ನೇಪಾಳದ ಈ ದೇವಾಲಯಕ್ಕೆ ಕರ್ನಾಟಕದ ಅರ್ಚಕರಿಂದ ಮಾತ್ರ ಪೂಜೆ ಮಾಡಿಸಲಾಗುತ್ತದೆ !

0
2261

ನೇಪಾಳ ದೇಶದ ಬಾಗ್ಮತಿ ನದಿ ದಡದಲ್ಲಿರುವ ಪಶುಪತಿನಾಥ ದೇವಾಲಯಕ್ಕೆ ಭಾರತೀಯ ಅರ್ಚಕರೇ ಪೂಜಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಅರ್ಚಕರೇ ಈ ಕಾರ್ಯ ನಡೆಸಬೇಕು.

ಹೌದು! ಭಾರತೀಯ ಸಂಪ್ರದಾಯದಂತೆ ಅಥವಾ ಸನಾತನ ಧರ್ಮದ ಸಂಪ್ರದಾಯದ ಪ್ರಕಾರವಾಗಿಯೇ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಶಂಕರಾಚಾರ್ಯರು ದೇವಾಲಯದ ಪೂಜಾ ಕೈಂಕರ್ಯಗಳ ವಿಧಾನ, ನಿಯಮಾವಳಿಗಳನ್ನು ಬರೆದಿದ್ದಾರೆ. ಶಂಕರಾಚಾರ್ಯರು ರೂಪಿಸಿರುವ ನಿಯಮಾವಳಿಗಳ ಪ್ರಕಾರ ಪಶುಪತಿನಾಥ ದೇವಾಲಯಕ್ಕೆ ಇಂದಿಗೂ ಸಹ ದಕ್ಷಿಣ ಭಾರತದ ಅರ್ಚಕರನ್ನೇ ನೇಮಕ ಮಾಡಲಾಗುತ್ತಿದ್ದು, ಅದರಲ್ಲೂ ಕರ್ನಾಟಕದ ಅರ್ಚಕರೇ ಪೂಜೆ ಸಲ್ಲಿಸಲು ಅರ್ಹರಾಗಿದ್ದಾರೆ.

t-1

ನೇಪಾಳದ ರಾಜವಂಶ ಇದನ್ನು ಅಂದಿನಿಂದಲೂ ಪಾಲಿಸಿಕೊಂಡು ಬಂದಿದ್ದು, ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರವೂ ಇದೇ ನಿಯಮಾವಳಿ ಮುಂದುವರೆದುಕೊಂಡುಬಂದಿದೆ.

ಪಶುಪತಿನಾಥನಿಗೆ ನಾಲ್ವರು ಅರ್ಚಕರು. ಹಿಂದೆ ತೆಲುಗು, ಮರಾಠಿ ಬ್ರಾಹ್ಮಣರು ಅಲ್ಲಿ ಸೇವೆಗಿದ್ದರು. ಬಳಿಕ ಸೌಕೂರು ನರಸಿಂಹ ಅಡಿಗರು ಮೊದಲಬಾರಿಗೆ ಕರ್ನಾಟಕದಿಂದ ಪಶುಪತಿಯ ಸೇವೆಗೆ ನೇಮಕವಾದರು. ನಿಧಾನವಾಗಿ ಮರಾಠಿ, ತೆಲುಗು ಅರ್ಚಕರಲ್ಲಿ ಒಬ್ಬೊಬ್ಬರ ಸ್ಥಾನ ತೆರವಾಗಿ ಇದೀಗ ಕನ್ನಡಿಗರೇ ಅಲ್ಲಿ ನೇಮಕವಾಗುತ್ತಿದ್ದಾರೆ. ಈ ದೇಗುಲದಲ್ಲಿ ವೇದ ಮತ್ತು ತಾಂತ್ರಿಕ ಆಚರಣೆಗಳು ಒಟ್ಟೊಟ್ಟಿಗೆ ನಡೆಯುವುದು ವಿಶೇಷ. ಬುದ್ಧಪೂರ್ಣಿಮೆಯಂದು ಲಿಂಗವನ್ನು ಬುದ್ಧನಾಗಿ ಪೂಜಿಸಲಾಗುತ್ತದೆ.

p1256974624-5

ನೇಪಾಳದ ಬಗ್ಗೆ :

ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಾಠ್ಮಂಡು.