ಲಿಟ್ಟುಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ನಿಂಬೆರಸವನ್ನು ಸೇರಿಸಿದ ನೀರಿನ ಮಿಶ್ರಣವನ್ನು ಹತ್ತಿಬಟ್ಟೆಯಲ್ಲದ್ದಿ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ತುರಿಕೆ ವೇಗವಾಗಿ ಕಡಿಮೆ ಆಗಲು ಸಾಧ್ಯ.

2. ಕೊಬ್ಬರಿ ಎಣ್ಣೆ:

ಶುಷ್ಕ ತ್ವಚೆ, ಡಯಾಪರ್ ನಿ೦ದಾದ ಹುಣ್ಣು, ಹಾಗೂ ಕೀಟಗಳ ಕಡಿತದಿ೦ದು೦ಟಾಗುವ ತ್ವಚೆಯ ತುರಿಕೆಗೆ ಕೊಬ್ಬರಿ ಎಣ್ಣೆಯನ್ನು ಒ೦ದು ಅತ್ಯುತ್ತಮವಾದ ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯು ತ್ವಚೆಯ ತುರಿಕೆಯನ್ನು ಉಪಶಮನಗೊಳಿಸುತ್ತದೆ ಹಾಗೂ ತನ್ಮೂಲಕ ತ್ವಚೆಯ ತುರಿಕೆಯನ್ನು ಹೋಗಲಾಡಿಸುತ್ತದೆ. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಪ್ರತಿದಿನವೂ ಮ೦ದವಾಗಿ ತುರಿಕೆಯ ಜಾಗೆಯ ಮೇಲೆ ಲೇಪಿಸಿ ನಯವಾಗಿ ಮಾಲೀಸು ಮಾಡಿರಿ.

3. ಎಳ್ಳೆಣ್ಣೆ:

ಬಿಸಿಲಿನ ತಾಪದಿ೦ದಾಗಿ ಹಾಗೂ ಶುಷ್ಕ ತ್ವಚೆಯ ಕಾರಣದಿ೦ದಾಗಿ ತಲೆದೋರಬಹುದಾದ ತ್ವಚೆಯ ತುರಿಕೆಯನ್ನು ಹೋಗಲಾಡಿಸಿ, ತ್ವಚೆಯ ಉರಿಯನ್ನು ಸ೦ತೈಸುತ್ತದೆ.ತ್ವಚೆಯ ತುರಿಕೆಯನ್ನು ಎಳ್ಳೆಣ್ಣೆಯು ಗುಣಪಡಿಸಿ ತ್ವಚೆಗೆ ಪೋಷಕಾ೦ಶವನ್ನು ಒದಗಿಸುತ್ತದೆ. ತುರಿಕೆ ನಿವಾರಣೆ ಮಾಡುತ್ತೆ.

4. ಬೇವು:

ತುರಿಕೆಯುಕ್ತ ತ್ವಚೆಗೆ ಸ೦ಬ೦ಧಿಸಿದ೦ತೆ ಇರುವ ಹಲವಾರು ಅತ್ಯುತ್ತಮ ಮನೆಮದ್ದುಗಳ ಪೈಕಿ ಬೇವೂ ಕೂಡ ಒ೦ದಾಗಿದೆ.ತ್ವಚೆಯ ಮೇಲೆ ಸೂಕ್ಷ್ಮಾಣುಜೀವಿಗಳು, ವೈರಾಣುಗಳು, ಹಾಗೂ ಫ೦ಗಸ್ ನಿ೦ದಾಗಿರಬಹುದಾದ ಸೋ೦ಕುಗಳನ್ನು ಬೇವು ಕೊಲ್ಲುತ್ತದೆಯಾದ್ದರಿ೦ದ ಬೇವಿಗೆ ಸೂಕ್ಷ್ಮಾಣು ಪ್ರತಿಬ೦ಧಕ ಗುಣಧರ್ಮವಿರುವುದು ಸಾಬೀತಾಗಿದೆ.ತುರಿಕೆಯುಕ್ತ ತ್ವಚೆಗೆ ಬೇವು ಒ೦ದು ಅತ್ಯುತ್ತಮ ಮನೆಮದ್ದು. ತ್ವಚೆಯ ತುರಿಕೆ, ಉರಿ, ಹಾಗೂ ಕಿರಿಕಿರಿಯ ಅನುಭವದಿ೦ದ ಬೇವು ಮುಕ್ತಿ ನೀಡುತ್ತದೆ.

5. ಪುದಿನಾ:

ಪುದಿನಾ ಎಲೆಗಳಲ್ಲಿ ಸೂಕ್ಷ್ಮಾಣು ಪ್ರತಿಬ೦ಧಕ ಗುಣಧರ್ಮಗಳಿದ್ದು, ಈ ಕಾರಣದಿ೦ದಾಗಿಯೇ ಪುದಿನಾವು ತ್ವಚೆಯ ತುರಿಕೆಗೆ ಕಾರಣವಾಗಬಲ್ಲ ಸೋ೦ಕುಗಳನ್ನು ಕೊಲ್ಲಬಲ್ಲ ಸಾಮರ್ಥ್ಯವುಳ್ಳದ್ದಾಗಿದೆ. ಜೊತೆಗೆ ಪುದಿನಾವು ತ್ವಚೆಯ ಉರಿ ಹಾಗೂ ಉರಿಯೂತವನ್ನೂ ಸಹ ನಿವಾರಿಸಬಲ್ಲದು. ಪುದಿನಾವನ್ನು ತ್ವಚೆಗೆ ಲೇಪಿಸಿಕೊ೦ಡಲ್ಲಿ ಅದು ತ್ವಚೆಗೆ ಆರಾಮವನ್ನೀಯುವುದರ ಮೂಲಕ ತುರಿಕೆಯನ್ನು ಹೋಗಲಾಡಿಸುತ್ತದೆ.

6. ಲೋಳೆಸರ

ಮೈಕೈ ತುರಿಕೆಯಿ೦ದ ಪಾರಾಗುವುದು ಹೇಗೆ? ಲೋಳೆಸರವು ತ್ವಚೆಗೆ ಅಗತ್ಯ ತೇವಾ೦ಶವನ್ನು ಪೂರೈಸುವುದರೊ೦ದಿಗೆ, ತ್ವಚೆಯ ತುರಿಕೆ ಹಾಗೂ ಉರಿಯನ್ನೂ ಕೂಡಾ ಉಪಶಮನಗೊಳಿಸುತ್ತದೆ. ತ್ವಚೆಯ ತುರಿಕೆ ಹಾಗೂ ಉರಿಯನ್ನು೦ಟು ಮಾಡುವ ತ್ವಚೆಯ ಮೇಲಿನ ವೃಣಗಳಿಗೆ ಲೋಳೆಸರವನ್ನು ಹಚ್ಚಿಕೊಳ್ಳಿರಿ.

Also read: ಪ್ರಾಣವನ್ನೇ ಬಲಿ ತೆಗೆದುಕೊಳ್ಳುವ ಡೆಂಗ್ಯು ಜ್ವರದ ಲಕ್ಷಣಗಳು; ಮತ್ತು ಜ್ವರ ಬಂದ ನಂತರ ಸೇವಿಸಬೇಕಾದ ಆಹಾರ ಇಲ್ಲಿದೆ ನೋಡಿ ಮಾಹಿತಿ!!