BJPಗೆ 200 ಸೀಟೂ ದಾಟಲ್ಲ, ಕಾಂಗ್ರೆಸ್-ನೊಂದಿಗೆ ಬೇರೆ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿ ದೇವೇಗೌಡರವರು ಮತ್ತೆ ಪ್ರಧಾನಿ ಆಗ್ತಾರೆ : ಪ್ರಕಾಶ್ ಅಂಬೇಡ್ಕರ್!! ಇದು ಸಾಧ್ಯಾನಾ??

0
317

ಎಚ್‍ಡಿಕೆ ಕುಟುಂಬಕ್ಕೆ ಮತ್ತೆ ಪ್ರಧಾನಿ ಭಾಗ್ಯವಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಉಡುಪಿಯಲ್ಲಿ ಪ್ರಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಪಡೆದಿರುವ ಕುಮಾರಸ್ವಾಮಿ ಮತ್ತು ದೇವೇಗೌಡರು ಚಿಕಿತ್ಸೆ ಮುಗಿಸಿಕೊಂಡು ಇಬ್ಬರೂ ಶೃಂಗೇರಿಗೆ ತೆರಳಲಿದ್ದಾರೆ. ಈ ನಡುವೆ ಈ ಬಾರಿ ಮೋದಿಯೂ ಪ್ರಧಾನಿ ಆಗಲ್ಲ, ರಾಹುಲ್ ಗಾಂಧಿಯೂ ಪ್ರಧಾನಿ ಆಗಲ್ಲ. ಬಿಜೆಪಿ 160 ರಿಂದ 200 ಸೀಟಷ್ಟೇ ಬರುತ್ತದೆ. ಕಾಂಗ್ರೆಸ್ ನೂರು ಸೀಟು ಗಡಿ ದಾಟುತ್ತದೆ. ಪ್ರಧಾನಿ ಹುದ್ದೆಗೆ ದೇವೇಗೌಡರನ್ನು ಎಲ್ಲರೂ ಒಪ್ಪುತ್ತಾರೆ. ಮೇ 23ರವರೆಗೆ ಕಾಯಿರಿ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿರುವ ಹೇಳಿಕೆ ಬಾರಿ ವೈರಲ್ ಆಗಿದೆ.

Also read: ಭಯಾನಕ ಡ್ರಗ್ಸ್ ಧಂದೆ ಬೆಂಗಳೂರಿಗೂ ಕಾಲಿಟ್ಟಿದೆ, NCB ಅಧಿಕಾರಿಗಳ ದಾಳಿಯಲ್ಲಿ 50 ಕಿಲೋ ಮಾರಕ ಡ್ರಗ್ ಕೆಟಾಮಿನ್ ಪತ್ತೆ!!

ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ವಿಶ್ರಾಂತಿಗೆಂದು ಉಡುಪಿಯ ಕಾಪು ಬಳಿಯ ಸಾಯಿರಾಧಾ ರೆಸಾರ್ಟ್​ ಸೇರಿಕೊಂಡಿದ್ದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಇಂದು ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಶಾರದಾಂಬೆಯ ಸನ್ನಿಧಿಯಲ್ಲಿ ನಾಳೆಯವರೆಗೂ ಹೋಮ ಹವನದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಫಲಿತಾಂಶದಂದೇ ಸರ್ಕಾರ ಬೀಳುತ್ತೆ ಅನ್ನೋ ಆತಂಕದಲ್ಲಿರುವ ಕುಮಾರಸ್ವಾಮಿ ಎಲ್ಲವನ್ನೂ ಪರಿಹಾರ ಮಾಡುವಂತೆ, ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಪೂಜೆ ವಿಶೇಷ ಪೂಜೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮತ್ತೆ ದೇವೇಗೌಡರೆ ಪ್ರಧಾನಿ?

Also read: ವಿದ್ಯಾರ್ಥಿಗಳು RTI ಅಡಿಯಲ್ಲಿ 2 ರೂ ನೀಡಿ ಉತ್ತರ ಪುಟವನ್ನು ಪಡೆಯಬಹುದು; ಈ ನಿಯಮಕ್ಕೆ ಹೋರಾಡಿ ಗೆದ್ದ ಈ ವಕೀಲರಿಗೆ ಎಷ್ಟೇ ಹೊಗಳಿದರು ಕಡಿಮೆ ಅಲ್ವ?

ಈ ನಡುವೆಯೇ ದೇವೇಗೌಡರು ಮತ್ತೆ ಪ್ರಧಾನಿ ಆದರೂ ಆಗಬಹುದು ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಈ ಬಾರಿ ಮೋದಿಯೂ ಪ್ರಧಾನಿ ಆಗಲ್ಲ, ರಾಹುಲ್ ಗಾಂಧಿಯೂ ಪ್ರಧಾನಿ ಆಗಲ್ಲ. ನನ್ನ ಲೆಕ್ಕಾಚಾರ ಪ್ರಕಾರ ಬಿಜೆಪಿ 160 ರಿಂದ 200 ಸೀಟಷ್ಟೇ ಬರುತ್ತದೆ. ಕಾಂಗ್ರೆಸ್ ನೂರು ಸೀಟು ಗಡಿ ದಾಟುತ್ತದೆ. ಪ್ರಧಾನಿ ಹುದ್ದೆಗೆ ದೇವೇಗೌಡರನ್ನು ಎಲ್ಲರೂ ಒಪ್ಪುತ್ತಾರೆ. ಮೇ 23ರವರೆಗೆ ಕಾಯಿರಿ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ನನ್ನ ಗೆಲುವು ಮುಖ್ಯವಲ್ಲ ತಂದೆಯ ಆರೋಗ್ಯ ಮುಖ್ಯ

ನಿನ್ನೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದ ನಿಖಿಲ್ ರಾಜಕೀಯ ಚಿಂತೆ ಬೇಡವೆಂದು ತಂದೆಗೆ ಸೂಚನೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದ ಬಗ್ಗೆ ಚಿಂತಿಸಬೇಡಿ. ಅಲ್ಲಿಯ ಚುನಾವಣೆ ಫಲಿತಾಂಶ ಏನೇ ಬಂದರೂ ಚಿಂತೆ ಇಲ್ಲ. ನಿಮ್ಮ ಆರೋಗ್ಯ ನನಗೆ ಮುಖ್ಯ. ಯಾವಾಗ ಬೇಕಿದ್ದರೂ ರಾಜಕೀಯ ಮಾಡಬಹುದು. ಚಿಂತೆ ಬಿಟ್ಟು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ಎಂದು ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೊಮ್ಮಗನ ಮಾತಿಗೆ ದೇವೇಗೌಡರೂ ಧ್ವನಿಗೂಡಿಸಿದ್ದು, ಮೊದಲು ಆರೋಗ್ಯದ ಕಡೆ ಗಮನ ನೀಡುವಂತೆ ಬುದ್ದಿ ಹೇಳಿದ್ದಾರೆ.

ಪ್ರಕೃತಿ ಚಿಕಿತ್ಸೆಯಲ್ಲಿ 3 ಕೆಜಿ ತೂಕ ಇಳಿಸಿದ ಸಿಎಂ

Also read: ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಈವರೆಗೆ ಸಿಕ್ಕಿರೋ ಹಣ 3,274 ಕೋಟಿ ರೂ. ಆಯೋಗದ ಕಣ್ ತಪ್ಪಿಸಿ ನಡೆದಿರೋ ಹಣ ಹಂಚಿಕೆ ಇನ್ನೆಷ್ಟೋ??

ಸಿಎಂ ಕುಮಾರಸ್ವಾಮಿ ಆಯುರ್ವೇದ ಚಿಕಿತ್ಸೆ ಪಡೆದು ಈಗಾಗಲೇ 3 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ 2 ಕೆಜಿ ತೂಕ ಇಳಿದಿತ್ತು. ಇದೀಗ ಡಯಟ್​ ಪಾಲಿಸುತ್ತಿರುವ ಸಿಎಂ ಮತ್ತಷ್ಟು ತೂಕ ಇಳಿಸಿಕೊಂಡಿದ್ದಾರೆ. ದೇವೇಗೌಡರಂತೆ ಇನ್ನುಮುಂದೆ ಕುಮಾರಸ್ವಾಮಿ ಕೂಡ ಶಾಖಾಹಾರಿಯಾಗಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆ ಆದಾಗಲೂ ವೈದ್ಯರು ಮಾಂಸಾಹಾರ ತ್ಯಜಿಸುವಂತೆ ಸಲಹೆ ನೀಡಿದ್ದರು. ಆಗ ವೈದ್ಯರ ಸಲಹೆ ಸರಿಯಾಗಿ ಪಾಲಿಸಲು ಸಾಧ್ಯವಾಗಿರಲಿಲ್ಲ. ಚುನಾವಣಾ ಪ್ರಚಾರದ ವೇಳೆಯೂ ಆಹಾರ ಪದ್ದತಿ ಸರಿಯಾಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಕೂಡ ಆಗಿರಲಿಲ್ಲ. ಈಗ ಮತ್ತೆ ವೈದ್ಯರ ಸಲಹೆ ಪಡೆದು ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.