ಪ್ರಕೃತಿ ಚಿಕಿತ್ಸೆಯ ಈ ವಿಧಾನಗಳನ್ನು ಪಾಲಿಸಿದರೆ ಹೆಚ್ಚು ಕಾಲ ಆರೋಗ್ಯದಿಂದ ಬಾಳುತೀರಿ!!

0
1900

ಇನ್ನೂ ಹತ್ತು ವರ್ಷ ಹೆಚ್ಚು ಬದುಕಬೇಕಾ?
ವ್ಯಕ್ತಿ ತನ್ನ ಜೀವನ ಕ್ರಮದಲ್ಲಿ ಕೆಲ ಬದಲಾವಣೆಯನ್ನು ತಂದುಕೊಂಡರೆ ಈಗಿರುವ ವಯೋಮಾನಕ್ಕಿಂತ ಹತ್ತು ವರ್ಷ ಹೆಚ್ಚೇ ಬದುಕಬಹುದು ಎನ್ನುತ್ತದೆ ಹೊಸ ಸಂಶೋಧನೆ. ವ್ಯಕ್ತಿ ಮದ್ಯವ್ಯಸನ, ಧೂಮಪಾನ ಇನ್ನಿತರ ಯಾವುದೇ ಚಟ ಹೊಂದಿದ್ದರೂ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅವನ್ನೆಲ್ಲ ಬಿಟ್ಟು ಉತ್ತಮ ಜೀವನಶೈಲಿಯನ್ನು ಬೆಳೆಸಿಕೊಂಡರೆ ಆರೋಗ್ಯ ಸುಧಾರಣೆ ಸಾಧ್ಯ ಎಂದಿದೆ ಈ ಸಂಶೋಧನೆ.

Image result for healthy indian
65 ವರ್ಷದ ವೃದ್ಧರೊಬ್ಬರ ಮೇಲೆ ಈ ಪ್ರಯೋಗ ಮಾಡಲಾಯಿತು. ಅವರು ಇನ್ನೂ 10ವರ್ಷ ಹೆಚ್ಚು ಬದುಕಬಲ್ಲಷ್ಟು ಆರೋಗ್ಯ ಪಡೆದದ್ದು ಸ್ಪಷ್ಟವಾಯಿತು. ಮದ್ಯಪಾನ ಮತ್ತು ಧೂಮಪಾನವನ್ನು ಕಡ್ಡಾಯವಾಗಿ ತ್ಯಜಿಸುವಂತೆ ಹೇಳಲಾಯಿತು. ಪ್ರತಿದಿನ ಬೆಳಗ್ಗೆ ಎದ್ದೊಡನೆ ಹತ್ತಿರದ ಉದ್ಯಾನವನಕ್ಕೆ ವಾಕಿಂಗ್ ಹೋಗುವುದನ್ನು ಕಡ್ಡಾಯವಾಗಿ ತ್ಯಜಿಸುವಂತೆ ಹೇಳಲಾಯಿತು. ಆದಷ್ಟು ಮನೆಯಲ್ಲೇ ತಯಾರಿಸಿದ ತಿನಿಸುಗಳನ್ನೇ ತಿನ್ನುವಂತೆ ಸಲಹೆ ನೀಡಲಾಯಿತು. ಪ್ರತಿದಿನವೂ ಮನೆಯ ಜನರೊಂದಿಗೆ ಖುಷಿಯಿಂದ ಬೆರೆಯುವುದಲ್ಲದೆ, ಮೊಮ್ಮಕ್ಕಳೊಟ್ಟಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮಾನಸಿಕವಾಗಿಯೂ ವ್ಯಕ್ತಿ ಲವಲವಿಕೆಯಿಂದ ಇರುವುದು ಕಂಡುಬಂತು. ಒಂದಷ್ಟು ಸಮಯ ಧ್ಯಾನ, ಸರಳ ಯೋಗಾಸನಗಳನ್ನು ಮಾಡುವಂತೆ ಸೂಚಿಸಲಾಯಿತು. ಇವೆಲ್ಲವೂ ದಿನೇ ದಿನೇ ಅವರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರತೊಡಗಿದವು.

Image result for walking indian

65 ವರ್ಷದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಇನ್ನೂ ಹತ್ತು ವರ್ಷ ಯಾವ ಸಮಸ್ಯೆಯೂ ಇಲ್ಲದೆ ಬದುಕಬಲ್ಲ ಎಂಬುದೀಗ ದೃಢವಾಗಿದೆ. ವಿದ್ಯಾರ್ಥಿ ಹಂತದಿಂದಲೇ ಮಕ್ಕಳಿಗೆ ನಿಯಮಿತ ವ್ಯಾಯಾಮ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವದರಿಂದ ಮಕ್ಕಳು ಉತ್ತಮ ಆರೋಗ್ಯ ಮತ್ತು ಚೈತನ್ಯ ಶೀಲರಾಗುತ್ತಾರೆ. ದೇಹ ದಂಡನೆಯಿಂದ ಸದೃಢ ಆರೋಗ್ಯ ಪಡೆಯಬಹುದು. ಜಡವಾಗಿ ಕುಳಿತಾಗ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ನಮ್ಮ ದೇಹವನ್ನು ದಂಡಿಸಬೇಕು. ಆಲೋಚನೆಗಳು ಸಕಾರತ್ಮಾಕವಾಗಿ ಇದ್ದರೆ ಆರೋಗ್ಯ ಉತ್ತಮವಾಗಿರುತ್ತದೆ.

Image result for ayurveda

ಪಾರಂಪರಿಕ ವೈದ್ಯ ಪದ್ದತಿ ಪಶು ವೈದ್ಯದಲ್ಲಿ ಇಂದಿಗೂ ಬಳಕೆಯಲ್ಲಿದೆ. ಮನೆ ಮದ್ದು ಆರೋಗ್ಯಕ್ಕೆ ಸಹಕಾರಿ. ಮಧುಮೇಹ ನಿಯಂತ್ರಣ ನಮ್ಮ ಕೈಯಲ್ಲಿದೆ. ಮಿತ ಭೋಜನ, ಮಿತ ನಿದ್ರೆಯಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಆಧುನಿಕ ಸವಲತ್ತುಗಳು ಹೆಚ್ಚಾದಂತೆ ದೇಹ ದಂಡನೆ ಕಡಿಮೆಯಾಗುತ್ತದೆ. ಶ್ರಮರಹಿತ ಜೀವನದಿಂದ ಮಧುಮೇಹ ಹೆಚ್ಚಾಗುತ್ತದೆ. ಆಧುನಿಕ ಸಲಕರಣೆಗಳ ಉಪಯೋಗಿಸಿ ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಆಹಾರ, ಜೀವನ ಶೈಲಿ ಬದಲಾಣೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ. ಮಾನಸಿಕ ಒತ್ತಡದಿಂದಲೂ ಮಧುಮೇಹ ಬರುತ್ತದೆ. ಅದಕ್ಕಾಗಿ ಯೋಗ, ಧ್ಯಾನ ಮಾಡಬೇಕು.