ನವರಾತ್ರಿ ಸಮಯದಲ್ಲಿ ಪೂಜೆ ಹೇಗೆ ಮಾಡ್ಬೇಕು ಅಂತ ಗೊತ್ತಾಗ್ತಿಲ್ವ? ನಾವ್ ಹೇಳ್ತಿವಿ ನೋಡಿ

0
1345

ನವರಾತ್ರಿಯ ನವದುರ್ಗಾ ಪೂಜಾ ವ್ರತವನ್ನು ಶರದ್ ಋತುವಿನ ಆಶ್ವೀಜಮಾಸದಂದು ಆಚರಿಸುತ್ತೇವೆ. ಆ ಒಂಭತ್ತು ದಿನದಲ್ಲಿ ಪಾಡ್ಯ ಅಂದರೆ ಮೊದಲನೆ ದಿನ ದೇವಿಯ ಮೂರ್ತಿ ಅಥವಾ ಕಲಶವನ್ನು ಸ್ಥಾಪನೆ ಮತ್ತು ಪೀಠವನ್ನು ತಯಾರಿಸಿ ತಾಯಿಯನ್ನು ಪ್ರತಿಸ್ಥಾಪಿಸಬೇಕು.

ಶ್ರದ್ದಾ ಭಕ್ತಿಯಿಂದ ಸ್ನಾನಾದಿ ಕ್ರಿಯೆಗಳನ್ನು ಮಾಡಿಕೊಂಡು ಕುಂಕುಮವನ್ನು ಧರಿಸಿ ಆಚಮನ, ಪ್ರಾಣಾಯಾಮಗಳನ್ನು ಮಾಡಿದ ಬಳಿಕ ಸರ್ವರಿಗೂ ಒಳ್ಳೆಯದಾಗಲಿ ಎಂದು ದೇವಿಯನ್ನು ನೆನೆಸಿಕೊಂಡು ಸಂಕಲ್ಪವನ್ನು ಮಾಡಬೇಕು ನಂತರ ದೀಪಪೂಜೆ, ಗಣಪತಿ ಪೂಜೆ, ಪೀಠಪೂಜೆ, ಪಂಚೋಪಚಾರ, ಷೋಡಶೋಪಚಾರ ಮತ್ತು ಅಷ್ಟೋತ್ತರದಿಂದ ದೇವಿಯ ಪೂಜೆಗಳನ್ನು ಮಾಡಬೇಕು. ಹೀಗೆ ಒಂಭತ್ತು ದಿನವು ನವಶಕ್ತಿಯರ ಪೂಜೆಯನ್ನು ಕ್ರಮವಾಗಿ ಮಾಡಬೇಕು.

ದೇವಿಗೆ ಒಂಭತ್ತುದಿನವು ಕೂಡ ಬೆಳಿಗ್ಗೆ ಸಂಜೆ ಪೂಜೆಗಳನ್ನು ಮಾಡಬೇಕು.

ಸಾತ್ವಿಕ ಪದಾರ್ಥಗಳನ್ನು ದೇವಿಯ ನೈವಿದ್ಯವಾಗಿ ಮಾಡಿ ನಂತರ ನೀವು ಫಲಹಾರ ಸೇವಿಸಬೇಕು.

ಒಂಭತ್ತು ದಿನ ದೇವಿಗೆ ಬಳಿಗ್ಗೆ ಸಂಜೆ ಭಜನೆ, ದುರ್ಗಾ ಸಪ್ತಶತಿ, ಲಲಿತಾ ಸಹಸ್ರನಾಮ ಅಷ್ಚೋತ್ತರಗಳನ್ನು ಪಠಿಸಬೇಕು.

ಸಾಧ್ಯವಾದರೆ ಪ್ರಸಾದವನ್ನು ಮಾಡಿ ಜನರಿಗೆ ಭಕ್ತಾಧಿಗಳಿಗೆ ಹಂಚಿದರೆ ಒಳ್ಳೆಯದು.

ಬಡವರಿಗೆ ಕೈಯಲ್ಲಿ ಸಾಧ್ಯವಾದಷ್ಟು ದಾನಧರ್ಮಗಳನ್ನು ಮಾಡಬೇಕು.

ದೇವಿಗೆ ಕೆಂಪು ಬಣ್ಣದ ವಸ್ತ್ರಗಳು ಮತ್ತು ಹೂವುಗಳನ್ನು ಅರ್ಪಿಸುವುದು ಒಳ್ಳೆಯದು.

ದೇವಿಗೆ ಪ್ರಿಯವಾದ ನಿಂಬೆ ಹಣ್ಣು ಅರ್ಪಿಸುವುದು.

ನಿಂಬೆ ಹಣ್ಣಿನ(108) ಹಾರವನ್ನು ದೇವಿಗೆ ಹಾಕುವುದು.

ನಿಂಬೆ ಹಣ್ಣಿನ ದೀಪವನ್ನು ದೇವಾಲಯಗಳಲ್ಲಿ ಹಚ್ಚುವುದರಿಂದ ಒಳ್ಳೆದಾಗುತ್ತದೆ.