ಹಳೆಯ ಹಾಡುಗಳಿಗೆ ಬಂದಿದೆ “ನವಜೀವ” – ಮಲ್ನಾಡ್ ಸಹೋದರಿಯರ ದೃಶ್ಯ ಕಾವ್ಯ!!!

0
826

“ನವಜೀವ”( “NAVAJEEVA” ) ಸಂಗೀತ ವೀಡಿಯೊ ತಂಡದಿಂದ ಕಸ್ತೂರಿ ನಿವಾಸ – ನೀ ಬಂದು ನಿಂತಾಗ ನಿಂತು ನೀ ನಕ್ಕಾಗ  ಪ್ರಸಿದ್ಧ ಹಾಡನ್ನು  ಹೊಸ ಸಂಗೀತ ಸಂಯೋಜನೆಯಲ್ಲಿ  ವರನಟ  ಡಾ. ರಾಜಕುಮಾರ್  ರವರ ಅಭಿಮಾನಿಗಳಿಗಾಗಿ ಸಮರ್ಪಿಸಲಾಗಿದೆ.

ಈ ಹೊಸ ಪ್ರಯತ್ನವನ್ನು ಮೂಲ ಹಾಡಿ ಸ್ಪೂರ್ತಿ ಪಡೆದು ಅಂಪೂರ್ಣವಾಗಿ ಪರಿವರ್ತಿಸಿ ಹಾಡನ್ನು ಮೊದಲು ಪ್ರಯತ್ನಿಸಿ ರಾಜಕುಮಾರ್ ಅಭಿಮಾನಿಗಳ ಮುಂದಿಟ್ಟಿದ್ದಾರೆ, ಇದರ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಲು ತೀಳಿಸಿದ್ದಾರೆ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಕಸ್ತೂರಿ ನಿವಾಸ – ನೀ ಬಂದು ನಿಂತಾಗ ನಿಂತು ನೀ ನಕ್ಕಾಗ

ಕಸ್ತೂರಿ ನಿವಾಸ: ಈ ಚಿತ್ರವನ್ನು ೧೯೭೧ ರಲ್ಲಿ ತಯಾರಿಸಲಾಯ್ತು. ಜಿ. ಬಾಲಸುಬ್ರಮಣ್ಯಂ ಅವರ ಈ ಕತೆಯನ್ನು ಮೊದಲು ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತು. ಆದರೆ ಕೊನೆಯಲ್ಲಿ ನಾಯಕ ಸಾಯುವ ಈ ಕತೆಯನ್ನು ಚಿತ್ರ ಮಾಡಿದರೆ ಅದು ಓಡಲ್ಲ ಎಂದು ಹೇಳಿ ಅವರು ನಿರಾಕರಿಸಿದ್ದರಂತೆ. ನಂತರ ಅದೇ ಕತೆಯನ್ನು ದೊರೆ-ಭಗವಾನ್ ಜೋಡಿ ಕನ್ನಡದಲ್ಲಿ ಡಾ. ರಾಜ್‌ಕುಮಾರ್‌ ಅವರನ್ನು ನಾಯಕರನ್ನಾಗಿ ಹಾಕಿಕೊಂಡು ಚಿತ್ರೀಕರಿಸಿದರು.

ಅಂದು ಈ ಚಿತ್ರಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿತ್ತು ಎಂದು ಹೇಳಲಾಗಿದೆ. ಬಿಡುಗಡೆಯಾದ ನಂತರ ೧೬ ಚಿತ್ರಮಂದಿರಗಳಲ್ಲಿ ಅಮೋಘ ನೂರು ದಿನ ಪೂರೈಸಿತು. ಇದನ್ನು ತಿಳಿದ ಶಿವಾಜಿ ಗಣೇಶನ್ ಬಂದು ರಾಜ್ ಅಭಿನಯವನ್ನು ನೋಡಿ ಕಣ್ಣೀರಾದರಂತೆ. ಮೊದಲು ತಾವು ಕತೆಯನ್ನು ನಿರಾಕರಿಸಿದ್ದನ್ನು ನೆನೆದು ನೊಂದುಕೊಂಡು ತಾವೇ ನಾಯಕರಾಗಿ ಈ ಕತೆಯನ್ನು ತಮಿಳಿನಲ್ಲಿ ತೆಗೆಯಲು ಬಯಸಿದರು. ಹಾಗೂ ಅವರ ನಟನೆಯ ತಮಿಳಿನ ಈ ಚಿತ್ರವೂ ಸಹ ಅಲ್ಲಿ ಅಮೋಘ ಯಶಸ್ಸನ್ನೂ ಪಡೆಯಿತು.