ನೇರಳೆ ಉಪಯೋಗಗಳು

0
2673

ಸಂಶೋಧನೆಗಳ ಪ್ರಕಾರ, ನೇರಳೆ ಹಣ್ಣಿನಲ್ಲಿ ಕ್ಯಾನ್ಸರನ್ನು ತಡೆಗಟ್ಟಬಲ್ಲ ಅಂಶಗಳು ಹೇರಳವಾಗಿವೆ ಎಂದು ಸಂಶೋದಕರು ಹೇಳಿದ್ದಾರೆ.

ನೇರಳೆ ಉಪಯೋಗಗಳು :

 • ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ ಹಾಗೂ ‘ಸಿ’ ಜೀವಸತ್ವಗಳು ಸಮೃದ್ಧವಾಗಿರುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳೂ ಬಲಿಷ್ಠಗೊಳ್ಳುತ್ತವೆ.
 • ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡಲು ಉಪಯೋಗವಾಗುತ್ತದೆ.
 • ಮಧುಮೇಹಕ್ಕೆ ನೇರಳೆಹಣ್ಣು ರಾಮಬಾಣ. ಇದರ ಬೀಜಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆಗೊಳಿಸಬಹುದು.
 • ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಗುಣವಾಗುತ್ತವೆ.
  ರಕ್ತಹೀನತೆ ಕಾಯಿಲೆಗೆ ಒಳ್ಳೆಯ ಔಷಧಿ ನೇರಳೆ ಹಣ್ಣು.
 • ನೇರಳೆಯಲ್ಲಿ ಶಕ್ತಿಶಾಲಿ ಆಯಂಟಿಆಕ್ಸಿಡೆಂಟ್ಸ್ ಇರುವುದರಿಂದ ಹೃದ್ರೋಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು.
 • ನೇರಳೆ ಎಲೆ, ತೊಗಟೆ, ಬೀಜಗಳನ್ನು ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ.
 • ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ.
 • ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ.
 • ಕ್ಯಾನ್ಸರ್ ಬರದಂತೆ ಮಾಡುವಲ್ಲಿ ನೇರಳೆ ಹಣ್ಣು ಮುಖ್ಯ ಪಾತ್ರವಹಿಸುತ್ತದೆ.
 • ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
 • ನೇರಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಆಗುತ್ತದೆ. ಹಲ್ಲುಗಳು ಗಟ್ಟಿಗೊಳ್ಳುತ್ತವೆ.