ನಮ್ಮ ಜೀವನವನ್ನು ಇತರರೊಡನೆ ಹೋಲಿಸುವುದು ತಪ್ಪು ಓದಲೇ ಬೇಕಾದ ನೀತಿ ಕಥೆ

0
3439

ಒಂದೂರಲ್ಲಿ ಕಾಗೆ ಒಂದಿತ್ತು ಆ ಕಾಗೆಗೆ ತಾನು ಕರಿಯನೆಂದು ಜನರು ನನ್ನನ್ನು ಪ್ರೀತಿಸುವುದಿಲ್ಲವೆಂದು ಬಹಳ ಬೇಸರವಿತ್ತು.

learn-to-invest-from-the-crow

ಒಮ್ಮೆ ಕಾಳು ತಿನ್ನುತ್ತಾ ನದಿಯ ದಂಡೆಯ ಮೇಲೆ ಕುಳಿತಿದ್ದ ಸಮಯದಲ್ಲಿ ಕೊಕ್ಕರೆಯೊಂದನ್ನು ಕಂಡಿತು , ಕೋಗಿಲೆಯ ಬಣ್ಣವನ್ನು ನೋಡಿ
“ಅಬ್ಬಾ ! ಎಷ್ಟು ಸುಂದರವಾಗಿದೆ ನನಗು ಇದೆ ಕಪ್ಪು ಬಣ್ಣ ಶಕುನದ ಹಾಗೆ”
ಎಂದು ಮರುಕ ಪಟ್ಟುಕೊಂಡಿತು ನಂತರ ಕೋಗಿಲೆಯ ಬಳಿ ಹೋಗಿ
“ನೀನು ಜೀವನದಲ್ಲಿ ಬಹಳ ಅದೃಷ್ಟವಂತ ನೀನು ಎಷ್ಟು ಸುಂದರವಾಗಿದ್ದಿಯಾ” ಎಂದಿತು .

a5fd17468f7611be9182f57edaf5378d

ಇದಕ್ಕೆ ಉತ್ತರವಾಗಿ ಕೊಕ್ಕರೆಯು “ನಾನು ಏಕ ಬಣ್ಣವನ್ನು ಹೊಂದಿರುವವನಾಗಿದ್ದು ನನಗೆ ಗಿಳಿಯಂತೆ ಮೂಗಿಗೆ ಕೆಂಪು ಬಣ್ಣ ಹಾಗೂ ಮೈಗೆ ಹಸಿರು ಬಣ್ಣ ಇಷ್ಟ ಆದ್ದರಿಂದ ಗಿಳಿಯೇ ಶ್ರೇಷ್ಠ ” ಎಂದಿತು.

ತದನಂತರ ಕಾಗೆಯು ಗಿಳಿಯನ್ನು ಭೇಟಿಮಾಡುವ ಸಲುವಾಗಿ ಕಾಡಿಗೆ ಹೋಯಿತು . ಗಿಳಿಯನ್ನು ಭೇಟಿಮಾಡಿ ಹೀಗೆಂದಿತು “ಹೇ ಗಿಳಿಯೇ ನೀನು ಬಹಳ ಸುಂದರವಾಗಿದ್ದೀಯಾ ,ನಿನ್ನ ಬಣ್ಣ ರೂಪ ಮನಮೋಹಕ ನೀನು ಜೀವನದಲ್ಲಿ ಬಹಳ ಅದೃಷ್ಟವಂತ” ಎಂದಿತು.

b5fab1a8ff1abafe66e862cb96d1285d

ಇದಕ್ಕೆ ಉತ್ತರವಾಗಿ ಗಿಳಿಯು “ನನಗೆ ಎರಡು ಬಣ್ಣ ಆದರೆ ನವಿಲನ್ನು ನೋಡು ಅತಿ ಸುಂದರ ತನ್ನ ಬಹು ಬಣ್ಣದಿಂದ ತನ್ನ ನೃತ್ಯದಿಂದ ಎಲ್ಲರನ್ನು ಸೆಳೆಯುತ್ತದೆ ಆದ್ದರಿಂದ ನವಿಲು ಬಹಳ ಅದೃಷ್ಟವಂತ ” ಎಂದಿತು .

ನಂತರ ಕಾಗೆಯು ನವಿಲನ್ನು ಹುಡುಕುತ್ತ ಊರು ಕಾಡುಗಳನ್ನು ಅಲೆದರು ಸಿಗುವುದಿಲ್ಲ ಹೀಗೆ ಹುಡಕುತ್ತ ಅಲೆಯುವ ಸಂಧರ್ಭದಲ್ಲಿ ತನ್ನ ಸ್ನೇಹಿತ ಮತ್ತೊಂದು ಕಾಗೆಯಿಂದ ನವಿಲು ಮೃಗಾಲಯದಲ್ಲಿ ಇರುವುದಾಗಿ ಅದು ತಾನಿರುವ ಸ್ಥಳದಿಂದ 6 ಮೈಲಿ ದೂರವೆಂದು ತಿಳಿಯುತ್ತದೆ .

ಕಾಗೆಯು ನವಿಲಿರುವ ಮೃಗಾಲಯದ ಕಡೆ ತನ್ನ ಪಯಣ ಬೆಳೆಸಿತು .
ಅಂತು ಇಂತು ನವಿಲನ್ನು ಭೇಟಿ ಮಾಡಿಯೇ ಬಿಟ್ಟಿತು . ನವಿಲನ್ನು ಕಂಡು “ನೀನು ಜೀವನದಲ್ಲಿ ಬಹಳ ಅದೃಷ್ಟವಂತ ನೀನು ಎಷ್ಟು ಸುಂದರವಾಗಿದ್ದಿಯಾ ನಿನ್ನ ಬಣ್ಣ ಆಕರ್ಷಕ ” ಎಂದಿತು .

67269172-peacock-wallpapers

ಅದಕ್ಕೆ ನವಿಲು “ನೋಡು ನನ್ನನ್ನು ಬಂಧಿಮಾಡಿ ಮನೋರಂಜನೆಯ ವಸ್ತುವಾಗಿ ಜನರು ನೋಡುತ್ತಿದ್ದಾರೆ ನನ್ನ ಸ್ವತಂತ್ರವೇ ಕಳೆದು ಹೋಯಿತು ಅಂದವಿದ್ದರೆ ಏನು ಪ್ರಯೋಜನ” ಎಂದಿದು .

ನವಿಲು ಬಹಳ ಆಲೋಚಿಸಿ ಹೌದು ಬದುಕಲ್ಲಿ ಸುಖವಾಗಿರಬೇಕಾದರೆ ಅಂದ ಚಂದ ಮುಖ್ಯವಲ್ಲ , ದೇವರು ಪ್ರತಿ ಒಬ್ಬರಿಗೂ ತಮ್ಮದೇ ಆದ ವಿಶಿಷ್ಟ ಆಲೋಚನೆ, ಮನಸ್ಸು ಎಲ್ಲದಕ್ಕೂ ಮುಖ್ಯವಾಗಿ ಪ್ರಾಣವನ್ನು ನೀಡಿರುತ್ತಾನೆ ಮೇಲು ಕೀಳು ಎಲ್ಲವು ಕಲ್ಪಿತ , ಈ ಭೂಮಿಯ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ ಎಲ್ಲರೂ ಅವರದೇ ಆದ ಕಷ್ಟಗಳಲ್ಲಿ ಬಳಲುತ್ತಿರುತ್ತಾರೆ ಆದ್ದರಿಂದ ನಮ್ಮ ಜೀವನವನ್ನು ಇತರರೊಡನೆ ಹೋಲಿಸುವುದು ತಪ್ಪು ಎಂದು ಮನಗಂಡಿತು .