ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ ಹೊಸ ನಾಡಧ್ವಜದಲ್ಲಿ ಏನು ವಿಶೇಷವಿದೆ ಗೊತ್ತೇ?

0
660

Kannada News | Karnataka News

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಇರಬೇಕು ಹಾಗು ಈಗಿರುವ ಅರಿಶಿನ ಹಾಗು ಕೆಂಪು ಬಣ್ಣದ ಧ್ವಜದಲ್ಲಿ ಬದಲಾವಣೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು ದಿನಗಳಿಂದ ಹೇಳಿಕೊಂಡು ಬಂದಿದ್ದರು. ಈಗ ಅವರ ಕನಸು ನನಸಾಗಿದೆ ಹೊಸ ಧ್ವಜ ಅಂಗೀಕಾರವಾಗಿದೆ ಹೊಸ ನಾಡ ಧ್ವಜದಲ್ಲಿ ಏನು ವಿಶೇಷವಿದೆ ಗೊತ್ತೇ.

ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಸಿಎಂ ಹೊಸ ನಾಡ ಧ್ವಜವನ್ನು ಅನಾವರ್ಣಗೊಳಿಸಲಾಗಿದೆ ಸಮಿತಿ ಶಿಫಾರಸ್ಸು ಮಾಡಿದ ಧ್ವಜವನ್ನೇ ಅಂಗೀಕರಿಸಲಾಗಿದೆ ಎಂದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಮಾತನಾಡಿ ಸರ್ವಾನು ಮತದಿಂದ ಅಂಗೀಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರ ಸಮಿತಿ ನೀಡಿದ ಏಳೆಂಟು ಮಾದರಿಗಳನ್ನು ನೋಡಿ ಅದರಲ್ಲಿ ಒಂದನ್ನು ಅಂತಿಮಗೊಳಿಸಲಾಗಿದೆ. ಹೊಸ ಧ್ವಜದ ಮೇಲ್ಭಾಗದಲ್ಲಿ ಹಳದಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಗೆ ಕೆಂಪು ಬಣ್ಣಗಳಿದ್ದು, ಬಿಳಿ ಬಣ್ಣದ ನಡುವೆ ರಾಜ್ಯ ಸರ್ಕಾರದ ಲಾಂಛನ ಹಾಕಲಾಗಿದೆ.

ಹಳದಿ ಸಮೃದ್ಧಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಕೆಂಪು ಸ್ವಾಭಿಮಾನದ ಹಾಗೂ ಧೈರ್ಯದ ಸಂಕೇತವಾಗಿದೆ. ನಾಡಧ್ವಜ ರಚಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ರಾಜ್ಯದ ಇತಿಹಾಸ, ಕಾನೂನಿನ ಇತಿಮಿತಿಗಳನ್ನ ಅಧ್ಯಯನ ಮಾಡಿ 3 ಬಣ್ಣಗಳ ಧ್ವಜ ನೀಡಿದ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಲಾಗಿದೆ ಎಂದು ಸಿಎಂ ವಿವರರಿಸಿದರು.

ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿದ್ದೆ ಆದರೆ ನಮ್ಮ ರಾಜ್ಯ ಜಮ್ಮು– ಕಾಶ್ಮೀರ ಬಳಿಕ ಸ್ವಂತ ಧ್ವಜ ಹೊಂದಿದ ಎರಡನೇ ರಾಜ್ಯ ಆಗಲಿದೆ. ವಿಧಾನಸಭೆ ಚುನಾವಣೆ ಘೋಷಣೆ ಆಗುವುದರೊಳಗಾಗಿ ಪ್ರತ್ಯೇಕ ಧ್ವಜ ಹೊಂದುವ ಗುರಿಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ, ಇದರಿಂದ ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ಚಿಂತನೆ ನಡೆಸಿದ್ದಾರಂತೆ.

Also Read: ಹೆಲ್ಮೆಟ್ ಧರಿಸಿಲ್ಲ ಎಂದು ಫಿಲ್ಮಿ ರೀತಿಯಲ್ಲಿ ಬೈಕ್ ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್, ಪ್ರಾಣ ಉಳಿಸಬೇಕಾಗಿರೋರೆ ಪ್ರಾಣ ತೆಗೆದ್ರು…