ಮಕ್ಕಳಲ್ಲಿ ಸಾಯುವಂತ ಬಾಧೆ ನೀಡುವ ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭ ಮನೆಮದ್ದುಗಳು..

0
671

ಜಂತು ಹುಳುಗಳು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ಮಕ್ಕಳಲ್ಲಿ ಹಲವು ಅರೋಗ್ಯ ಸಮಸ್ಯೆಗಳು ಕಂಡು ಬರುತ್ತೇವೆ. ಕೆಲವು ವೇಳೆ ಇಂತಹ ಸಮಸ್ಯೆಗಳು ದೊಡ್ದವರಲ್ಲಿವೂ ಕಂಡು ಬಂದರು ಆಶ್ಚರ್ಯವಿಲ್ಲ. ಇದರಿಂದ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ. ಜಂತು ಹುಳು ಜಾಸ್ತಿ ಬೇಗನೆ ಬೆಳೆಯುತ್ತೇವೆ. ಇದಕ್ಕೆ ಕೆಲವು ಬಾರಿ ಔಷಧಿಯನ್ನು ನೀಡಿದರು ಪುನಃ ಮತ್ತೆ ಬೆಳೆಯುತ್ತೇವೆ. ಹೊಟ್ಟೆಯಲ್ಲಿ ತಳಮಳಿಸುವುದರ ಜೊತೆಗೆ ತಿಂದ ಆಹಾರದಲ್ಲಿ ಅರ್ಧ ಆಹಾರವನ್ನು ಇವುಗಳೇ ತಿನ್ನುತ್ತೇವೆ. ಇಂತಹ ಸಮಸ್ಯೆಗಳು ನಿಮ್ಮಲ್ಲಿ, ನಿಮ್ಮ ಮಕ್ಕಳಲ್ಲಿ ಕಂಡು ಬಂದರೆ ಅವುಗಳಿಗಾಗಿ ಈ ಮನೆಮದ್ದು ಉಪಯೋಗಿಸಿ ನೋಡಿ.

Also read: ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಮನೆಮದ್ದುಗಳು; ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವ ಮುನ್ನ ಒಮ್ಮೆ ಹೀಗೆ ಮಾಡಿ ನೋಡಿ..

ತೆಂಗಿನಕಾಯಿ ಚಿಕಿತ್ಸೆ:

ಹಸಿ ಕೊಬ್ಬರಿ: ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ 100 ಗ್ರಾಂ ಹಸಿ ತೆಂಗಿನಕಾಯಿ ತುರಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಹಾಗೆಯೇ ಸೇವಿಸಬೇಕು. ಎರಡು ಘಂಟೆಗಳ ನಂತರ ಒಂದು ಲೋಟ ಬಿಸಿಹಾಲಿಗೆ ಎರಡು ಚಮಚ ಹರಳೆಣ್ಣೆ ಹಾಕಿ ಸೇವಿಸಬೇಕು. ಜೊತೆಗೆ ದಿನನಿತ್ಯ ಎರಡು ಚಮಚಗಳಷ್ಟು ತೆಂಗಿನೆಣ್ಣೆಯನ್ನು ಸೇವಿಸಬೇಕು. ಇದರಲ್ಲಿರುವ ಲಾರಿಕ್ ಆಮ್ಲವು ತಾಯಿಯ ಹಾಲಿನಲ್ಲಿ ಇರುವಂಥದ್ದು. ಇದೂ ಜಂತುಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.

ಬೇವಿನ ಚಿಕಿತ್ಸೆ:

ಬೇವಿನ ಚಿಗುರಿಗೆ ಸ್ವಲ್ಪ ಅಜವಾನ/ಓಮಕಾಳನ್ನು ಬೆರೆಸಿ ಸ್ವಲ್ಪ ಜೇನುತುಪ್ಪದೊಂದಿಗೆ ಮಕ್ಕಳಿಗೆ ತಿನ್ನಿಸಿದರೆ ಕ್ರಿಮಿಬಾಧೆ ಕಡಿಮೆಯಾಗುತ್ತದೆ. ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ 10-15 ಲವಂಗಗಳನ್ನು ಹಾಕಿ ಅದನ್ನು 10 ನಿಮಿಷ ಮುಚ್ಚಿಟ್ಟು ನಂತರ ತಾಜಾ ಇರುವಾಗಲೇ ಸೇವಿಸಬೇಕು. ಒಂದು ವಾರ ಸೇವಿಸಿ. ದಿನನಿತ್ಯ ಎರಡು ಬಾರಿ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿಣದ ಕೊಂಬಿನ ಪುಡಿಯನ್ನು ಹಾಕಿ ಸೇವಿಸಬೇಕು.

ಪಪ್ಪಾಯಿ ಬೀಜ:

ಒಣಗಿಸಿದ 6-7 ಪಪ್ಪಾಯಿ ಬೀಜಗಳನ್ನು ತೆಗೆದುಕೊಂಡು ಪುಡಿ ಮಾಡಿ ದಿನನಿತ್ಯ ಒಂದು ವಾರದವರೆಗೆ ಸೇವಿಸಬೇಕು. ಜೊತೆಗೆ ಪಪ್ಪಾಯಿ ಕಾಯಿಯ ರಸವನ್ನೂ 2-3 ಚಮಚಗಳಷ್ಟು ಸೇವಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಗೆ ಚೆನ್ನಾಗಿ ತೊಳೆದು ತುರಿದಿರುವ ಕ್ಯಾರೆಟ್​ಗಳನ್ನು ಸೇವಿಸಿ.

Also read: ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳು ತುಂಬಾ ನೋವನ್ನುಂಟು ಮಾಡುತ್ತವೆ, ಈ ಮನೆಮದ್ದುಗಳನ್ನು ಪಾಲಿಸಿ ಕಿಡ್ನಿ ಕಲ್ಲುಗಳಿಂದ ಮುಕ್ತಿ ಹೊಂದಿ!!

ಬೆಳ್ಳುಳ್ಳಿ, ಈರುಳ್ಳಿ ರಸ:

5-6 ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಸೇವಿಸಬೇಕು. ಈರುಳ್ಳಿ ರಸವನ್ನು ಜೇನುತುಪ್ಪದ ಜೊತೆ ಸೇವಿಸುವುದರಿಂದಲೂ ಕ್ರಿಮಿಬಾಧೆ ಕಡಿಮೆಯಾಗುತ್ತದೆ. ದಿನಕ್ಕೆ 3-4 ಬಾರಿ ನಿಂಬೆ ರಸವನ್ನು ಸೇವಿಸುತ್ತಾ ಬಂದರೆ ಕ್ರಿಮಿಬಾಧೆ ನಿವಾರಣೆಯಾಗುತ್ತದೆ.

ಹಾಗಲಕಾಯಿ ರಸ:

ದಿನನಿತ್ಯ 4-5 ಚಮಚ ಹಾಗಲಕಾಯಿ ರಸ ಮತ್ತು ಒಂದು ಲೋಟ ಮಜ್ಜಿಗೆಯನ್ನು ಖಾಲಿ ಹೊಟ್ಟೆಯಲ್ಲಿ ಏಳು ದಿನಗಳವರೆಗೆ ಸೇವಿಸಬೇಕು. ಸಿಹಿ ಕುಂಬಳಕಾಯಿ ಬೀಜಗಳನ್ನು ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಸೇವಿಸಬೇಕು. ದಿನಕ್ಕೆ 3-5 ಲೀಟರ್​ವರೆಗೆ ಶುದ್ಧ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಯಾವುದೇ ತರಕಾರಿ ಹಣ್ಣುಗಳನ್ನು ಸೇವಿಸುವ ಮುನ್ನ ಅವುಗಳನ್ನು ಉಗುರುಬೆಚ್ಚಗಿನ ಉಪ್ಪುನೀರಿನಲ್ಲಿ ನೆನೆಸಿಟ್ಟು ನಂತರ ತೊಳೆದು ಬಳಸಬೇಕು.

ಆಡುಸೋಗೆ ಸೊಪ್ಪು:

ಈ ಸೊಪ್ಪಿನ ಹೂವುಗಳ ಕಷಾಯದ ಸೇವನೆಯಿಂದ ಕ್ರಿಮಿಬಾಧೆ ಕಡಿಮೆಯಾಗುತ್ತದೆ. 5-6 ದಿನ ಕೇವಲ ಹಣ್ಣು ತರಕಾರಿಗಳ ಸೇವನೆ ಹಾಗೂ ಏಳನೆಯ ದಿನ ಎನಿಮಾ ಚಿಕಿತ್ಸೆ (ಇದರಲ್ಲಿ ಗುದದ್ವಾರದಲ್ಲಿ ನಳಿಕೆಯ ಮುಖಾಂತರ ಶುದ್ಧವಾದ ಬೆಚ್ಚಗಿನ ಕುಡಿಯುವ ನೀರನ್ನು ಹರಿಸಿ, ಒಳಗಡೆ ಹಿಡಿದುಕೊಂಡು ಕೆಲವು ಕ್ಷಣಗಳ ನಂತರ ತೆಳುವಾದ ಮಲವನ್ನು ದೇಹದಿಂದ ಹೊರಹಾಕುವ ಸುಲಭ ಚಿಕಿತ್ಸೆ. ಮೊದಲು ತಜ್ಞರಿಂದ ಚಿಕಿತ್ಸೆ ಪಡೆದುಕೊಂಡು ನಂತರ ಸ್ವತಃ ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸೆ.)

ದೇಹದ ಸ್ವಚ್ಛತೆ ಕಾಪಾಡುವುದು:

ಬರಿಗಾಲಿನಲ್ಲಿ ಕೊಳಚೆ/ ಕೆಸರು ಇರುವ ಜಾಗಗಳಲ್ಲಿ ಅಡ್ಡಾಡಬಾರದು, ಕೊಕ್ಕೆ ಹುಳುಗಳು ಚರ್ಮದ ಮೂಲಕ ದೇಹ ಸೇರುತ್ತವೆ. ಶೌಚಾಲಯದ ಉಪಯೋಗದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಮುಖ್ಯವಾಗಿ ಆಹಾರ ತಯಾರಿಸುವವರ ಕೈ ಶುದ್ಧವಾಗಿರಬೇಕು. ಪ್ರತಿ ಬಾರಿ ಆಹಾರ ಸೇವನೆಯ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

Also read: ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗಬಹುದು, ಈ ಮನೆಮದ್ದುಗಳನ್ನು ಪಾಲಿಸಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ!!

ಮೂರು ಚಮಚ ಬಿಲ್ವ ಪತ್ರೆ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮೂರು ವಾರ ಸೇವಿಸಿದರೆ ಹುಳಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಅರ್ಧ ಚಮಚ ಓಂ ಕಾಳನ್ನು 4 ಚಮಚ ಗೋಮೂತ್ರಕ್ಕೆ ಸೇರಿಸಿ ಕುಡಿದರೆ ಹೊಟ್ಟೆಹುಳು ಕಡಿಮೆಯಾಗುತ್ತದೆ. ಒಂದರಿಂದ ಎರಡು ಚಿಟಿಕೆ ಬಜೆ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರು ನಿವಾರಣೆಯಾಗುತ್ತೆ. ಬೂದುಗುಂಬಳಕಾಯಿ ಬೀಜದ ಪುಡಿ ಸೇರಿಸಿ ಸೇವಿಸಿದರೆ ಹುಳು ನಿವಾರಣೆಯಾಗುತ್ತದೆ.