ಚರ್ಮ ಮತ್ತು ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

0
6620

ಬೇವಿನ ಎಣ್ಣೆಗೆ ಇರುವ ಔಷಧ ಗುಣಗಳ ಕಾರಣದಿಂದ, ಇದನ್ನು ಸಾಬೂನುಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಎಣ್ಣೆ ಯಿಂದ ಮಾಡಿದ ಸಾಬೂನ್ ಬುರುಗು/ನೊರೆ ಜಾಸ್ತಿ ಕೊಡುತ್ತದೆ.

*ಬಕೆಟ್ ಅಥವಾ ಸ್ನಾನದ ಟಬ್‌ಗೆ ,  ಬೇವಿನ ಎಣ್ಣೆಯ ಕೆಲ ಹನಿಗಳನ್ನು ಸೇರಿಸಿ ಮತ್ತು ಸರಿಯಾಗಿ ತೈಲ ಎಲ್ಲೆಡೆ ಪ್ರಸರಿಸುವಂತೆ ಮಾಡಿ. ಸ್ನಾನಕ್ಕೆ ಈ ನೀರನ್ನು ಬಳಸಿ, ಸ್ನಾನದ ನಂತರ ಬೇವಿನ ಲೋಷನ್ ಬಳಸಿ.

*ಇದೊಂದು ಉತ್ತಮ ಆಂಟಿ ಬ್ಯಾಕ್ಟೀರಿಯಾ ಎಣ್ಣೆಯಾಗಿರುವುದರಿಂದ ಇದು ನಿಮ್ಮ ಕೂದಲಿಗೆ ಆರೋಗ್ಯವನ್ನು ಒದಗಿಸುತ್ತದೆ. ಜೊತೆಗೆ ಇದು ಆಂಟಿ-ಫಂಗಲ್ ಮತ್ತು ಆಂಟಿ-ಪ್ಯಾರಾಸಿಟಿಕ್ ಅಂಶಗಳನ್ನು ಹೊಂದಿರುವುದರಿಂದ ಮತ್ತು ಇದರಲ್ಲಿ ವಿಟಮಿನ್ ಸಿ, ಪ್ರೋಟಿನ್ ಮತ್ತು ಕೆರೋಟಿನ್ ಇರುವ ಕಾರಣ ಕೂದಲಿಗೆ ಒಳ್ಳೆಯದು ಎಂದು ಹೇಳಲಾಗಿದೆ. ಕಿರಿಕಿರಿ ನೀಡುವ ಕೂದಲಿನ ಸಮಸ್ಯೆಗೆ ಫಲಪ್ರದ ಚಿಕಿತ್ಸೆ

*ಕೇಶ ಸಂರಕ್ಷಣೆ: ತಲೆಹೊಟ್ಟಿನ ಸಮಸ್ಯೆಗೆ ಬೇವಿನ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ವಿಶ್ರಣ ಮಾಡಿ ತಲೆಯ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆಯನ್ನ ತೊಳೆಯುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು.

ಹಂತಗಳು * ಬೇವಿನ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ * ಈ ಎಣ್ಣೆಯಿಂದ ನಿಮ್ಮ ಕೂದಲಿನ ಬುಡವನ್ನು ಮಸಾಜ್ ಮಾಡಿ * ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ * ನಂತರ ನಿಮ್ಮ ಕೂದಲನ್ನು ಮೆದುವಾದ ಶಾಂಪೂವಿನಿಂದ ತೊಳೆಯಿರಿ * ಇದನ್ನು ವಾರಕ್ಕೊಮ್ಮೆ ಮಾಡಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಬೇವಿನ ಎಣ್ಣೆ , ಸಾಬೂನು ದ್ರಾವಣದ ಜೊತೆ ನೀರನ್ನು ಮಿಶ್ರಣ ಮಾಡಿ ಸಸ್ಯಗಳ ಮೇಲೆ ಸಿಂಪಡಿಸಿದರೆ, ಸಸ್ಯಗಳಿಗೆ ಜೇಡ, ಕ್ರಿಮಿಕೀಟಗಳಿಂದ ಬರುವ ರೋಗಗಳಿಂದ ರಕ್ಷಣೆ ದೊರೆಯುತ್ತದೆ. ರಾಸಾಯನಿಕ ಮದ್ದುಗಳನ್ನು ಹೆಚ್ಚಾಗಿ ಬಳಸುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಬೇವಿನ ಎಣ್ಣೆ, ಸಾಬೂನು ಮಿಶ್ರಣವನ್ನು ಉಪಯೋಗ ಮಾಡುವುದರಿಂದ ತೊಂದರೆ/ಹಾನಿ ಇರುವುದಿಲ್ಲ.