ಕೇಂದ್ರದಿಂದ ಮತ್ತೊಂದು ಶಾಕ್, ಬರಲಿದೆ ಹೊಸ 100 ರೂ ನೋಟು….

0
1295

ಶೀಘ್ರದಲ್ಲೇ ಬರಲಿವೆ 100 ರೂ. ನ ಹೊಸ ನೋಟುಗಳು… ಹಾಗಾದ್ರೆ ಹಳೆಯ ನೋಟು!? ಮೂಲಗಳ ಪ್ರಕಾರ ಹೌದು ಎನ್ನಲಾಗಿದೆ. ಸ್ವಲ್ಪ ದಿನಗಳ ಹಿಂದೆ ದೊಡ್ಡ ಶಾಕ್ ಕೊಟ್ಟಿದ್ದ ಕೇಂದ್ರ ಈಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ… ಎರಡೂ ಬದಿಯ ಬದಲಾವಣೆಯೊಂದಿಗೆ 100 ರೂ ಮುಖಬೆಲೆಯ ಹೊಸ ನೋಟನ್ನು ಶೀಘ್ರದಲ್ಲಿಯೇ ಆರ್ ಬಿಐ ಬಿಡುಗಡೆ ಮಾಡಲಿದೆ. 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಹೊಸ 500 ರೂ. ಮತ್ತು 2000 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ.

ಮಹಾತ್ಮ ಗಾಂಧೀಜಿ ಸರಣಿ-2005 ರ ಅಡಿಯಲ್ಲಿ ನೋಟುಗಳನ್ನು ಮುದ್ರಿಸಿದ್ದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿರುತ್ತದೆ.
ಈ ನೋಟುಗಳಲ್ಲಿ ಸಂಖ್ಯೆಗಳ ಗಾತ್ರ ಏರಿಕೆ ಕ್ರಮದಲ್ಲಿದ್ದು, ಗುರುತಿನ ಚಿಹ್ನೆಯನ್ನು ವಿಸ್ತರಿಸಲಾಗಿರುತ್ತದೆ. ಬ್ಲೀಡ್ ಲೈನ್ ಗಳು ಹಾಗೂ ಗುರುತಿನ ಚಿಹ್ನೆಗಳನ್ನು ವಿಸ್ತರಣೆ ಮಾಡದಿರುವ ಕೆಲವು ನೋಟುಗಳನ್ನು ಸಹ ಆರ್ ಬಿಐ ಬಿಡುಗಡೆ ಮಾಡಲಿದೆ
ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ಈಗಾಗಲೇ ಚಲಾವಣೆಯಲ್ಲಿರುವ 20 ರೂ. ಹಾಗೂ 50 ರೂ. ನೋಟುಗಳೊಂದಿಗೆ ಹೊಸ 20 ರೂ. ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್.ಬಿ.ಐ. ಈಗಾಗಲೇ ತಿಳಿಸಿದೆ. ಮತ್ತೊಂದು ಸಂಗತಿ ಎಂದರೆ, ಆರ್.ಬಿ.ಐ. ನಿಂದ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲಾಗುವುದು. ಮಂಗಳವಾರ ಈ ಕುರಿತು ಪ್ರಕಟಣೆ ನೀಡಲಾಗಿದೆ. ಶೀಘ್ರದಲ್ಲೇ ಈ ನೋಟುಗಳು ಚಲಾವಣೆಗೆ ಬರಲಿದ್ದು, ಎಷ್ಟು ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತದೆ ಎಂದು ಆರ್ಬಿಐ ಹೇಳಿಲ್ಲ.ಹೊಸ ನೋಟುಗಳು ಚಲಾವಣೆಗೆ ಬಂದರೂ ಹಳೆ ನೋಟುಗಳು ಮೌಲ್ಯ ಕಳೆದುಕೊಳ್ಳುವುದಿಲ್ಲ. ಹಳೆ ನೋಟುಗಳು ಕೂಡಾ ಚಲಾವಣೆಯಲ್ಲಿರುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.