ನವರಾತ್ರಿಯಲ್ಲಿ ಈ ವಿಶೇಷ ಪೂಜೆಗಳನ್ನು ಮಾಡಿದರೆ ಏನೆಲ್ಲಾ ಫಲ ಹೊಂದುತ್ತೀರಿ ಅಂತ ಗೊತ್ತಾದ್ರೆ ಈಗಲೇ ಶುರು ಮಾಡ್ತೀರಾ..!!

0
948

ಪ್ರತೀಯೊಬ್ಬರು ಆಚರಿಸುವ ಒಂದು ವಿಶಿಷ್ಟ ಮತ್ತು ಅದ್ದೂರಿಯಾದ ಹಬ್ಬವೆಂದರೆ ನವರಾತ್ರಿ ಅಥವಾ ಶರನ್ನವರಾತ್ರಿ ಎಂದು ಕರೆಯುತ್ತಾರೆ.

ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಸ್ತೋತ್ರ ಮಾಡಿಸಿಕೊಂಡಂಥ ದೇವಿಯನ್ನು ಈ ಲೋಕದಲ್ಲಿ ಜನರು ದುರ್ಗಾ, ಪಾರ್ವತಿ, ಲಕ್ಷ್ಮೀ, ಶಾರದಾ, ಅಂಬಿಕಾ, ಚಂಡಿಕಾ, ಶಂಕರಿ, ಪರಮೇಶ್ವರಿ, ನಾರಾಯಣಿ, ಭದ್ರಕಾಳಿ, ಚಾಮುಂಡೇಶ್ವರಿ ಮೊದಲಾದ ನಾಮಗಳಿಂದ ಅರಾಧನೆ ಮಾಡುವರು.

ದೇವಿಯನ್ನು ಆಶ್ವೀಜಮಾಸದ ಶುಕ್ಲ ಪಕ್ಷದಂದು ಪೂಜಿಸುವುದು ಬಹಳ ಶ್ರೇಷ್ಠ.

ವಿಶೇಷವಾಗಿ ಸಪ್ತಮಿ ಮೂಲ ನಕ್ಷತ್ರದಂದು ಸರಸ್ವತಿದೇವಿ ಪೂಜೆ, ಅಷ್ಟಮಿಯಂದು ದುರ್ಗಾ ದೇವಿ ಪೂಜೆ, ನವಮಿಯಂದು ಆಯುಧ ಪೂಜೆ ಮಾಡಬೇಕು. ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿ ವಿಜಯವಾದರಿಂದ ವಿಜಯದಶಮಿ ದಸರವನ್ನು ಆಚರಿಸಬೇಕು.

ಈ ಸಮಯದಲ್ಲಿ ದೇವಿಯನ್ನು ಪೂಜಿಸುವುದರಿಂದ ತಮ್ಮ ತಮ್ಮ ಪಾಪಗಳನ್ನು ಪರಿಹರಿಸಿಕೊಂಡು ಸರ್ವರೂ ಸುಖ, ಶಾಂತಿ, ಭೊಗಭಾಗ್ಯ, ಪುತ್ರ, ಪೌತ್ರ, ಮಿತ್ರ, ಕಳತ್ರರಿಂದೊಡನೆ ಗೂಡಿ ಧನ, ಧಾನ್ಯ, ಆಯುಷ್ಯ, ಆರೋಗ್ಯಾಧಿ ಸಮಸ್ತ ಅಪೇಕ್ಷೆಗಳು ಶೀರ್ಘವಾಗಿಯೂ ಮತ್ತು ಸಂಪೂರ್ಣವಾಗಿ ಫಲಪ್ರದವಾಗುವುದು.

ಮತ್ತು ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನತ್ವ, ಅಹಂಕಾರ ಈ ಹತ್ತು ಕೆಟ್ಟ ಗುಣಗಳನ್ನು ಬಿಟ್ಟು ದುರ್ಗಾ ಮಾತೆಯ ಆರಾಧನೆಯನ್ನು ಮಾಡಿದರೆ ತಾಯಿಯ ಕೃಪಾ ಕಟಾಕ್ಷ ದೊರೆಯುವುದರಲ್ಲಿ ಸಂಶಯವೇ ಇಲ್ಲ.

ಎನ್.ಶರತ್ ಶಾಸ್ತ್ರಿ
ಶೈವಾಗಮ, ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ  ಮೈಸೂರು
9845371416