ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮೊತ್ತೊಂದು 500 ರೂ. ಹೊಸ ನೋಟ್‍ ಬಿಡುಗಡೆ..!

0
681

ಇದೇನಪ್ಪ ಮೊತ್ತೊಂದು ಯಾವ ನೋಟು ಮತ್ತೇನು ಆಗುತ್ತೆ ಅಂತ ಗಾಬರಿ ಆಗಬೇಡಿ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಬ್ಯಾಚ್‍ನ 500 ರೂ. ನೋಟ್‍ಗಳನ್ನ ಬಿಡುಗಡೆ ಮಾಡುತ್ತಿದೆ.
ಈ ಹೊಸ ನೋಟ್‍ಗಳು ಹಳೇ ನೋಟಿನ ವಿನ್ಯಾಸದಲ್ಲೇ ಇದ್ದು, ಹೊಸ ನೋಟಿನ ನಂಬರ್ ಪ್ಯಾನೆಲ್‍ನಲ್ಲಿ ‘A’ ಅಕ್ಷರ ಇರಲಿದೆ ಅಷ್ಟೇ.

Reserve Bank of India

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಆರ್‍ಬಿಐ, ಹೊಸ ಬ್ಯಾಚ್‍ನ 500 ರೂ. ನೋಟ್ ಬಿಡುಗಡೆ ಮಾಡಲಾಗುತ್ತಿದ್ದು, ಈ ನೋಟ್‍ಗಳಲ್ಲಿ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ‘A’ ಅಕ್ಷರ ಹಾಗೂ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇರಲಿದೆ. ಹಿಂಭಾಗದಲ್ಲಿ ಮುದ್ರಣದ ವರ್ಷ 2017 ಇರುವ ನೋಟ್‍ಗಳನ್ನ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.

ನೋಟಿನ ಮುಂಭಾಗದಲ್ಲಿ ಎಡ ಭಾಗದಲ್ಲಿ ಮೇಲೆ ಹಾಗೂ ಬಲಭಾಗದಲ್ಲಿ ಕೆಳಗೆ ಇರುವ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ‘E’ ಅಕ್ಷರವಿದೆ. ಅಲ್ಲದೆ ಮಹಾತ್ಮ ಗಾಂಧಿಯ ಭಾವಚಿತ್ರ, ಅಶೋಕ ಸ್ತಂಭ, ಬ್ಲೀಡ್ ಲೈನ್‍ಗಳು, ಬಲಭಾಗದಲ್ಲಿ 500 ಎಂಬ ಮುದ್ರಣ ಹಾಗೂ ಊರ್ಜಿತ್ ಪಟೇಲ್ ಅವರ ಸಹಿ ಇದೆ. ನೋಟಿನ ಹಿಂಭಾಗದಲ್ಲಿ ಸ್ವಚ್ಛ ಭಾರತದ ಲಾಂಛನ, ಕೆಂಪು ಕೋಟೆಯ ಚಿತ್ರ ಹಾಗೂ ನೋಟು ಮುದ್ರಣದ ವರ್ಷ ಇದೆ.

 

‘A’ ಅಕ್ಷರವಿರುವ ಹೊಸ ನೋಟುಗಳ ಜೊತೆಗೆ ಪ್ರಸ್ತುತ ಇರುವ ನೋಟುಗಳು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್‍ಬಿಐ ತಿಳಿಸಿದೆ.