ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಕ್ರಿಕೇಟ್ ಸ್ಟೇಡಿಯಂ.. ಯಾವ ಜಾಗದಲ್ಲಿ?? ಇಲ್ಲಿದೆ ನೋಡಿ..

0
787

ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಂತೆ ಮತ್ತೊಂದು ಕ್ರಿಕೇಟ್ ಸ್ಟೇಡಿಯಂ ತಲೆ ಎತ್ತಲಿದೆ..

ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ ಮಾದರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಿಕೇಟ್ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಿದೆ..

ಈಗಾಗಲೇ ಬೆಂಗಳೂರಿನಲ್ಲಿ ಇರುವ ಹಲವಾರು ಮೈದಾನಗಳನ್ನು ಖಾಸಗಿ ಶಾಲೆಗಳಿಗೆ ಗುತ್ತಿಗೆ ನೀಡಿರುವುದರಿಂದ ಮಕ್ಕಳಿಗೆ ಆಟವಾಡಲು ಮೈದಾನದ ಕೊರತೆ ಕಾಣುತ್ತಿದೆ..

ಸರ್ಕಾರಕ್ಕೆ ಮನವಿ..

ಅಂತರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಯೋಜನೆ ರೂಪಿಸಿ.. ಅದಕ್ಕೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ..

ಯಾವ ಜಾಗ??

ಈಗಾಗಲೇ ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ವಾರ್ಡ್ ನಲ್ಲಿ ಒತ್ತುವರಿದಾರರಿಂದ ಜಿಲ್ಲಾಢಳಿತ 40 ಎಕರೆ ಜಾಗವನ್ನು ವಶಪಡಿಸಿಕೊಂಡಿದೆ.. ಅದೇ ಜಾಗವನ್ನು ಕ್ರಿಕೇಟ್ ಸ್ಟೇಡಿಯಂ ನಿರ್ಮಾಣಕ್ಕೆ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ..

ಅಂದುಕೊಂಡಂತೆ ಯೋಜನೆ ಕಾರ್ಯರೂಪಕ್ಕೆ ಬಂದರೆ ಒಟ್ಟು 25 ಕೋಟಿ ವೆಚ್ಚ ದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ.. ಈಗಾಗಲೇ ಸರ್ಕಾರದಿಂದ ವಿಶೇಷ ನೆರವು ಕೇಳಿರುವ ಬಿಬಿಎಂಪಿ ಸದ್ಯದಲ್ಲೇ ನಿರ್ಮಾಣ ಕೆಲಸ ಶುರು ಮಾಡಲಿದೆಯಂತೆ..

ಸರ್ಕಾರದಿಂದ ನೆರವು ಸಿಗದಿದ್ದರೇ ಬೆಂಗಳೂರಿನ ಮೇಯರ್, ಹಾಗೂ ಬೆಂಗಳೂರು ನಗರಾಭಿವೃದ್ಧಿ ಹಾಗೂ ಇತರೆ ನಿಧಿ ಪಡೆದು ನಿರ್ಮಾಣ ಕಾರ್ಯ ಶುರು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ..

ಅಂದುಕೊಂಡಂತೆ ಎಲ್ಲಾ ಆದರೆ.. ಚಿನ್ನಸ್ವಾಮಿ ಕ್ರೀಡಾಂಗಣದಂತೆ ಬೆಂಗಳೂರಿಗೆ ಮತ್ತೊಂದು ಅಂತರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಸಿಗಲಿದೆ..