ನೀಟ್ ಪರೀಕ್ಷೆ ಈಗ ಕನ್ನಡದಲ್ಲಿ

0
687

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ದಾಖಲಾತಿಗೆ ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಪರೀಕ್ಷೆ ಇನ್ನು ಮುಂದೆ ಎಂಟು ಭಾಷೆಗಳಲ್ಲಿ ನಡೆಯುತ್ತದೆ ಎಂದು ಘೋಷಿಸಲಾಗಿತ್ತು.ಅವು ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಗಳಾಗಿದ್ದವು .ಎಂದಿನಂತೆಯೇ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿತ್ತು .ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತು, ಹಲವು ವರ್ಷ ಗತಿಸಿದರೂ ಕನ್ನಡ ಭಾಷೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ.

Capture3
ಆದರೆ ಇಂದು ಕನ್ನಡ ಭಾಷೆಯಲ್ಲಿ ನೀಟ್ ಪರೀಕ್ಷೆಯನ್ನು ನಡೆಸಲು ಕೇಂದ್ರ ಅಸ್ತು ಎಂದಿದೆ ,
ಇದು ಸಾಧ್ಯವಾಗಿದ್ದು ಸಾಮಾನ್ಯ ಕನ್ನಡಿಗ ತಂಡದಿಂದ ಇವರ ಮುಂದಾಳತ್ವದಲ್ಲಿ ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆ ಇಲ್ಲದನ್ನು ಎಲ್ಲ ವೇದಿಕೆಗಳಲ್ಲಿ ಖಂಡಿಸಲಾಗಿತ್ತು.

ಕನ್ನಡದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿ ಟ್ವಿಟ್ಟರ್ ಅಭಿಯಾನವನ್ನು ಮೊದಲು ಸಾಮಾನ್ಯ ಕನ್ನಡಿಗ ತಂಡ ಆರಂಭಿಸಿತ್ತು .

 

Capture
ಇದರ ಪರಿಣಾಮವಾಗಿ ಕೆಲವೇ ಗಂಟೆಗಳಲ್ಲಿ ೩೦೦೦೦ ಟ್ವಿಟರ್ಗಳ ಮಹಾಪೂರವೇ ಹರಿದು ಬಂದಿತ್ತು
#NEETelliKannada ಹ್ಯಾಷ್ ಟ್ಯಾಗ್ ಬೆಂಗಳೂರಿನ ಟಾಪ್ ಟ್ರೆಂಡಿಂಗ್ ನಲ್ಲಿ ಇದ್ದದ್ದು ವಿಶೇಷ.

 

Capture1

 

Capture2

ಕನ್ನಡಿಗರ ಒತ್ತಾಯಕ್ಕೆ ಮಣಿದು ಇಂದು ಕನ್ನಡ ಭಾಷೆಯನ್ನು ನೀಟ್ ಪರೀಕ್ಷೆಯಲ್ಲಿ ಸೇರಿಸಲಾಗಿದೆ ,ಇದು ಕನ್ನಡ ಪರ ಮನಸುಗಳಿಗೆ ಸಂದ ಜಯ .