ಕೂದಲನ್ನು ಸುಂದರವಾಗಿಸಲು ದುಬಾರಿ ಹೇರ್ ಕಲರ್ ಮೊರೆ ಹೋಗೋ ಬದ್ಲು ಈ ಟಿಪ್ಸ್ ನ ಫಾಲೋ ಮಾಡಿ..!!

0
3875

Kannada News | Health tips in kannada

ಕೂದಲು ದೇಹದ ಸೌಂದರ್ಯವನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಗಾಢ ಕಪ್ಪು ಬಣ್ಣದ ರೇಶಿಮೆಯ ಹೊಳಪಿನ ಕೂದಲು ಈಗಿನ ಹೆಣ್ಣುಮಕ್ಕಳಿಗೆ ಬಹುಪ್ರಿಯ. ಇದಕ್ಕಾಗಿ ಹುಣ್ಣುಮಕ್ಕಳು ಕೂದಲುಗಳಿಗೆ ಬಣ್ಣ ಹಚ್ಚಿ ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಬಯಸುತ್ತಾರೆ. ಹಾಗೆ ಬಯಸುವ ವಿಧಾನಗಳಲ್ಲಿ ರಾಸಾಯನಿಕ ಯುಕ್ತ ಕೂದಲಿನ ಬಣ್ಣಗಳನ್ನು ಆಶ್ರಯಿಸುವುದಕ್ಕಿಂತ ಹೆಚ್ಚಾಗಿ, ನೈಸರ್ಗಿಕ ಪದಾರ್ಥಗಳನ್ನು ಆರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಹಲವರಿಗೆ ಗಾಢ ಕಪ್ಪು ಕೂದಲಿನ ಬಣ್ಣ ಇಷ್ಟವಾದರೆ, ಮತ್ತೆ ಕೆಲವರಿಗೆ ಕಂದು ಬಣ್ಣ, ಇನ್ನು ಕೆಲವರಿಗೆ ಕೆಂಪು ಬಣ್ಣ, ಬಂಗಾರದ ಬಣ್ಣ ಇತ್ಯಾದಿ!

ಹಾಗೆ ಕಾಫಿ, ಚಹಾ, ಗೋರಂಟಿ ಮತ್ತು ಇಂಡಿಗೋ ಮುಂತಾದ ಕೆಲವು ಗಿಡಮೂಲಿಕೆಗಳನ್ನು ಕಂದು ಬಣ್ಣ ಕೂದಲಿಗಾಗಿ ವಾರಕ್ಕೆ ಒಂದು ಸಲ ಬಳಸಿದರೆ ಸಾಕು ನಿಮ್ಮ ಕೂದಲು ಕಂದು ಬಣ್ಣಕ್ಕೆ ಬಂದು ಹೊಳಪಾಗಿ ಕಾಣುವುದು. ಅಷ್ಟೇ ಅಲ್ಲ ಇವುಗಳು ನೈಸರ್ಗಿಕವಾಗಿರುವುದರಿಂದ ಇವುಗಳನ್ನು ಬಳಸುವುದರೊಂದಿಗೆ ಅಡ್ಡಪರಿಣಾಮಗಳಿಲ್ಲ.

ನಿಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ ಮತ್ತು ಸುರಕ್ಷಿತ ಮಾರ್ಗಗಳು

ಹೆನ್ನಾ
ಹೆನ್ನಾ ಪುಡಿಗೆ (ಒಂದು ಭಾಗ) ಅದರ ಅರ್ಧದಷ್ಟು ನೆಲ್ಲಿಕಾಯಿ ಪುಡಿ ಬೆರೆಸಿ ಮೊಸರಿನಲ್ಲಿ ಕಲಸಿ ಇಡಬೇಕು. ಇದಕ್ಕೆ ಚಹಾದ ಡಿಕಾಕ್ಷನ್‌ ಬೆರೆಸಬೇಕು. ಇದಕ್ಕೆ ಲವಂಗದ ಪುಡಿ ಬೆರೆಸಿದರೆ ರಂಗು ಮತ್ತಷ್ಟು ಗಾಢವಾಗುತ್ತದೆ. ರಾತ್ರಿ ಬೆರೆಸಿಟ್ಟು ಮರುದಿನ ಕೂದಲಿಗೆ ಚೆನ್ನಾಗಿ ಲೇಪಿಸಿ ಹೇರ್‌ಪ್ಯಾಕ್‌ ಮಾಡಬೇಕು. 2-3 ಗಂಟೆಗಳ ಬಳಿಕ ಕೂದಲು ತೊಳೆದರೆ ಕೂದಲು ಕಪ್ಪು/ಕಂದು ಬಣ್ಣದಿಂದ ಹೊಳೆಯುವುದು ಮಾತ್ರವಲ್ಲ ರೇಶಿಮೆಯ ಹೊಳಪು ಮತ್ತು ಮೃದುತ್ವ ಪಡೆಯುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಹಿತಕರ, ಕಂಗಳಿಗೂ ದೇಹಕ್ಕೂ ತಂಪು. ವಾರಕ್ಕೊಮ್ಮೆ ಬಳಸಿದರೆ ಉತ್ತಮ.

ರೋಸ್‌ಮೇರಿ ಎಲೆ
1/4 ಕಪ್‌ ರೋಸ್‌ಮೇರಿ ಎಲೆ, 1/4 ಕಪ್‌ ಸೇಜ್‌ ಎಲೆಗಳು-ಇವುಗಳನ್ನು 2 ಕಪ್‌ ನೀರಿನಲ್ಲಿ ಸಣ್ಣನೆಯ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಆರಿದ ಬಳಿಕ ನೀರು ಸೋಸಿ, ಫ್ರಿಜ್‌ನಲ್ಲಿಡಬೇಕು. ತದನಂತರ ಇದಕ್ಕೆ 1/2 ಕಪ್‌ ದಪ್ಪ ಕಾಫಿ ಡಿಕಾಕ್ಷನ್‌ ಬೆರೆಸಬೇಕು. ಇದನ್ನು ಕೂದಲಿಗೆ ಲೇಪಿಸಿ 15 ನಿಮಿಷಗಳ ಬಳಿಕ ಕೂದಲನ್ನು ತೊಳೆಯಬೇಕು. ಹಾಗೂ ಕೊನೆಯಲ್ಲಿ ಈ ಮೂಲಿಕೆಗಳ ನೀರಿನಿಂದ ಕೂದಲು ರಿನ್ಸ್‌ ಮಾಡಿದರೆ ಕೂದಲು ಗಾಢ ಕಂದು ಬಣ್ಣ ಪಡೆಯುತ್ತದೆ.

watch :

ಕಾಫಿ
ಚಹಾ ಮತ್ತು ಕಾಫಿ ಮಿಶ್ರಣದಿಂದ ಕೂದಲಿಗೆ ಕಂದು ಬಣ್ಣ ಬರುತ್ತದೆ. ಸ್ವಲ್ಪ ನೀರಿಗೆ ಚಹಾ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿ ಅದು ಬಿಸಿಯಿರುವಾಗಲೇ ಕೂದಲಿಗೆ ಹಚ್ಚಿಕೊಳ್ಳಿ. ಅಥವಾ ಕಾಫಿ ಪುಡಿಯನ್ನು ನೀರಿನಲ್ಲಿ ಕುದಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು ಅಥವಾ ಕಾಫಿ ತರಿಯನ್ನು ಹೇರ್ ಕಂಡೀಷನಿಂಗ್‌ಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬಹುದು.

ಗಿಡಮೂಲಿಕೆಗಳು
ಬೂದು ಕೂದಲನ್ನು ಕೆಂಪು ಬಣ್ಣಕ್ಕೆ ತಿರುಗಿಸಲು: ಕ್ಯಾಲೆಡುಲ, ಮಾರಿಗೋಲ್ಡ್, ಗುಲಾಬಿಗಿಡಗಳು ಮತ್ತು ದಾಸವಾಳ ಗಿಡಮೂಲಿಕೆಗಳನ್ನು ಬೇಯಿಸಿ ನಂತರ ಅದು ತಂಪಾದ ನಂತರ ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಿರಿ.

ಇಂಡಿಗೋ
ಬಿಳಿ ಬಣ್ಣದ ಕೂದಲನ್ನು ಹೊಂದಿರುವವರು ಕಪ್ಪು ಬಣ್ಣದ ಕೂದಲು ಪಡೆಯಲು ನೀಲಿ ಅಥವಾ ಇಂಡಿಗೋ ಗಿಡದ ಎಲೆಯ ರಸ, ಹೆನ್ನಾಪುಡಿ, ಗರುಗದ ರಸ (ಕಾಡಿಗ್ಗರುಗ)ದ ರಸ ಬೆರೆಸಿ ಕೂದಲಿಗೆ ಲೇಪಿಸಿ ಎರಡು ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ಕೂದಲು ತೊಳೆದರೆ ಕೂದಲು ಕಪ್ಪು ಬಣ್ಣ ಪಡೆಯುತ್ತದೆ.

Also Read: ಮಜ್ಜಿಗೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಅನುಕೂಲಗಳು ಆಗುತ್ತೆ ಅಂತ ಗೊತ್ತಾದ್ರೆ, ದಿನಾಗ್ಲೂ ಮರಿದೇ ಕುಡಿಯಲು ಶುರು ಮಾಡ್ತೀರ..