ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

0
436

ಲೋಕಸಭಾ ಚುನಾವಣೆ ದೇಶದ ತುಂಬೆಲ್ಲ ಚುರುಕ್ಕಾಗಿದ್ದು. ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಪ್ರಚಾರದ ಅಬ್ಬರ ಏರಿದ್ದು. ಮೋದಿ ಅಲೆ ಮತ್ತೆ ಬೀಸುವ ಸುಳಿವು ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ. ಇದೆಲ್ಲ ಬಾಲಕೋಟ್ ಮೇಲೆ ನಡೆದ ಏರ್ ಸ್ಟ್ರೈಕ್ ನಿಂದ ಮೋದಿ ಅಲೆ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದೇಶದಲ್ಲಿ ಭಾರೀ ಏರಿಕೆಯಾಗಿದೇ ಎಂದು ವಿವಿಧ ಸಮೀಕ್ಷೆಗಳು ತಿಳಿಸಿವೆ. ಅದರಂತೆ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

Also read: ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ ನಂತರ ಪ್ರಧಾನಿ ಆದ ಮೇಲೂ ಬೃಹತ್ ಆಸ್ತಿ ಮಾಡದ ಏಕೈಕ ಪ್ರಧಾನಿ ಅಂದ್ರೆ ಮೋದಿ ಅನ್ಸುತ್ತೆ; ಮೋದಿ ಆಸ್ತಿ ವಿವರ ನೋಡಿ ನಿಮ್ಗೆ ಗೊತ್ತಾಗುತ್ತೆ!!

ಹೌದು ಟೈಮ್ಸ್ ನೌ ವಾಹಿನಿಯ ಸಮೀಕ್ಷೆಯ ಪ್ರಕಾರ 2019 ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟ 283 ಸ್ಥಾನಗಳನ್ನು ಪಡೆದರೆ, ಯುಪಿಎ 135 ಹಾಗೂ ಇತರೇ 125 ಸ್ಥಾನಗಳು ಪಡೆಯಲಿದೆ. ಕಳೆದ ಬಾರಿಯ ಸಮೀಕ್ಷೆಗೆ ಹೋಲಿಕೆ ಮಾಡಿದ್ದಲ್ಲಿ ಎನ್‍ಡಿಎ ಒಕ್ಕೂಟಕ್ಕೆ 31 ಹೆಚ್ಚುವರಿ ಸ್ಥಾನ ಸಿಕ್ಕಿದೆ. ಈ ವರ್ಷದ ಜನವರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಎನ್‌ಡಿಎಗೆ 20-21 ಸ್ಥಾನಗಳ ಕೊರತೆಯಾಗಲಿವೆ ಎಂದು ಭವಿಷ್ಯ ನುಡಿದಿತ್ತು. ಆದರೆ ಮಧ್ಯಾಂತರ ಬಜೆಟ್‌ನಲ್ಲಿ ಸರಕಾರದ ಘೋಷಿಸಿದ ಕೆಲ ಜನಸ್ನೇಹಿ ಕ್ರಮಗಳು ಹಾಗೂ ಪುಲ್ವಾಮಾ ಉಗ್ರ ದಾಳಿಗೆ ಭಾರತ ಕೆಚ್ಚೆದೆಯ ವಾಯುದಾಳಿ ಮೂಲಕ ನೀಡಿದ ಪ್ರತ್ಯುತ್ತರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ವೃದ್ಧಿಸಿದೆ.

Also read: ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಎಫೆಕ್ಟ್; ಭಾರತದಲ್ಲೇ ಈಗ ಅನೇಕ ಶಸ್ತ್ರಾಸ್ತ್ರ ತಯಾರಿ, ಹೀಗೆ ಮುಂದುವರೆದರೆ ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಂಬರ್ ಒನ್ ಆಗಬಹುದು!!

ಉಳಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ 13 ಸ್ಥಾನ ಪಡೆದರೆ ಹಾಗೂ ಬಿಜೆಪಿ 15 ಸ್ಥಾನಗಳು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಜನವರಿಯಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ 14 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ ಹೊಸ ಸಮೀಕ್ಷೆಯಲ್ಲಿ ಬಿಜೆಪಿ ಒಂದು ಸ್ಥಾನ ಏರಿಕೆ ಕಂಡಿದೆ.

ಮೋದಿ ಈಗಲೂ ನಂ.1?

Also read: ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..

ಐಎಎನ್ಎಸ್-ಸಿ-ವೋಟರ್ ಸಮೀಕ್ಷೆಯ ವಿವರ ಬಹಿರಂಗವಾಗಿದೆ. ಈ ಸಮೀಕ್ಷೆಯ ಪ್ರಕಾರ ವೈಮಾನಿಕ ದಾಳಿಯಾದ ನಂತರವೂ ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ಒಂದಷ್ಟು ಪ್ರಮಾಣ ಹೆಚ್ಚು ಕಡಿಮೆಯಾಗಿದ್ದು, ಆದರೆ ಈಗಲೂ ಅವರೇ ಅತ್ಯಂತ ಜನಪ್ರಿಯ ನಾಯಕ. ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲಿ ಸಣ್ಣ ಪ್ರಮಾಣದ ಏರಿಕೆಯಾಗಿದೆ. ಮಾ.4,5,6 ಹಾಗೂ 7 ವರೆಗೆ ಶೇ.60 ರಷ್ಟಿದ್ದ ಮೋದಿ ಜನಪ್ರಿಯತೆ ಮಾ.14 ರ ನಂತರ ಶೇ.56 ಕ್ಕೆ ಇಳಿಕೆಯಾಗಿದೆ. ಇನ್ನು ರಾಹುಲ್ ಗಾಂಧಿ ಜನಪ್ರಿಯತೆ ಶೇ.3 ರಿಂದ ಶೇ.7 ಕ್ಕೆ ಏರಿಕೆಯಾಗಿದೆ.

ಇನ್ನು ಮೋದಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜನರ ಸಂಖ್ಯೆ ಹಿಂದಿನಷ್ಟೇ ಇದ್ದು ಶೇ.50 ರಷ್ಟು ಜನರು ಮೋದಿ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿ ಎನ್ ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ಮುನ್ನಡೆಸಬಲ್ಲದು ಎಂದು ಶೇ.40 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲೂ ಬಿಜೆಪಿ ಮೇಲುಗೈ?

Also read: ಕರ್ನಾಟಕದಲ್ಲಿ ಮೋದಿ ಅಬ್ಬರ; ರಾಹುಲ್ ಸಂವಾದದಲ್ಲೇ ಮೋದಿ ಪರ ಘೋಷಣೆ..

ರಿಪಬ್ಲಿಕ್‌ ಟೀವಿ, ವಿಡಿಪಿಎ ಸಮೀಕ್ಷೆ ಏಪ್ರಿಲ್‌ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ರಿಪಬ್ಲಿಕ್‌ ಟೀವಿ-ಸಿ ವೋಟರ್‌ ಹಾಗೂ ವಿಡಿಪಿ ಅಸೋಸಿಯೇಟ್ಸ್‌ ಸಮೀಕ್ಷೆಗಳ ಪ್ರಕಾರ ಬಿಜೆಪಿ 16, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ 12 ಸ್ಥಾನಗಳನ್ನು ಗಳಿಸಲಿವೆ. ಇತರರು ಶೂನ್ಯ ಸಂಪಾದಿಸಲಿದ್ದಾರೆ ಎಂದು ರಿಪಬ್ಲಿಕ್‌ ಟೀವಿ ಸಮೀಕ್ಷೆ ತಿಳಿಸಿದೆ. ಇನ್ನು ಶೇಕಡಾವಾರು ಮತದಲ್ಲಿ ಬಿಜೆಪಿ ಶೇ.46.4 ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಕೂಟ ಶೇ.46.3 ಮತ ಪಡೆಯಲಿವೆ. ಇತರರು ಶೇ.7.3 ಮತ ಗಳಿಸಲಿದ್ದಾರೆ. ವಿಡಿಪಿ ಅಸೋಸಿಯೇಟ್ಸ್‌ ಸಮೀಕ್ಷೆಯಲ್ಲಿ ಬಿಜೆಪಿ 16, 15 ಕಾಂಗ್ರೆಸ್‌-ಜೆಡಿಎಸ್‌ 12, 13 ಎಂದು ತಿಳಿಸಿದೆ. ಒಟ್ಟಾರೆ ಎನ್ ಡಿಎ ಈ ಬಾರಿ ಅಧಿಕಾರಕ್ಕೆ ಬರುವ ಲಕ್ಷಣಗಳು ನಿಚ್ಚಳವಾಗಿದೆ.