ಏರ್ಪೋರ್ಟ್-ಗೆ ಹೋಗೋ ಎಲ್ಲಾ ಪ್ರಯಾಣಿಕರು ಈ ಹೊಸ ವಿಷಯವನ್ನು ಗಮನದಲ್ಲಿ ಇಟ್ಕೊಂಡಿಲ್ಲ ಅಂದ್ರೆ, ತುಂಬಾ ಪಜೀತಿ ಆಗಬಹುದು!!

0
670

ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವುದು ಎಂದ್ರೆ, ಫ್ಲೈಟ್​ ಪ್ರಯಾಣಿಕರಿಗೆ ಕಿರಿಕಿರಿ. ಇದನ್ನು ಅರಿತು ಕೊಂಡ ರಾಜ್ಯ ಸರ್ಕಾರ ಹೊಸ ಮಾರ್ಗವನ್ನು ತಯಾರಿಸಿತು. ಈ ರಸ್ತೆಯಲ್ಲಿ ಪ್ರಯಾಣಿಸಲು ಟೋಲ್​ ಸಹ ಕಟ್ಟ ಬೇಕಾಗಿಲ್ಲ. ಹೀಗಾಗಿ ಪ್ರಯಾಣಿಕರ ನೆಚ್ಚಿನ ರಸ್ತೆ ಇದಾಗಿತ್ತು. ಆದ್ರೆ ಈ ರಸ್ತೆ ಈಗ ಚರ್ಚಾವಸ್ತುವಾಗಿದೆ.

ಏರ್​ಪೋರ್ಟ್​​​​ಗೆ ಹೋಗಲು ಸಾಕಷ್ಟು ಟೋಲ್​ ಕಟ್ಟಲೇಬೇಕು.. ಈ ಬಗ್ಗೆ ಕ್ಯಾಬ್​ ಡ್ರೈವ್​​ರಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಟೋಲ್​ ಕಿರಿಕಿರಿಯನ್ನು ತಪ್ಪಿಸಲು ಪದೆ ಪದೆ ಮನವಿಯನ್ನು ಸಲ್ಲಿಸಿದ್ರು. ಇವರ ಮನವಿಗೆ ಸ್ಪಂದಿಸಿದ ಸರ್ಕಾರ ಏರ್ ಪೋರ್ಟ್ ರಸ್ತೆಯ ಟೋಲ್ ಕಿರಿಕಿರಿ ತಪ್ಪಿಸಲು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಹೊಸದೊಂದು ರೋಡ್ ಮಾಡಿತ್ತು. ಆದ್ರೆ ಈ ರಸ್ತೆಯಲ್ಲಿ ಓಡಾಡಲು ಪ್ರಯಾಣಿಕರು ಹೆದರುತ್ತಿದ್ದಾರೆ. ಈ ರಸ್ತೆಗಳಲ್ಲಿ ಓಡಾಡಿದ್ರೆ, ಬಿದಿ ಬದಿಯ ಊರಿನ ಜನ ಹಿಗ್ಗಾ ಮುಗ್ಗಾ ಥಳಿಸ್ತಾರಂತೆ.

ಇನ್ನು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲು ಕ್ಯಾಬ್​ ಡ್ರೈವರ್​​ಗಳು ಈ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡುತ್ತಿದ್ದರು. ಇದ್ರಿಂದ ಇಲ್ಲಿನ ಜನರಿಗೆ ತೊಂದರೆ ಆಗಿತ್ತು. ಅಲ್ಲದೆ ಜನರ ಪ್ರಾಣಕ್ಕೆ ಕುತ್ತು ತರುತ್ತಾ ಇದ್ದಾರಂತೆ. ಇನ್ನು ವೇಗವಾಗಿ ಕಾರ್​​ಗಳನ್ನು ಊರಿನ ಒಳಗಡೆ ಬಿಡ್ತಾ ಇಲ್ಲ. ಒಮ್ಮೆ ಏನಾದ್ರೂ ಚಾಲಕ ಈ ಮಾರ್ಗದಲ್ಲಿ ಬಂದ್ರೆ, ಅವರನ್ನು ಥಳಿಸುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಗೂ ದೂರ ನೀಡಲಾಗಿದ್ದು, ಕಾರ್​ ಚಾಲಕರು ನ್ಯಾಯ ಕೊಡಿಸಿ ಎಂದು ಕೇಳಿ ಕೊಳ್ತಾ ಇದ್ದಾರೆ.

ಸ್ಥಳೀಯ ಜನರ ಆಕ್ರೋಶ ಕಂಡು ಕ್ಯಾಬ್​ ಚಾಲಕರು ಟೋಲ್​ ತುಂಬಿದ್ರು ಪರವಾಗಿಲ್ಲ, ಜೀವ ಉಳಿಯುತ್ತೇ ಎಂಬ ಆಸೆಯಿಂದ ಹಳೆಯ ರಸ್ತೆಯಲ್ಲೇ ತೆರಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಕ್ಯಾಬ್​ ಡ್ರೈವರ್​ ಓರ್ವ, ಟೋಲ್​ ಮ್ಯಾನೆಜ್ಮೆಂಟ್​ ಈ ರೀತಿ ಹಲ್ಲೆ ನಡೆಸಲು ಗ್ರಾಮಸ್ಥರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಹೀಗೆ ಹಲ್ಲೆ ಮಾಡಿದ್ರೆ, ಕ್ಯಾಬ್​ ಚಾಲಕರು ಟೋಲ್​ ಕಟ್ಟಿ ಹೋಗ್ತಾರೆ ಎಂಬ ಪ್ಲಾನ್​ ಅವರದ್ದು ಎಂದು ದೂರಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ನ್ಯಾಯ ಕೊಡಿಸಲಿ ಎಂದು ಕೇಳಿಕೊಳ್ತಾ ಇದ್ದಾರೆ.