ಅಪಘಾತದ ಸಮಯದಲ್ಲಿ ನಾವು ಮಾಡಬೇಕಾದ ಅತಿ ಮುಖ್ಯವಾದ 5 ಕೆಲಸಗಳು..

0
843

ಅಪಘಾತದ ಸಂಧರ್ಭದಲ್ಲಿ ನಾವು ಏನು ಮಾಡಬೇಕು..?? ಸಾಮಾಜಿಕ ಅರಿವು ಮೂಡಿಸುವುದಕ್ಕಾಗಿ ನಮ್ಮ ತಂಡ ಹೊರಟಿದೆ.. ನಿಮ್ಮ ಬೆಂಬಲವೂ ಇದ್ದರೇ ಶೇರ್ ಮಾಡಿ.. ಒಬ್ಬರ ಪ್ರಾಣ ನಿಮ್ಮಿಂದ ಉಳಿದರೂ ಉಳಿಯಬಹುದು..

ಇತ್ತೀಚಿನ ದಿನಗಳಲ್ಲಿ ಅಪಘಾತವೆಂಬುದು ಸಾಮಾನ್ಯವಾಗಿಬಿಟ್ಟಿದೆ.. ಕಾರಣ ಯಾವುದೇ ಆಗಿರಲಿ ಅಂತಹ ಸಂಧರ್ಬದಲ್ಲಿ ನಾವು ಮಾಡಬೇಕಾಗಿರುವ ಅತಿ ಮುಖ್ಯವಾದ 5 ಕೆಲಸಗಳು ಕೆಳಗಿವೆ ನೋಡಿ..

1.ಮೊಬೈಲ್ ನಲ್ಲಿ ವೀಡಿಯೋ ಮಾಡಬೇಡಿ..

ಅಪಘಾತವಾದಾಗ ಮಾನವೀಯತೆ ತೋರಿಸುವ ಬದಲು ದೂರ ನಿಂತು ವೀಡಿಯೋ ಮಾಡುವವರೇ ಹೆಚ್ಚು.. ದಯಮಾಡಿ ಅಪಘಾತವಾದವರ ಬಳಿ ಹೋಗಿ ಮೊದಲು ಅವರನ್ನು ಮಾತನಾಡಿಸಿ.. ಅಪಘಾತವಾದವರೇನು ಅನ್ಯಗ್ರಹ ಜೀವಿಗಳಲ್ಲ.. ಅವರೂ ನಮ್ಮ ಅಕ್ಕ ತಂಗಿಯರೇ ಅಥವಾ ಅಣ್ಣ ತಮ್ಮಂದಿರೇ ಆಗಿರುತ್ತಾರೆ..

2.ಮೊದಲು ಆಸ್ಪತ್ರೆಗೆ ಸೇರಿಸಿ..

ನಿಮ್ಮ ಸಂಬಂಧಿಕರ ಮದುವೆ ಅಥವಾ ಸಮಾರಂಭಗಳಿಗೆ ದಿನಗಟ್ಟಲೇ ಕೆಲಸಕ್ಕೆ ರಜೆ ಹಾಕುವ ನಾವು ಅಪಘಾತ ನೋಡಿದಾಗ ಅಯ್ಯೊ ನನ್ನ ಕೆಲಸ ಅತಿ ಮುಖ್ಯ ಎಂದು ಭಾವಿಸುತ್ತೇವೆ.. ದಯಮಾಡಿ ಒಂದು ದಿನ ಒಂದೆರೆಡು ತಾಸು ನಿಧಾನವಾಗಿ ಕೆಲಸಕ್ಕೆ ಹೋದರೇ ತಪ್ಪೇನು ಆಗುವುದಿಲ್ಲ ಎಂಬುದು ನಮ್ಮ ಭಾವನೆ..  ನಿಮ್ಮ ಮೇಲೆ ಯಾವುದೇ ರೀತಿಯ ಕೇಸ್ ದಾಖಲಾಗುವುದು ಇಲ್ಲ.. ನೀವು ಕೋರ್ಟಿಗೆ ಅಲೆಯಬೇಕಾಗು ಇಲ್ಲ.. ಈ ರೀತಿಯ ತಪ್ಪು ಕಲ್ಪನೆ ಎಲ್ಲರಲ್ಲೂ ಇದೆ.. ಇದನ್ನು ಬಿಟ್ಟು ಅಪಘಾತವಾದವರನ್ನು ಆಸ್ಪತ್ರೆಗೆ ಸೇರಿಸಿ..

3.ಮೊಬೈಲ್ ಪಾಸ್ ವರ್ಡ್ ತಿಳಿದುಕೊಳ್ಳಿ..

ಈಗ ಎಲ್ಲರೂ ತಮ್ಮ ತಮ್ಮ ಮೊಬೈಲ್ ಗಳಿಗೆ ಪಾಸ್ ವರ್ಡ್ ಕೊಡುವುದು ಸಾಮಾನ್ಯ.. ಅಪಘಾತ ವಾದ ತಕ್ಷಣ ಅವರಿಗೆ ಪ್ರಜ್ಞೆ ಹೋಗುವ ಮುನ್ನ ಅವರ ಮೊಬೈಲ್ ಪಾಸ್ ವರ್ಡ್ ತಿಳಿದುಕೊಂಡು ಸಂಭಂದಿಸಿದವರಿಗೆ ವಿಷಯ ತಿಳಿಸಿ.. ಅಥವಾ ನಿಮಗೇ ಅಪಘಾತವಾಗಿದ್ದರೇ ಮೊದಲು ನಿಮ್ಮ ಮೊಬೈಲ್ ಲಾಕ್ ಓಪನ್ ಮಾಡಿ ಹತ್ತಿರದವರಿಗೆ ಮೊಬೈಲ್ ಕೊಟ್ಟು ಪೋಷಕರಿಗೆ ಕರೆ ಮಾಡಲು ತಿಳಿಸಿ

4.ದಯಮಾಡಿ ಇನ್ನೊಬ್ಬರಿಗೆ ಅಪಘಾತವಾದಾಗ ಅಡ್ವಾಂಟೇಜ್ ತೆಗೆದುಕೊಳ್ಳಬೇಡಿ..

ಇದು ಕೆಲವರಲ್ಲಿರುವ ಕೆಟ್ಟ ಚಾಳಿ.. ಅಪಘಾತದ ಸಂಧರ್ಭದಲ್ಲಿ ಅವರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ಯುವವರೂ ಇದ್ದಾರೆ.. ದಯಮಾಡಿ ಹಾಗೆ ಮಾಡಬೇಡಿ.. ಒಮ್ಮೆ ಯೋಚಿಸಿ ಒಂದು ವೇಳೆ ನಿಮ್ಮ ಮೊಬೈಲ್ ಅಥವಾ ಪರ್ಸ್ ಕಳೆದುಹೋದರೆ ನಿಮಗೆ ಹೇಗಾಗುತ್ತದೆ.. ಮೊದಲೇ ಕಷ್ಟದಲ್ಲಿರುವವರಿಗೆ ವಸ್ತುಗಳನ್ನು ತೆಗೆದುಕೊಂಡು ಇನ್ನೂ ಕಷ್ಟ ಕೊಡುವುದೆಷ್ಟು ಸರಿ??

5.ಹರೀಶ್ ಸಾಂತ್ವನ ಯೋಜನೆ..

ಈ ಯೋಜನೆಯ ಪ್ರಕಾರ  ಅಪಘಾತವಾದಾಗ ಪ್ರಥಮ ಚಿಕಿತ್ಸೆ ಕೊಡಲು ಯಾವುದೇ ಆಸ್ಪತ್ರೆಗಳು ಬಿಲ್ ಮಾಡುವ ಹಾಗಿಲ್ಲ.. ಇದು ಎಲ್ಲರಲ್ಲೂ ನೆನಪಿನಲ್ಲಿ ಇದ್ದರೇ ಒಳ್ಳೆಯದು..

ಶೇರ್ ಮಾಡಿ ಮಾಹಿತಿ ಹಂಚಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಇನ್ನೇನಿದೆ??