ಕತ್ತು ನೋವಿಗೆ ಹತ್ತು ಕಾರಣಗಳು!

0
3834

ಯಾಕಪ್ಪ ನಿನ್ನೆ ಆಫೀಸಿಗೆ ಚಕ್ಕರ್ ಎಂದ್ರೆ! ತುಂಬಾ ಕುತ್ತಿಗೆ ನೋವಾಗಿತ್ತು ಹಗಾಗಿ ಬರಲಿಲ್ಲ ಎಂದು ಹೇಳುವವರ ಸಂಖ್ಯೆ ಈಗ ಜಾಸ್ತಿಯಾಗಿದೆ ಇತ್ತೀಚಿನ ದಿನಗಳಲ್ಲಿ ಬಹಳ ಮಂದಿ ಕತ್ತು ನೋವಿಂದ ಬಳಲುತ್ತಿದ್ದಾರೆ. ಕುತ್ತಿಗೆಗೆ ಪಟ್ಟಿ ಹಾಕಿಕೊಂಡು ಓಡಾಡುವವರ ಜಾಸ್ತಿಯಗಿದೆ, ಕುಳಿತು ಕೆಲಸ ಮಾಡುವ ಮಂದಿಗಂತೂ ಈ ಕತ್ತು ನೋವು ಕಟ್ಟಿಟ್ಟ ಬುತ್ತಿ ಏರುಪೇರಾಗಿರುವ ನಮ್ಮ ದೈನಂದಿನ ಚಟುವಟಿಕೆಗಳಿಂದು ಕತ್ತು ನೋವು ನಮ್ಮ ಕುತ್ತಿಗೆಯನ್ನೇರಲು ನಾವೇ ಕಾರಣವೆಂದರೆ ತಪ್ಪಾಗಲಾರದು ಕತ್ತು ನೋವು ಎಡಬಿಡದೆ ಕಾಡುತ್ತಿದ್ದರೆ ವೈದ್ಯರ ಬಳಿಗೆ ಹೋಗಿ ಆದರೆ ಅದಕ್ಕೆ ಮುನ್ನ ಕತ್ತು ನೋವಿಗೆ ಕಾರಣವೇನೆಂದು ನೀವೆ ಪತ್ತೆ ಹಚ್ಚಿಕೊಳ್ಳಬಹುದು ಕತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತೆ? ಕತ್ತು ನೋವಿಗೆ ಮುಖ್ಯವಾಗಿ ಹತ್ತು ಕಾರಣಗಳಿದೆ.

1.ಮೊದಲನೆಯದಾಗಿ ಬೆನ್ನೆಲುಬಿನಲ್ಲಿರುವ ಬೆನ್ನು ಹುರಿಯ ಜೋಡಣೆಯಲ್ಲಿ ನಮಗೆ ಗೊತ್ತಿಲ್ಲದಯೆ ಸ್ವಲ್ಪ ವ್ಯತ್ಯಾಸವಾದಾಗ ಕತ್ತು ನೋವು ಬರುತ್ತದೆ ಬೆನ್ನು ಹುರಿಯ ಜೋಡಣೆಯಲ್ಲಿ ವ್ಯತ್ಯಾಸವಾದಾಗ ನರಗಳ ಮೇಲೆ ಒತ್ತಡ ಹೆಚ್ಚುತ್ತದೆ ಇದರಿಂದ ಸ್ನಾಯುಗಳ ಒತ್ತಡವೂ ಹೆಚ್ಚಿ ಕುತ್ತಿಗೆ ನೋವು ಬರಲು ಕಾರಣವಾಗುತ್ತದೆ. ಒಮ್ಮೊಮ್ಮೆ ಕುತ್ತಿಗೆಯಿಂದ ಪ್ರಾರಂಭವಾಗುವ ನೋವು ಭುಜಗಳ ಮೂಲಕ ಕೈಬೆರಳ ತುದಿಯವರೆಗೂ ವಿಸ್ತರಿಸುತ್ತದೆ ಇಂಥಹ ಸಮಯದಲ್ಲಿ ತಾತ್ಸಾರ ಮಾಡದೆ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡಿರಿ ಬೆನ್ನು ಹುರಿಯ ಜೋಡಣೆಯಲ್ಲಿ ವ್ಯತ್ಯಾಸವಾಗಿ ಅದು ನಿಮ್ಮ ಕತ್ತು ನೋವಿಗೆ ಕಾರಣವಾಗಿದ್ದರೆ ತಕ್ಷಣ ಚಿಕಿತ್ಸೆ ಕೊದುತ್ತಾರೆ ಈ ರೀತಿಯ ನೋವಿದ್ದಾಗ ದಪ್ಪನೆಯ ತಲೆದಿಂಬನ್ನು ಉಪಯೋಗಿಸಲೇ ಬಾರದು ತೆಳುವಾದ ತಲೆದಿಂಬು ಹಾಗೂ ಲಘು ವ್ಯಯಾಮದಿಂದ ಈ ನೊವನ್ನು ಪರಿಹರಿಸಬಹುದು.

yoga-for-neck-pain

2. ಎರಡನೆಯದಾಗಿ ನೀವು ಕುಳಿತುಕೊಳ್ಳುವ ಭಂಗಿ ಕೂಡ ಕತ್ತು ನೋವನ್ನು ತರಬಲ್ಲದು ನೀವು ಹೇಗೆ ಕುಳಿತುಕೊಳ್ಳುವಿರೋ ನಿಂತುಕೊಳ್ಳುವಿರೋ ಅದೇ ಭಂಗಿಯಲ್ಲಿ ದೇಹದೊಳಗೆ ಬೆನ್ನು ಹುರಿಯ ನ್ಪಿತಿ ಇರುತ್ತದೆ ದೊಡ್ಡ ಕನ್ನಡಿಯಲ್ಲಿ ಎಡ ಪಕ್ಕದಿಂದ ನಿಮ್ಮ ದೇಹವನ್ನು ಗಮನಿಸಿದಾಗ ಬೆನ್ನು ಹುರಿ ಬಾಗಿದಂತೆ ಕಾಣಬೇಕು ಹೇಗೇಗೊ ಕುಳಿತುಕೊಳ್ಳುವ ಅಭ್ಯಾಸದಿಂದಲೂ ಕೂಡ ಬೆನ್ನು ಹುರಿಗಳ ಮೇಲೆ ಒತ್ತಡ ಬಿದ್ದು ಕತ್ತು ನೋವು ಬರಲು ಕಾರಣವಾಗತ್ತದೆ.

background

3. ಮೂರನೆಯದಾಗಿ ಹೇಗೆಗೋ ಮಲಗುವ ಅಭ್ಯಾಸವಿದ್ದವರಿಗೆ ಕತ್ತು ನೋವು ಕಟ್ಟಿಟ್ಟ ಬುತ್ತಿ ಕೆಲವರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ ಹೀಗೆ ಮಲಗಿದಾಗ ಉಸಿರಾಡಲೆಂದು ತಲೆಯನ್ನು ಎಡಕ್ಕೂ ಅಥವಾ ಬಲಕ್ಕೂ ಹಾಕಿ ಮಲಗಬೇಕಾಗುತ್ತದೆ ಆಗ ಕುತ್ತಿಗೆ 900 ಕೋನದಷ್ಟು ತಿರುಗಿರುತ್ತದೆ ಹೀಗೆ ಮಲಗಿದಾಗ ಬೆನ್ನು ಹುರಿಯ ಜೋಡಣೆಯಲ್ಲಿ ವ್ಯತ್ಯಾಸವಾಗುವ ಸಂಭವವಿದ್ದು ಇದರಿಂದ ಕತ್ತು ನೋವು ಬರುತ್ತದೆ.

images

4. ನಾಲ್ಕನೆಯದಾಗಿ ನೀವು ಬಳಸುವ ದಿಂಬು ಕೂಡ ಕತ್ತು ನೋವು ಬರಲು ಕಾರಣವಾಗುತ್ತದೆ ಕೆಲವರು ಅತಿ ದಪ್ಪನೆ ದಿಂಬು ಇಟ್ಟು ಕೊಳ್ಳದೆ ಇದ್ದರೆ ನಿದ್ದೇನೆ ಬರೋದಿಲ್ಲ ಅಂತಾರೆ ಹಾಗೂ ಅತಿ ತೆಳ್ಳನೆಯ ದಿಂಬುಕೂಡ ಕುತ್ತಿಗೆ ನೋವಿಗೆ ಕಾರಣವಾಗಬಹುದು. ಮಧ್ಯಮ ಗಾತ್ರದ ಮೆದುವಾದ ದಿಂಬನ್ನು ಇಟ್ಟುಕೊಂಡರೆ ಕುತ್ತಿಗೆ ನೋವು ಬರುವುದಿಲ್ಲ! ಅತಿ ದಪ್ಪನೆಯ ದಿಂಬು ಬೆನ್ನು ಹುರಿಯ ಜೊಡಣೆಯ ನ್ಪಿತಿಯನ್ನು ಏರುಪೇರಾಗಿಸುವುದರಿಂದ ಸ್ನಾಯುಗಳು ಹಾಗೂ ನರಗಳ ಮೇಲೆ ಒತ್ತಡ ಬಿದ್ದು ಕತ್ತು ನೋವು ಬರುತ್ತದೆ.

pillows-pillow-super-comfort

5. ಐದನೆಯದಗಿ ಮಾನಸಿಕ ಹಾಗೂ ಕೆಲಸದ ಒತ್ತಡ ಜಾಸ್ತಿಯಾದರು ಕೂಡ ಕತ್ತುನೋವು ಬರುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತದೆ. ಒತ್ತಡದಿಂದ ಕೆಲಸಮಾಡುವವರಲ್ಲಿ ಕುತ್ತಿಗೆಯ ಹಿಂದೆ ನೋವು ಬರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಛೇರಿಯಲ್ಲಿ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ ಅನ್ನಿಸಿದರೆ ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳಿರಿ, ಕುಳಿತಲ್ಲಿಯೇ ಒಂದೆರೆಡು ಬಾರಿ ದೀರ್ಘವಾಗಿ ಉಸಿರಾಡಿರಿ ಎದ್ದು ಆಫೀಸಿನಲ್ಲಿ ಅತ್ತಿಂದಿತ್ತ ಓಡಾಡಿ ಸಹೋದ್ಯೊಗಿಗಳ ಜೊತೆ ನಕ್ಕು ಮಾತನಾಡಿರಿ ಟೀನೋ, ಕಾಫಿನೊ ಕುಡಿದು ಮತ್ತೆ ನಿಮ್ಮ ಕುರ್ಚಿಗೆ ಬಂದು ಕುಳಿತುಕೊಳ್ಳುವುದರಿಂದ ಉಲ್ಲಸಿತರಾಗುವುದರಿಂದ ಕುತ್ತಿಗೆ ನೋವು ಬರದಂತೆ ತಡೆಯಬಹುದೆಂದೆ ವೈದ್ಯ ವಿಜ್ಞಾನಿಗಳ ಅಭಿಪ್ರಾಯ!!.

6. ಆರನೆಯದಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಾಗಿದ್ದರೆ ಕಂಪ್ಯೂಟರ್ ಪರದೆ ಹಾಗೂ ನೀವು ಕುಳಿತು ಕೊಳ್ಳುವ ಕುರ್ಚಿಯ ಸ್ಥಿತಿಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳಿ ಕಂಪ್ಯೂಟರ್ ಪರದೆ ಆದಷ್ಟು ನಿಮ್ಮ ಕಣ್ಣಿನ ನೇರಕ್ಕಿರಲಿ ಕಣ್ಣಿನ ನೇರಕ್ಕಿಂತ ಅತಿ ಕೆಳಗೆ ಅಥವಾ ಮೇಲೆ ಇರುವ ಕಂಪ್ಯೂಟರ್ ಪರದೆಯನ್ನು ಎಡೆಬಿಡದೆ ನೋಡುವುದರಿಂದ ನಾವು ಕುಳಿತುಕೊಳ್ಳುವ ಭಂಗಿಯಲ್ಲಿ ಎರುಪೇರಾಗುತ್ತದೆ. ಇದರಿಂದ ಬೆನ್ನು ಹುರಿಯ ಜೋಡಣೆಯಲ್ಲಿ ವ್ಯತ್ಯಾಸವಾಗುವುದರಿಂದ ಸ್ನಾಯುಗಳಿಗೆ ಪ್ರಯಾಸವಾಗುತ್ತದೆ ಹೀಗೆ ನರಗಳ ಮೇಲೆ ಒತ್ತಡ ಬೀಳುವುದರಿಂದ ಕುತ್ತಿಗೆ ನೋವು ಬರುತ್ತದೆ ಕುಳಿತಾಗ ಭಂಗಿ ನೆಟ್ಟಗಿರಲಿ ಕಂಪ್ಯೂಟರ್ ಮುಂದೆ ಕುಳಿತು ಒಂದೇ ಸಮನೆ ಕೆಲಸ ಮಾಡದೆ ಆ ಕಡೆಯಿಂದ ಈ ಕಡೆ ಓಡಾದಿ ಹೀಗೆ ಮಾಡಿದಾಗ ನರಗಳ ಮೇಲೆ ಒತ್ತಡ ಕಡಿಮೆಯಾಗಿ ಕತ್ತು ನೋವು ಬರುವ ಸಂಭವ ಕಡಿಮೆಯಗುತ್ತದೆ.

blurred-computer-user_original

7. ಏಳನೆಯದಾಗಿ ನೀವು ಜಿಮ್‍ಗೆ ಹೋಗುತ್ತಿದ್ದು ವ್ಯಾಯಾಮ ಮಾಡುವಾಗ ಎಚ್ಚರವಿರಲಿ ಅತಿಯಾದ ವೈಟ್ಸ್ ಗಳನ್ನು ಬಲವಂತವಾಗಿ ಎತ್ತಲು ಪ್ರಯತ್ನಿಸಬೇಡಿ. ತರಬೇತುದಾರರ ಮಾರ್ಗದರ್ಶನದಲ್ಲಿ ಸಣ್ಣ ತೂಕದ ಡಂಬಲ್ಸ್ ಗಳನ್ನು ಎತ್ತಲು ಪ್ರಯತ್ನಿಸಿರಿ. ಅಬ್ಡಾಮಿನಲ್ ಕ್ರಂಚಸ್ ಮಾಡುವಾಗ ದೃಷ್ಟಿ ಸೀಲಿಂಗ್ ಕಡೆ ಇರಲಿ ಆಬ್ಸ್ ಮಾಡುವಾಗ ತಲೆಗೆ ಕೈಗಳ ಸಹಾಯ ಕೊಟ್ಟು ಒತ್ತಡ ಹಾಕಿ ಮಾಡಬೇಡಿ ಹೀಗೆ ಮಾಡಿದಾಗ ಕತ್ತು ನೋವು ಬರುತ್ತದೆ.

maxresdefault

8. ಎಂಟನೆಯದಾಗಿ ತುಂಬ ಹೊತ್ತು ಕುಳಿತಾಗ ಕತ್ತನ್ನು ಹೇಗೇಗೋ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಕುತ್ತಿಗೆಯ ಸ್ನಾಯುಗಳ ಮೇಲೆ ಒತ್ತಡ ಬಿದ್ದು ಕತ್ತು ನೋವು ಬರುತ್ತದೆ. ಕತ್ತನ್ನು ಬಗ್ಗಿಸಿ ಬಹಳ ಹೊತ್ತು ಓದುವುದು,ಕಂಪ್ಯೂಟರ್ ಮುಂದೆ ಒಂದೆ ಭಂಗಿಯಲ್ಲಿ ಬಹಳ ಹೊತ್ತು ಕೂರುವುದು ಹೇಗೇಗೊ ಮಲಗುವುದು ಕೂಡ ಕತ್ತು ನೋವು ಬರಲು ಕಾರಣವಾಗಬಹುದು ಹಾಗಾಗಿ ಇಂಥಹ ಅಭ್ಯಾಸಗಳನ್ನು ಆದಷ್ಟು ಬಿಟ್ಟುಬಿಡಿ.

Aligner floor sitting positions

9. ಒಂಭತ್ತನೆಯದಾಗಿ ದಿನಕ್ಕೆ 5 ರಿಂದ 6 ಲೀ ನಷ್ಟು ನೀರು ಕುಡಿಯಿರಿ ಇದು ನಮ್ಮ ದೇಹದಲ್ಲಿ ದ್ರಾವಣದ ಮಟ್ಟವನ್ನು ಸುಸ್ಥಿತಿಯಲ್ಲಿಡುತ್ತದೆಯಲ್ಲದೆ ಈ ದ್ರಾವಣ ಬೆನ್ನು ಹುರಿಯ ತಟ್ಟೆಗಳನ್ನು ಒಂದಕ್ಕೊಂದು ತಾಗದಂತೆ ನೋಡಿಕೊಳ್ಳುವುದರಿಂದ ನಮ್ಮ ಬೆನ್ನು ಹುರಿ “ಶಾಕ್ ಅಬ್ಸರ್ವರ್” ನಂತೆ ಕೆಲಸಮಾಡಿ ಕತ್ತು ನೋವು ಬಾರದಂತೆ ತಡೆಯುತ್ತದೆ.

download

10. ಕೊನೆಯದಾಗಿ ಕತ್ತುಗಳಿಗೆ ಸ್ವಲ್ಪ ವ್ಯಾಯಾಮ ಕೊಡದಿದ್ದರೆ ಬಿಗಿತವುಂಟಾಗುತ್ತದೆ, ಇದರಿಂದ ಕತ್ತು ನೋವು ಬರುತ್ತದೆ ಹಾಗಾಗಿ ಬೆಳಗ್ಗೆಯಾಗಲಿ ಅಥವಾ ಸಮಯವಾದಾಗ ಕುತ್ತಿಗೆಗೆ ಸಂಬಂಧಪಟ್ಟ ವ್ಯಾಯಾಮ ಮಾಡಿ, ಕತ್ತನ್ನು ಆ ಕಡೆ ಈ ಕಡೆ ಮೇಲೆ ಕೆಳಗೆ ತಿರುಗಿಸುವುದರಿಂದ ಕತ್ತಿನ ಬಿಗಿತ ಸಡಿಲಗೊಂಡು ಸ್ನಾಯುಗಳ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ ಕೆಲ ಸೆಕೆಂಡುಗಳ ಕತ್ತಿನ ವ್ಯಾಯಾಮ ಹಲವಾರು ದಿನ ಕಾಡಬಹುದಾದ ಕತ್ತು ನೋವನ್ನು ತಡೆಗಟ್ಟಬಹುದು.

© slidesharecdn
© slidesharecdn

ವ್ಯಾಯಾಮ ಯೋಗದಂತಹ ಒಳ್ಳೆಯ ಹವ್ಯಾಸಗಳು ನಿಯಮಿತವಾದ ಸರಿಯಾದ ಸಮಯದಲ್ಲಿ ಸತ್ವಯುತ ಆಹಾರ ಸೇವನೆ, ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಕತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಪ್ರಕಾಶ್.ಕೆ.ನಾಡಿಗ್. ತುಮಕೂರು