ಪೋಷಕರೇ ನಿಮ್ಮ ಮಕ್ಕಳು ಬೆಳಗಿನ ಉಪಹಾರ ತಪ್ಪಿಸುತ್ತಿದ್ದರೆಯೇ..? ಕಾದಿದೆ ಗಂಡಾಂತರ..

0
1098

ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ತಿಂಡಿ ತಿನ್ನಿಸಲು ಪೋಷಕರು ಕಸರತ್ತು ಮಾಡಬೇಕು. ಪುಸ್ತಕಗಳ ಹೊರೆಹೊತ್ತು ಸಾಗುವ ತಮ್ಮ ಮಗು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಬೇಕೆಂಬ ಆತುರದಲ್ಲಿ ಮಗು ಉಪಾಹಾರ ಸೇವಿಸಿತೋ-ಇಲ್ವಾ ಎಂದು ಕೇಳುವ ತಾಳ್ಮೆ, ಸಮಾಧಾನ ಪೋಷಕರಿಗೆ ಇರುವುದಿಲ್ಲ. ಮಕ್ಕಳು ಆರೋಗ್ಯವಂತರಾಗಿರಲು ಮುಂಜಾನೆ ತಪ್ಪದೇ ಉಪಾಹಾರ ಸೇವಿಸುವಂತೆ ತಾಕೀತು ಮಾಡಬೇಕೆಂದು ಬ್ರಿಟನ್ನಿನ ಸಂಶೋಧಕರು ಪೋಷಕರಿಗೆ ಸಲಹೆ ನೀಡಿದ್ದಾರೆ.

source: familydoctor.org

ಮಕ್ಕಳು ಪ್ರತಿದಿನ ಉಪಾಹಾರ ಸೇವಿಸಲೇಬೇಕು ಹಾಗೂ ಬೆಳಗಿನ ಉಪಾಹಾರ ಸೇವಿಸದ ಮಕ್ಕಳಲ್ಲಿ ಎರಡರಷ್ಟು ಬೊಜ್ಜು ಬೆಳೆಯುವ ಸಾಧ್ಯತೆ ಇದೆ ಎಂದು ಸಂಶೋಧಕರು ದೃಢಪಡಿಸಿದ್ದಾರೆ. ಮಕ್ಕಳು ಬೆಳಗಿನ ತಿಂಡಿ ಸೇವಿಸದಿದ್ದಲ್ಲಿ ಮಧ್ಯಾಹದ ಊಟದ ಮೊದಲು ಹೆಚ್ಚು ಹಸಿವೆಯುಂಟಾಗುತ್ತದೆ. ಆಗ ಅವರು ಲಘು ಉಪಾಹಾರದ ಮೊರೆಹೋಗುತ್ತಾರೆ.

source: i3.mirror.co.uk

ಲಘು ತಿನಿಸು ಎಂದ ಮೇಲೆ ಅಲ್ಲಿ ಸಕ್ಕರೆ, ಕೊಬ್ಬು, ಹೇರಳವಾಗಿರುತ್ತದೆ. ಇವುಗಳಿಂದ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಸ್ಥೂಲಕಾಯ ನಿಮ್ಮ ಮಗುವಿನ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ತಪ್ಪದೇ ನಿಮ್ಮ ಮಗುವಿನ ಬೆಳಗಿನ ಉಪಾಹಾರವನ್ನು ಕಡ್ಡಾಯಗೊಳಿಸಬೇಕು. ಜತೆ ಹಾಲು, ಸೇವನೆ ಕೂಡ ಮಕ್ಕಳಿಗೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

source: milklife.com

ಇಂದಿನ ತಾಂತ್ರಿಕ, ಅತ್ಯಾಧುನಿಕ ಯುಗದಲ್ಲಿ ಎಲ್ಲವೂ ಜಂಕ್ ಫೂಡ್‍ಗಳದ್ದೇ ಕಾರುಬಾರು. ಮಕ್ಕಳಂತೂ ಚಿಪ್ಸ್, ಕೋಕಾಕೋಲಾ, ಪೆಪ್ಸಿ, ಬಿಸ್ಕೆಟ್, ಚಾಕೋಲೇಟ್…. ಹೀಗೆ ತಿನ್ನುವುದು ಎಲ್ಲವೂ ಆರೋಗ್ಯ ಹಾನಿಕಾರಕವೇ. ತಾಜಾ ತರಕಾರಿ, ಹಣ್ಣು, ಹಾಲು, ಬೆಣ್ಣೆ, ತುಪ್ಪ, ಸೊಪ್ಪು…. ಆರೋಗ್ಯ ಆಹಾರ ಸೇವನೆಯಿಂದ ಮಕ್ಕಳ ಸೇರಿದಂತೆ ಹಿರಿಯರು ಕೂಡ ಸದೃಢ ಆರೋಗ್ಯ ಪಡೆದುಕೊಳ್ಳಬಹುದಾಗಿದೆ.