ಪ್ರವಾಹದಿಂದ ಲಕ್ಷಾಂತರ ರಾಜ್ಯದ ಜನರು ಬೀದಿಯಲ್ಲಿ ನಿಂತರೆ ಬಿಜೆಪಿಯ ಹೊಸ ಸಚಿವರಿಗೆ ಇನ್ನೋವಾ ಬದಲು ದುಬಾರಿ ಫಾರ್ಚೂನರ್ ಕಾರೇ ಬೇಕಂತೆ..

0
261

ಇಡಿ ಕರ್ನಾಟಕ ತುಂಬೆಲ್ಲ ಪ್ರವಾಹದ ಅಲೆಯಲ್ಲಿ ಜನರು ತತ್ತರಿಸಿ ಹೋಗಿದ್ದು ಸಾವಿರಾರು ಮನೆಗಳು ಜಲಸಮವಾಗಿದ್ದು, ಲಕ್ಷಾಂತರ ಜನರು ಬಿಧಿಯಲ್ಲಿ ಜೀವನ ಸಾಗಿಸುವಂತೆ ಆಗಿದೆ. ಇದು ಎಂದು ಕಾಣದ ಪ್ರವಾಹವನ್ನು ಕಂಡ ಕರ್ನಾಟಕದ ಜನರು ಸರ್ಕಾರದ ನೆರವಿಗಾಗಿ ಕಾಯುತಿದ್ದಾರೆ. ಆದರೆ ನೂತನವಾಗಿ ಸರ್ಕಾರ ರಚನೆ ಮಾಡಿದ ಬಿಜೆಪಿ ಸರ್ಕಾರದ ಶಾಸಕರು ಪ್ರವಾಹದಲ್ಲಿ ಮುಳುಗಿದ ಜನರ ಬಗ್ಗೆ ಯೋಚನೆ ಮಾಡಿ ಆದಷ್ಟು ಬೇಗನೆ ಬದುಕು ಕಟ್ಟಿಕೊಳ್ಳಲು ಸಹಕಾರ ಮಾಡುವ ಬದಲು ಸಚಿವ ಸ್ಥಾನಕ್ಕಾಗಿ ಗುದ್ದಾಟ ನಡೆಸಿದ್ದಲ್ಲೇ, ಈಗಾಗಲೇ ಆಯ್ಕೆಯಾದ ಸಚಿವರು ದುಬಾರಿ ಬೆಲೆಯ ಫಾರ್ಚೂನರ್ ಕಾರಿಗೆ ಬೇಡಿಕೆ ಇಟ್ಟ ಬಗ್ಗೆ ಮಾಹಿತಿ ಬಂದಿದೆ.

Also read: ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ಇನ್ಮುಂದೆ ರಸ್ತೆ ಗುಂಡಿ ಕಾಣಿಸಿಕೊಂಡರೆ ಗುಂಡಿಗೆ ಸಾವಿರದಂತೆ ಇಂಜಿನಿಯರ್‌ಗೆ ಬಿಳ್ಳಲಿದೆ ದಂಡ.!

40-45 ಲಕ್ಷದ ಫಾರ್ಚೂನರ್ ಕಾರೇ ಬೇಕು?

ಹೌದು ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Also read: ದೇವೇಗೌಡರ ಕುಟುಂಬದ ಜಾತಕ ಬಿಚ್ಚಿಟ್ಟ ಸಿದ್ಧರಾಮಯ್ಯ; ಮೈತ್ರಿ ಸರ್ಕಾರದ ಪತನಕ್ಕೆ ಅಪ್ಪ ಮಕ್ಕಳ ಅತಿ ಆಸೆಯೇ ಕಾರಣವೆಂದ ಸಿದ್ದು..

ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸಿದೆ. ಒಂದು ಕಡೆ ಮಳೆರಾಯ ಜಲರಕ್ಕಸನ ಅವತಾರವೆತ್ತಿ ಅಬ್ಬರಿಸಿ ಬೊಬ್ಬಿರಿದಿದ್ದ. ಇನ್ನೊಂದೆಡೆ ಭೂ ಕುಸಿತ ಸಂಭವಿಸಿ ಜನ ಕಂಗಾಲಾಗಿದ್ದರು.

Also read: ಇನ್ಮುಂದೆ ತರಕಾರಿ ತರುವ ಸಾಹಸಕ್ಕೆ ಚಿಂತೆ ಬೇಡ; ರೈಲ್ವೆ, ಬಸ್ ನಿಲ್ದಾಣಗಳಲ್ಲೇ ಹಣ ಹಾಕಿ, ಬಟನ್ ಒತ್ತಿದರೇ ಸಾಕು ದೊರೆಯಲಿದೆ ಹಣ್ಣು-ತರಕಾರಿ.!

16 ಜಿಲ್ಲೆಗಳ 80 ತಾಲೂಕುಗಳ 840 ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿದ್ದವು. 624 ಪರಿಹಾರ ಕೇಂದ್ರ ತೆರೆಯಲಾಗಿದ್ದು ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು. ಪ್ರವಾಹ ಪೀಡಿತ ಪ್ರದೇಶಗಳ 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ. 3.22 ಲಕ್ಷ ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಹಾಗೂ ಮಲೆನಾಡಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಿ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಹಾಗೂ ಭೂ ಕುಸಿತದಿಂದ ಜನರು ಪರಿತಪಿಸುವಂತಾಗಿತ್ತು. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿ ಸಾಕಷ್ಟು ನೀರನ್ನು ಹರಿಬಿಡಲಾಗಿತ್ತು. ಇಷ್ಟೆಲ್ಲಾ ಆದರು ಕೂಡ ಸಚಿವರು ಜನರ ದುಡ್ಡಲ್ಲಿ ಶೋಕಿ ಮಾಡುವುದು ಬಿಟ್ಟು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಎಲ್ಲರ ಬೇಡಿಕೆಯಾಗಿದೆ.