ನವಿಲು ಕೋಸು ಪಲ್ಯ ನೀವು ಮಾಡಿ ನೋಡಿ..!

0
2319

ನವಿಲು ಕೋಸು ಪಲ್ಯ ಇದು ಸಹ ಹಲವು ಪಲ್ಯ ಗಳಲ್ಲಿ ಒಂದಾಗಿದ್ದು ಈ ಪಲ್ಯ ಹೇಗೆ ಮಾಡೋದು ಅಂತ ನಾವು ಹೇಳ್ತಿವಿ ಕೇಳಿ ಹಾಗೆ ನೀವು ಸ ಮಾಡಿ.
ಈ ಪಲ್ಯಗೆ ಬೇಕಾಗುವ ಸಾಮಗ್ರಿಗಳು:

Related image

ನವಿಲುಕೋಸಿನ ಗೆಡ್ಡೆ,

ಈರುಳ್ಳಿ,
ಟೊಮೊಟೊ,
ದನಿಯಾ ಪುಡಿ,
ಗರಂ ಮಸಾಲೆ,
ಮೆಣಸಿನ ಪುಡಿ,
ಎಣ್ಣೆ,
ಜೀರಿಗೆ,
ಅರಿಷಿಣ,
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು.

ಇನ್ನು ಈ ನವಿಲು ಕೋಸು ಪಲ್ಯ ಮಾಡುವ ವಿಧಾನ:

ನವಿಲುಕೋಸಿನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಕುಕ್ಕರಿನಲ್ಲಿ ಒಂದು ವಿಶಲ್‌ ಕೂಗಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಬೇಕು.

ಇದಾದ ನಂತರ ಅದಕ್ಕೆ ಹೆಚ್ಚಿದ ಟೊಮೊಟೊವನ್ನು ಹಾಕಿ ಬಾಡಿಸಬೇಕು. ತದನಂತರ ದನಿಯಾ ಪುಡಿ, ಮೆಣಸಿನ ಪುಡಿ, ಅರಿಷಿಣ, ಗರಂ ಮಸಾಲೆ ಪುಡಿ ಹಾಕಿ ಚನ್ನಗಿ ಬಾಡಿಸಿಕೊಳ್ಳಿ
ಇದಾದ ನಂತರ ಬೆಂದ ನವಿಲು ಕೋಸನ್ನು ಹಾಕಿ ಮಗುಚಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ .
ನವಿಲುಕೋಸು ಪಲ್ಯ ಸವಿಯಲು ಸಿದ್ದವಾಗಿರುತ್ತದೆ.