ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಮನೆಮದ್ದುಗಳು; ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವ ಮುನ್ನ ಒಮ್ಮೆ ಹೀಗೆ ಮಾಡಿ ನೋಡಿ..

0
500

ಈ ಬರದಿಂದ ಸಾಗುತ್ತಿರುವ ಜೀವನಕ್ಕೆ ಒಂದಿಷ್ಟು ಕಾಯಿಲೆಗಳು ಕೂಡ ವರವಾಗಿವೆ. ಅದರಂತ ಪ್ರತಿಯೊಬ್ಬರಿಗೂ ಒಂದಿಲ್ಲದೊಂದು ಕಾಯಿಲೆಗಳು ಬರುತ್ತಿವೆ. ಇವುಗಳನ್ನು ಹೋಗಲಾಡಿಸುವಲ್ಲಿ ಪೂರ್ತಿ ಜೀವನವೇ ಮುಗಿದುಹೊಗುತ್ತೆ ಆದರೆ ಮುನ್ನೆಚ್ಚರಿಕೆಯಾಗಿ ಕೆಲವು ವಿಧಾನಗಳನ್ನು ಮಾಡಿಕೊಂಡರೆ ಮುಂದೆ ಬರುವ ಅಥವಾ ಬಂದಿರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ಅಂತಹ ಕಾಯಿಲೆಗಳಲ್ಲಿ ಬರುವ ಅಪೆಂಡಿಕ್ಟಿಸ್ ಈಗೀಗ ತನ್ನ ಹಾವಳಿಯನ್ನು ಹೆಚ್ಚು ಮಾಡಿದ್ದು, ಜನರ ನೆಮ್ಮದಿಯನ್ನು ಕೆಡಸುತ್ತಿದೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ.

Also read: ಈ ಮನೆಮದ್ದುಗಳು ನಿಮ್ಮ ಶ್ವಾಸಕೋಶಕ್ಕೆ ಎಷ್ಟು ಒಳ್ಳೇದು ಅಂದ್ರೆ ಬಹಳ ವರ್ಷಗಳಿಂದ ಚೈನ್ ಸ್ಮೋಕರ್ ಆಗಿದ್ದವರ ಶ್ವಾಸಕೋಶದಲ್ಲಿ ಕರಿ ಕಟ್ಟಿರುವ ನಿಕೋಟಿನ್-ಅನ್ನು ಕೂಡ ಶುದ್ದ ಗೊಳಿಸುತ್ತದೆ!!

1. ಮಜ್ಜಿಗೆ

ಮಜ್ಜಿಗೆ ಎಲ್ಲರಿಗೂ ಸಾಮಾನ್ಯವಾಗಿ ಸಿಗುವ ಪಾನೀಯವಾಗಿದ್ದು, ಅಪೆಂಡಿಕ್ಟಿಸ್ ನೋವಿಗೆ ತುಂಬಾ ಸುಲಭ ಹಾಗೂ ಸಾಮಾನ್ಯವಾಗಿ ಸಿಗುವ ಔಷಧಿ ಇದಾಗಿದೆ. ಕೊತ್ತಂಬರಿ, ಪುದೀನಾ ಎಲೆಗಳು, ತುರಿದ ಸೌತೆಕಾಯಿ, ತುರಿದ ಶುಂಠಿ ಹಾಕಿಕೊಂಡು ತಯಾರಿಸಿದ ಮಜ್ಜಿಗೆಯು ಪರ ಜೈವಿಕ ಪರಿಣಾಮ ಬೀರುವುದು. ತಾಜಾತನ ಉಂಟು ಮಾಡುವ ಪಾನೀಯವಾಗಿದೆ. ದಿನಕ್ಕೆ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ ಆಗಿರಲಿದೆ.

2. ಜೇನುತುಪ್ಪ ಮತ್ತು ಲಿಂಬೆ

ಊಟದ ಕ್ರಮದಿಂದ ಮಲಬದ್ಧತೆ ಬಂದು ಅಪೆಂಡಿಕ್ಟಿಸ್ ಗೆ ಬಹು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಜೇನುತುಪ್ಪ ಮತ್ತು ಲಿಂಬೆ ರಸವು ಮಲಬದ್ಧತೆ ಸುಧಾರಣೆ ಮಾಡುವುದು ಮತ್ತು ಕರುಳಿನ ಕ್ರಿಯೆ ಸರಾಗಗೊಳಿಸುವುದು. ಇದರಿಂದಾಗಿ ಅಪೆಂಡಿಕ್ಟಿಸ್ ನ ನೋವಿಗೆ ಇದರಿಂದ ಶಮನ ಸಿಗುವುದು. ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಕುಡಿಯಿರಿ. ಇದು ಕರುಳಿನ ಅನಿಯಮಿತ ಚಲನೆ ಸಮಸ್ಯೆಯನ್ನು ನಿವಾರಣೆ ಮಾಡುವುದು. ಎಂದು ಹಲವು ಅಧ್ಯಯನಗಳು ತಿಳಿಸಿವೆ.

3. ಶುಂಠಿ

ಶುಂಠಿಯನ್ನು ಸಾಂಪ್ರದಾಯಿಕವಾಗಿ ಹೊಟ್ಟೆಯ ಉರಿಯೂತದ ಸಮಸ್ಯೆಗೆ ಬಳಸಲಾಗುತ್ತದೆ. ಶುಂಠಿಯ ಗಿಡದ ಬೇರಿನಲ್ಲಿ 6-ಜಿಂಜೆರೊಲ್ ಎನ್ನುವಂತಹ ಅಂಶವಿದೆ. ಸಂಶೋಧನೆ ಮಾಡಿದ ವೇಳೆ ಈ ಅಂಶವು ಗಡ್ಡೆಯ ಕೋಶಗಳ ಉರಿಯೂತ ನಿವಾರಣೆ ಮಾಡುತ್ತದೆ ಎಂದು ಕಂಡುಬಂದಿದೆ. ಅಪೆಂಡಿಕ್ಟಿಸ್ ನೋವಿನ ವೇಳೆ ರೋಗಿಗಳಲ್ಲಿ ಕಂಡುಬರುವಂತಹ ವಾಂತಿ ಅಥವಾ ವಾಕರಿಕೆ ನಿವಾರಣೆಗೆ ಶುಂಠಿಯು ತುಂಬಾ ಪರಿಣಾಮಕಾರಿ. ಶುಂಠಿ ತುಂಡುಗಳು ಅಥವಾ ಇದರ ರಸ ಕುಡಿದರೆ ಆಗ ದೇಹದಲ್ಲಿನ ಉರಿಯೂತ ಕಡಿಮೆ ಆಗಿ ನೋವು ಶಮನವಾಗುವುದು.

4. ತರಕಾರಿ ಜ್ಯೂಸ್

ತರಕಾರಿ ಜ್ಯೂಸ್-ನಲ್ಲಿ ಸಾಮಾನ್ಯವಾಗಿ ನಾರಿನಾಂಶವು ಅಧಿಕವಾಗಿರುವ ಆಹಾರ ಸೇವನೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಕ್ಯಾರೆಟ್, ಸೌತೆಕಾಯಿ, ಬೀಟ್ ರೂಟ್, ಕ್ರಾನ್ಬೇರಿ, ಮೂಲಂಗಿ, ಬಸಳೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ನೋವು ನಿವಾರಣೆ ಮಾಡುವುದು, ರಕ್ತವನ್ನು ನಿರ್ವಿಷಗೊಳಿಸುವುದ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಜೀರ್ಣಕ್ರಿಯೆನ್ನು ಸರಾಗವಾಗಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ತರಕಾರಿ ಜ್ಯೂಸ್ ಸೇರಿಸಿಕೊಂಡು ಅಪೆಂಡಿಕ್ಟಿಸ್ ನೋವಿನಿಂದ ಮುಕ್ತಿ ಪಡೆಯಿರಿ.

5. ಹೆಸರುಬೇಳೆ

Also read: ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮು ಕಫ ಸಮಸ್ಯೆಗಳಿಗೆ ಕೆಲವು ಸರಳವಾದ ಮನೆಮದ್ದುಗಳು ಇಲ್ಲಿವೆ ನೋಡಿ..

ಎಲ್ಲರ ಮನೆಯಲ್ಲಿ ಸಿಗುವ ಅಡುಗೆ ಪದರ್ಥವಾದ ಹೆಸರುಬೇಳೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದರಿಂದಾಗಿ ಇದು ಹೊಟ್ಟೆಗೆ ಶಮನ ನೀಡುವುದು. ಪ್ರತಿನಿತ್ಯ ಒಂದು ಚಮಚ ಹೆಸರುಬೇಳೆಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟು ಹಾಗೆ ಅಥವಾ ಬೇಯಿಸಿ ಸೇವಿಸಬೇಕು ಎಂದು ವೈದ್ಯರು ಮತ್ತು ಆಹಾರ ತಜ್ಞರು ಸಲಹೆ ನೀಡುವರು. ದಿನದಲ್ಲಿ ಮೂರು ಸಲ ನೀವು ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು.

6. ಜಿನ್ಸೆಂಗ್ ಟೀ

ಚೀನಾದಲ್ಲಿ ಸಿಗುವಂತಹ ಈ ಗಿಡಮೂಲಿಕೆಯಲ್ಲಿ ಸಾಪೊನಿನ್ಸ್ ಎನ್ನುವ ಅಂಶವಿದೆ. ಇದರಿಂದ ಇದು ಅದ್ಭುತವಾಗಿ ಅಪೆಂಡಿಕ್ಟಿಸ್ ನಿಂದ ಉಂಟಾಗುವ ನೋವು ಮತ್ತು ಉರಿಯೂತ ನಿವಾರಣೆ ಮಾಡುವುದು. ಕುದಿಯುವ ನೀರಿಗೆ 1-2 ಚಮಚ ಜಿನ್ಸೆಂಗ್ ಹಾಕಿರಿ ಮತ್ತು ಇದು ತಣ್ಣಗಾದ ಬಳಿಕ ಕುಡಿಯಿರಿ. ನೋವು ನಿವಾರಣೆ ಮಾಡಲು ದಿನದಲ್ಲಿ ಎರಡು ಸಲ ನೀವು ಇದನ್ನು ಕುಡಿಯಿರಿ.

7. ಅರಿಶಿನ

ನೈಸರ್ಗಿಕವಾಗಿ ಉರಿಯೂತ ಶಮನಕಾರಿ ಗುಣ ಹೊಂದಿರುವ ಅರಶಿನವು ಅಪೆಂಡಿಕ್ಟಿಸ್ ನ ಉರಿಯೂತವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಉತ್ತಮ ಫಲಿತಾಂಶಕ್ಕಾಗಿ ಅರಶಿನ ಹುಡಿಯನ್ನು ಶುಂಠಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ.

8. ಬೆಳ್ಳುಳ್ಳಿ

ಅಪೆಂಡಿಕ್ಟಿಸ್ ಗೆ ಬೆಳ್ಳುಳ್ಳಿಯು ಒಳ್ಳೆಯ ಮನೆಮದ್ದು ಆಗಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ನೋವು ನಿವಾರಣೆ ಮಾಡುವುದು. ಬಿಸಿ ನೀರಿಗೆ ಜಜ್ಜಿರುವ ಬೆಳ್ಳುಳ್ಳಿ ಎಸಲುಗಳನ್ನು ಹಾಕಿ ಮತ್ತು ಪ್ರತಿನಿತ್ಯ ಬೆಳಗ್ಗೆ ಕುಡಿಯಿರಿ.

Also read: ನಿಮ್ಮ ಬಾಯಿಹುಣ್ಣು ನಿವಾರಿಸುವ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಮನೆಮದ್ದುಗಳು…!