ರಮ್ಯಾ ನಂತರ ಸಿನೆಮದವರು ಟ್ರೋಲ್ ಆದ ಸಾಲಿಗೆ ಸೇರಿದ ಜಗ್ಗೇಶ್, ಕಾರಣ ಏನು ಗೊತ್ತಾ?

0
316

ಪ್ರಧಾನಿ ಮೋದಿಯವರನ್ನು ಕೆಣಕುತ ಜನರಿಂದ ಒಂದಿಲ್ಲದೊಂದು ವ್ಯಂಗ್ಯ ಮಾತುಗಳಿಗೆ ಗುರಿಯಾಗುತ್ತಿರುವ ರಮ್ಯಾ ಸುಮ್ಮನೆ ಕೆರದು ಹುಣ್ಣು ಮಾಡಿಕೊಳ್ಳುತ್ತಿದ್ದಾಳೆ. ಟ್ವೀಟ್ ಮೂಲಕ ಮೋದಿಯವರಿಗೆ ವಿರುದ್ದವಾಗಿ ನೇರವಾಗಿ ಟ್ವೀಟ್ ಮಾಡಿ ಹಲವು ಬಾರಿ ಚಿಮಾರಿ ಹಾಕಿಸಿಕೊಂಡ ಸಿನಿಮಾ ಸುಂದರಿ ರಮ್ಯಾ ವಿರುದ್ದ ಸಿನಿಮಾ ನಟ ಬುಲೆಟ್ ಪ್ರಕಾಶರವರು ಕೂಡ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತ ಪಡಿಸಿ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರ ಈ ಟ್ವೀಟ್ ಗೆ ನವರಸನಾಯಕ ಜಗ್ಗೇಶ್ ಕೂಡ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು. ಈಗ ಜಗ್ಗೇಶ್ ರವರ ಟ್ವೀಟ್ ಗೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.

Also read: ಮೋದಿ ವಿರುದ್ಧ ಬರೆದು ಹಲವು ಬಾರಿ ಟ್ವಿಟ್ಟರ್ನಲ್ಲಿ ಛಿಮಾರಿ ಹಾಕಿಸಿಕೊಂಡಿದ್ದರೂ ಬುದ್ದಿ ಕಲಿಯದ ರಮ್ಯಾ ಇವಾಗ ಏನು ಬರೆದಿದ್ದಾರೆ ಗೊತ್ತಾ?

ರಮ್ಯಾ ಟ್ವೀಟ್ ಗೆ ನಟ ಬುಲೆಟ್ ಪ್ರಕಾಶರವರು ಟ್ವೀಟ್ ನಲ್ಲಿ ಏನಿದೆ.?

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ಪ್ರಧಾನಿ ‘ನರೇಂದ್ರ ಮೋದಿ ಮತ್ತು ಜರ್ಮನಿ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಚಿತ್ರಗಳನ್ನು ಹೋಲಿಸಿ ಟ್ವೀಟ್‌’ ಮಾಡಿ ಇದಕ್ಕೆ ನಿಮ್ಮ ಅನಿಸಿಕೆಗಳೇನು ಎಂದು ಪ್ರಶ್ನಿಸಿರುವಂಥಹ’ ಟ್ವೀಟ್ ಮಾಡಿದ್ದಕ್ಕೆ ಸಿನಿಮಾ ನಟ ಬುಲೆಟ್ ಪ್ರಕಾಶರವರು ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ.ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಟ್ವೀಟ್ ಮಾಡಿದ್ದರೆ.

ಬುಲೆಟ್ ಪ್ರಕಾಶ್ ಟ್ವೀಟ್ ಗೆ, ಜಗ್ಗೇಶ್ ಟ್ವೀಟ್ ನಲ್ಲಿ ಹೇಳಿದ್ದೇನು?

ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು, ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು, ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ, ಯತಃ ಜನನ ತಥಃ ಜೀವನ, ಅನುಕಂಪವಿರಲಿ ಅಂಥ ಮಕ್ಕಳಿಗೆ ಕಾರಣ ಮಾನಸಿಕ ವಿಕಲಚೇತರು ಅಂಥ ಮಕ್ಕಳು, ಇಂತ ಮಕ್ಕಳನ್ನು ನೋಡಿ ಸಂತೋಷಪಡುವ ಒಂದು ವರ್ಗವಿದೆ ದೌರ್ಭಾಗ್ಯ ಎಂದು ಟ್ವೀಟ್ ಮಾಡಿದ್ದರ.

ಟ್ರೋಲ್‌ ಮಾಡುವರಿಗೆ ಜಗ್ಗೇಶ್ ಹೇಳಿದ್ದೇನು..?

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, “ಈ ಅದ್ಭುತ ಜೀವನ ದೇವರು ನಿಮಗೂ ದಯಪಾಲಿಸಲಿ. 3 ಮಾಸ್ಟರ್ ಡಿಗ್ರಿ, ಸೈಂಟಿಸ್ಟ್ ಅಪ್ಪ-ಅಮ್ಮ, ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ. 13 ಲಕ್ಷ ಸಂಬಳ ತ್ಯಜಿಸಿ ಮಗನ ಪ್ರೀತಿಗಾಗಿ 2 ಲಕ್ಷ ಸಂಬಳಕ್ಕೆ ಬಂದು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ. ದೇವರು ಅವಳ ಯೋಗ, ಯೋಗ್ಯತೆ ನಿಮಗೂ ದಯಪಾಲಿಸಲಿ. ನಿಮ್ದೂ ಒಂದು ಜನ್ಮ ಎಂದು ಟ್ರೋಲ್‌ ಮಾಡುವರಿಗೆ ಟಾಂಗ್ ಕೊಟ್ಟಿದ್ದಾರೆ.