ಗರ್ಭಿಣಿಯರೇ ಹೊಟ್ಟೆತೊಳಸುವಿಕೆ ಮತ್ತು ವಾಂತಿಯಿಂದ ನರಳುತ್ತಿದ್ದೀರಾ..ಇಲ್ಲಿದೆ ಅದಕ್ಕೆ ಆಯುರ್ವೇದ ಪರಿಹಾರ..

0
948

ಹೊಟ್ಟೆ ತೊಳಸುವಿಕೆಗೆ:

-ಬಿಳಿ ಸೇವಂತಿಗೆ ಹೂವಿನಿಂದ ಅರ್ಧ ಅಂಶ ಕಷಾಯ ಮಾಡಿ, ಕಷಾಯವು ತಣ್ಣಗಾದ ಮೇಲೆ ಜೇನುತುಪ್ಪ ಸೇರಿಸಿ ದಿನಕ್ಕೆ ೨ ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

-ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡು ರಸವನ್ನು ನುಂಗಿದರೆ ಹೊಟ್ಟೆ ತೊಳಸುವುದು ನಿಲ್ಲುವುದು.

-ಜೀರಿಗೆ ಧನಿಯಾ, ನೆಲ್ಲಿ ಚೆಟ್ಟು ಎಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ೧೦ ಗ್ರಾಂನಷ್ಟು ಒಂದ ಲೋಟ ಹಾಲಿಗೆ ಸ್ವಲ್ಪ ಸಕ್ಕರೆ ಬೆರೆಸಿ ದಿನಕ್ಕೆ ೨ ರಿಂದ ೩ ಬಾರಿ ತೆಗೆದುಕೊಳ್ಳಬೇಕು.

-ಅರ್ಧ ಚಮಚ ಹುರಿದ ಜೀರಿಗೆಯ ಪುಡಿಯನ್ನು ನೀರಿನಲ್ಲಿ ಅಥವಾ ಹುಳಿ ಇಲ್ಲದ ಮಜ್ಜಿಗೆಯಲ್ಲಿ ಸೇವಿಸಬೇಕು.

-ಧನಿಯಾ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿಟ್ಟುಸ್ವಲ್ಪ ಸಮಯದ ನಂತರ ತಿಳಿಯನ್ನು ಸೇವಿಸಬೇಕು.

ವಾಂತಿ ನಿಲ್ಲಲು:

-ಒಂದು ಮುಷ್ಠಿ ನುಗ್ಗೆ ಹೂವಿಗೆ ಸ್ವಲ್ಪ ಬೆಲ್ಲ ಮತ್ತು ಏಲಕ್ಕಿ ಸೇರಿದಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು.ಅರ್ಧ ಅಂಶ ಕಷಾಯವನ್ನು ಮಾಡಿ ಶೋಧಿಸಿ ಆರು ಚಮಚದಷ್ಟು ದಿನಕ್ಕೆ ಎರಡು0 ಬಾರಿಯಂತೆ ಕುಡಿಯಬೇಕು.

-ನೇರಳೆ ಹಣ್ಣಿನ ಶರಬತ್ತನ್ನು ದಿನಕ್ಕೆ ನಾಲ್ಕು ಬಾರಿ ಸೇವಿಸುವುದರಿಂದ ವಾಂತಿ ಹಾಗು ಸುಸ್ತು ಕಡಿಮೆಯಾಗುತ್ತದೆ.

-ಏಲಕ್ಕಿಯ ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಬೇಕು.

-ಸೊಗದೆ ಬೇರಿನ ಕಷಾಯಮಾಡಿ ಒಂದು ಲೋಟ ಕಷಾಯಕ್ಕೆ ಅರ್ಧ ಚಮಚ ಲಾವಂಚ ಬೇರಿನ ಪುಡಿಯನ್ನು ಸೇರಿಸಿ ಕುಡಿಯಬೇಕು.

-ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಸೋಸಿದ ನೀರನ್ನು ಸಕ್ಕರೆಯೊಂದಿಗೆ ಕುಡಿಯಬೇಕು.

-ಖಾಲಿ ಹೊಟ್ಟೆಯಲ್ಲಿ ಹಸಿ ಶುಂಠಿಯ ೧೦-೧೫ ಹನಿರಸ ಒಂದು ಚಮಚ ಜೇನು ತುಪ್ಪದಲ್ಲಿ ಸೇವಿಸಬೇಕು.

– ಕೊತ್ತಂಬರಿ,ಜೀರಿಗೆ,ನೆಲ್ಲಿ ಚೆಟ್ಟು ಇವುಗಳನ್ನು ಕುಟ್ಟಿ ಕಷಾಯ ಮಾಡಿ ಹಾಲು ಮತ್ತು ಸಕ್ಕರೆ ಸೇರಿಸಿ ದಿನಕ್ಕೆ ೨ ಸಲ ಸೇವಿಸಬೇಕು.

-ದಾಳಿಂಬೆ ರಸಕ್ಕೆ ಸ್ವಲ್ಪ ಲವಂಗದ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.

ತಲೆ ಸುತ್ತಿಗೆ:

-ಹಸುವಿನ ಹಾಲಿಗೆ ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಬೇಕು.

-ಜೀರಿಗೆ ಮತ್ತು ಧನಿಯಾ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅರ್ಧ ಕಷಾಯ ಮಾಡಿ ಕುಡಿಯುವುದರಿಂದ ತಲೆಸುತ್ತು
ಕಡಿಮೆಯಾಗುತ್ತದೆ.

-ಏಲಕ್ಕಿಯನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಹಸುವಿನ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ತಲೆ ಸುತ್ತು ಕಡಿಮೆಯಾಗುತ್ತದೆ.

-ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಕಿವುಚಿ ಕುಡಿಯಬೇಕು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840