ಟ್ರಾಫಿಕ್ ಪೋಲಿಸ್ -ರಿಗೆ ಚೆಳ್ಳೆಹಣ್ಣು ತಿನಿಸಿ ಪರಾರಿಯಾಗೋ ಪುಡಾರಿ ಬೈಕ್ ಸವಾರರಿಗೆ ಸೆಡ್ಡುಹೊಡೆಯಲು ಬಂದಿದೆ ಹೊಸ ಸ್ಮಾರ್ಟ್ App!!

0
685

ರೂಲ್ಸ್ ಬ್ರೇಕ್ ಮಾಡಿ ಹೈಲ್ಮೆಟ್ ಇಲ್ಲದೇ ಟ್ರಾಫಿಕ್ ಪೋಲಿಸ್ -ರಿಗೆ ಚಳ್ಳೆಹಣ್ಣು ತಿನಿಸಿ ಕಳ್ಳದಾರಿಯಲ್ಲಿ ಪರಾರಿಯಾಗುವ ಬೈಕ್ ಸವಾರಿ ಪುಡಾರಿಗಳಿಗೆ ಪೊಲೀಸ್ ಇಲಾಖೆ ಸ್ಮಾರ್ಟಾಗಿ ಹೈಟೆಕ್ ಜೇಡರಬಲೇಯನ್ನು ಕಂಡು ಹಿಡಿದಿದೆ. ಇನ್ಮುಂದೆ ನಿಮ್ಮ ಹುಚ್ಚರಾಟ ನಡೆಯೋದಿಲ್ಲ,

ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡು ಅಪಘಾತದ ಸಂದರ್ಭದಲ್ಲಿ ಪ್ರಾಣಕ್ಕೆ ಹಾನಿಯಾಗದಂತೆ ನೋಡಿಕೊಳುವುದು ಒಂದು ದಾರಿಯಾದರೆ ಪೊಲೀಸರಿಗೆ ಹಣಮಾಡಲು ಒಂದು ದಾರಿಯಾಗಿದೆ. ಕೆಲವೊಂದು ಸಮಯದಲ್ಲಿ ಸವಾರರಿಗೆ ದಂಡಕ್ಕಿಂತ ಹೆಚ್ಚಿನ ಹಣವನ್ನು ಹೇಳಿ ನಂತರ ಅದರ ಅರ್ಧಹಣವನ್ನು ಅವರ ಜೇಬಿಗೆ ತುಂಬಿಕೊಳುತ್ತಿರುವುದು ಗೊತ್ತಿರುವ ಸಂಗತಿನೆ ಕೆಲವೊಬ್ಬರಂತೂ ವಾಹನ ಹಿಡಿದರೆ ಮುಗಿತು ದುಡ್ಡು ಕೊಡಲೇ ಬೇಕು ಕೇಳಿದ ಲೈಸನ್ಸ್, ಇನ್ಸೂರೆನ್ಸ್, ಹೋಗೆ ತಪಾಸಣೆ. ಹೆಲ್ಮೆಟ್, ಎಲ್ಲತರದ ದಾಖಲಾತಿ ತೋರಿಸಿದರು ಕೊನೆಗೆ ಸ್ವಲ್ಪಹಣವಾದರು ಕೊಡಲೇಬೇಕು ಇಲ್ಲವಾದರೆ ವಾಹನವನ್ನು ಬಿಡುವುದೇ ಇಲ್ಲ, ಇದೊಂದು ವಾಹನ ಸವಾರರಿಗೆ ತಲೆ ನೋವುವಾಗಿದೆ. ಇಷ್ಟೆಲ್ಲಾ ಆದರು ಕೂಡ ಬೈಕ್ ಸವಾರರು ಮಾತ್ರ ಎಚ್ಚೆತುಕೊಳುತ್ತಿಲ್ಲ. ಕೆಲವೊಂದು ಸವಾರರು ಅಂತ್ರು ಯಾವುದೇ ದಾಖಲೆಗಳು ಇಲ್ಲದೆ ರೋಡ್ ಮೇಲೆ ಬೇಕಾಬಿಟ್ಟಿ ವಾಹನ ಚಲಾಯಿಸಿ ಸಾಯಿವುದು ಹೆಚ್ಚಾಗಿದೆ, ಟ್ರಾಪಿಕ್ ಪೊಲೀಸ್ರು ಇಂತವರನ್ನು ಹಿಡಿಯಲು ಹೋದರು ಕೈಗೆ ಸಿಗದೇ ಕಳ್ಳದಾರಿಯಲ್ಲಿ ತಪ್ಪಿಸಿಕೊಳ್ಳಲು ಹೋಗಿ ಬೇರೆಯವರ ವಾಹನಕ್ಕೆ ಡಿಕ್ಕಿಹೊಡೆದು ಇಲ್ಲವೆ ತಾವೇ ಬಿದು ಕೈಕಾಲು ಮುರಿದುಕೊಂಡು, ಪ್ರಾಣವನ್ನೇ ಕಳೆದು ಕೊಳ್ಳುತ್ತಿದ್ದಾರೆ.

ಇಂತಹ ಘಟನೆಗಳು ಸಂಭವಿಸಿದ್ದಾಗ ಸಾರ್ವಜನಿಕರು ಪೊಲೀಸರಿಗೆ ಶಾಪ ಹಾಕುತ್ತಿದ್ದರು. ಇದಕ್ಕೆ ಪೊಲೀಸ್ ಇಲಾಖೆ ಹಲವಾರು ವಿಧದ ತಂತ್ರಜ್ಞಾನವನ್ನು ಕಂಡು ಹಿಡಿದರು ಪ್ರಯೋಜನಕ್ಕೆ ಬಂದಿರಲಿಲ್ಲ. ಪುಡಾರಿಗಳು ಮಾತ್ರ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಬಿಟ್ಟಿರಲಿಲ್ಲ. ಈಗ ಇಂತಹವರನ್ನು ಹಿಡಿಯಲು ಪೊಲೀಸ್ ಇಲಾಖೆ ಹೊಸದೊಂದು ಹೈ ಯಂಡ್ ಸ್ಮಾರ್ಟ್‌ಫೋನ್‌ ಮತ್ತು app ವೊಂದನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ app ಸಹಾಯದಿಂದ ಒಂದೇ ಒಂದು ಪೋಟೋ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಜಾತಕ ಅವರ ಕೈ ಸೇರುತ್ತದೆ. ಒಂದು ವೇಳೆ ಬೈಕ್ ಸವಾರರು ಹೈಲ್ಮೆಟ್ ಇಲ್ಲದೇ ಗಾಡಿ ಓಡಿಸ ಬೇಕಾದರೆ, DL ಇಲ್ಲದೇ, ಮೂರು ಜನ ಸವಾರಿ ಮಾಡಬೇಕಾದರೆ ರಸ್ತೆಯಲ್ಲಿ ಅಡ್ಡ ಹಾಕುವ ಪೊಲೀಸರನ್ನು ಯಾಮಾರಿಸಿ ವೇಗವಾಗಿ ಕಳ್ಳದಾರಿಯಲ್ಲಿ ಹೋಗುವರನ್ನು ಹಿಡಿಯಿವ ಸಲುವಾಗಿ ಬೆಂಗಳೂರ ಟ್ರಾಫಿಕ್ ಪೊಲೀಸರು ಫುಲ್ ಆಟೋ ಮೆಟಿಕ್ ಆಗಿ ಕಾರ್ಯನಿರ್ವಹಿಸುವ app ವೊಂದನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಕಿಕೊಂಡಿದ್ದಾರೆ.

ಈ ಹೈಟೆಕ್ ಆಪ್‌ ಅನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರು ನಗರ ಪೊಲೀಸರಿಗೆ ಹೈಟೆಕ್ ಸ್ಮಾರ್ಟ್‌ಫೋನ್ ಅನ್ನು ನೀಡಲಾಗಿದೆ. ಇದರಲ್ಲಿ ಪವರ್ ಫುಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಂದು ಫೋಟೋವನ್ನು ಕ್ಲಿಕ್ ಮಾಡಿದರೆ ಸಾಕು ಅದರಲ್ಲಿ ನಿಮ್ಮ ವಾಹನದ ಬಣ್ಣ, ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವದಲ್ಲದೇ. ಈ ಎಲ್ಲಾ ಮಾಹಿತಿಯ ಜತೆಗೆ ಯಾವ ಪ್ರದೇಶದಲ್ಲಿ ಇದ್ದೀರಾ ಎಂಬುದನ್ನು ಕಂಡು ಹಿಡಿದು, ಟ್ರಾಫಿಕ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಗೆ ವರ್ಗಾಹಿಸಿಲಿದೆ. ಇಲ್ಲಿಂದ ಸಂಫೂರ್ಣ ಮಾಹಿತಿಯನ್ನು ಅವರು ಪಡೆದುಕೊಂಡು ನೇರವಾಗಿ ನಿಮ್ಮ ಮನೆಗೆ ನೋಟಿಸ್ ಕಳುಹಿಸುತ್ತಾರೆ. ಹಾಗೆಯೇ ನೀವು ಯಾವುದೇ ಅಪಘಾತ, ಕಳ್ಳತನ ಇನ್ಯಾವುದೇ ಕೃತ್ಯೆವೆಸಗಿ ತಪ್ಪಿಸಿಕೊಂಡರೆ ಮನೆಗೆ ಬಂದು ಎಳೆದುಕೊಂಡು ಹೋಗುತ್ತಾರೆ ಆದರಿಂದ ಸರಿಯಾಗಿ ವಾಹನದ ದಾಖಲಾತಿ, ರೋಡ್ ಕ್ರಮಗಳನ್ನು ಪಾಲನೆ ಮಾಡುವುದು ಒಳ್ಳೆಯದು.