ಈ ಹೊಸ ನಿಯಮ ಜಾರಿಗೆ ಬಂದರೆ ಇನ್ಮುಂದೆ ಬರೀ ISI ಹೆಲ್ಮೆಟ್ ಮಾತ್ರ ಬಳಸಬೇಕಂತೆ, ಈ ನಿಯಮ ಒಳ್ಳೆದಾ ಕಿರಿಕಿರಿನಾ??

0
440

ಬೈಕ್ ಅಪಘಾತದಲ್ಲಿ ಸಾವಿನ ಸಂಖ್ಯೆಯನ್ನು ತಗ್ಗಿಸಲು ಮತ್ತು ಹೆಚ್ಚು ಅಪಾಯ ಆಗದೆ ಇರಲು ಪ್ರತಿಯೊಂದು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು ಎನ್ನುವ ನಿಯಮವನ್ನು ದೇಶದೆಲ್ಲೆಡೆ ಜಾರಿ ಮಾಡಲಾಗಿದೆ. ಇದರಿಂದ ಎಷ್ಟೊಂದು ಉಪಯೋಗವಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಸಂಚಾರಿ ಪೊಲೀಸ್ ಇಲಾಖೆ ಕೂಡ ಯಶಸ್ವಿಯಾಗುತ್ತಿಲ್ಲ. ಇನ್ನು ದಿನದಿಂದ ದಿನಕ್ಕೆ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವನಪ್ಪುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಶೀಘ್ರದಲ್ಲೇ ಹೆಲ್ಮೆಟ್ ನಿಯಮವನ್ನು ಬದಲಾವಣೆ ತರಲಿದೆ.

Also read: ಮಕ್ಕಳ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಜನಪ್ರಿಯವಾಗಿರುವ ಜಾನ್ಸನ್ ಬೇಬಿ ಶಂಪೂ ಮಕ್ಕಳಿಗೆ ಹಾನಿಕಾರಕ ಎಂದು ರದ್ದಾಗಿದೆ, ಇದು ಇನ್ನೂ ನಿಮ್ಮ ಮನೆಯಲ್ಲಿದ್ದರೆ ಬಿಸಾಡಿ!!

ಹೌದು ಹೆಲ್ಮೆಟ್​ ಕಡ್ಡಾಯ ಎಂಬ ನಿಯಮವನ್ನು ಕಾಟಾಚಾರಕ್ಕೆ ಪಾಲಿಸುವುದರಿಂದ ಜೀವದ ಮೇಲೆ ಯಾವುದೇ ಗ್ಯಾರೆಂಟಿ ಇಲ್ಲ. ಎನ್ನುವ ಬಗ್ಗೆ ಹಲವು ಉದಾಹರಣೆಗಳಿವೆ. ಅದರಲ್ಲಿ ಬಹಳಷ್ಟು ಜನರು ಪೊಲೀಸರಿಂದ ತಪ್ಪಿಸಲು ಕಳಪೆ ಗುಣಮಟ್ಟ ಕಡಿಮೆ ದರದ ಹೆಲ್ಮೆಟ್ ಮೊರೆ ಹೋಗುತ್ತಿದ್ದಾರೆ. ಏಕೆಂದರೆ ಪೊಲೀಸರು ಬೈಕ್ ಸವಾರರ ಮೇಲೆ ಹೇರಿದ ಹೊರೆ ಎಂದುಕೊಂಡ ಹಲವರು ಅದರ ಬಗ್ಗೆ ಅಷ್ಟೊಂದು ಜವಾಬ್ದಾರಿಯ ವರ್ತನೆಯನ್ನು ವಹಿಸುತ್ತಿಲ್ಲ, ಇದೆ ಈ ನಿಯಮದ ವಿಫಲಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿಯಮವನ್ನು ಸುಧಾರಣೆ ತರಲು ಯೋಜನೆಯನ್ನು ರೋಪಿಸಿದ್ದು,

ಕೇಂದ್ರದ ಹೊಸ ಯೋಜನೆ ಏನು?

Also read: ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು!

ಹೆಲ್ಮಟ್ ಧರಿಸದೆ ಅಥವಾ ಕಳಪೆ ಗುಣಪಟ್ಟದ ಹೆಲ್ಮಟ್ ಬಳಸುವ ಪದ್ದತಿಯನ್ನು ತಡೆಯಲು ಸರ್ಕಾರ ಗುಣಮಟ್ಟದ ಹೆಲ್ಮೆಟ್ ಕಾಯ್ದೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. BIS ಕಾಯ್ದೆಯಡಿಯಲ್ಲಿ ಗುಣಮಟ್ಟದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ. ಅದರಂತೆ ದೇಶದಲ್ಲಿ ದೇಶದಲ್ಲಿ ವಾರ್ಷಿಕವಾಗಿ 2 ಕೋಟಿ ಹೆಲ್ಮೆಟ್ ತಯಾರಿಸಲಾಗುತ್ತಿದ್ದು, ಇದರಲ್ಲಿ ಶೇ.70 ರಷ್ಟು ಹೆಲ್ಮೆಟ್​ಗಳನ್ನು ಸಣ್ಣ ಕಂಪೆನಿಗಳು ಮತ್ತು ಕಾನೂನು ಬಾಹಿರ ಉತ್ಪಾದನೆ ಮೂಲಕ ಹೊರ ತರಲಾಗುತ್ತಿದೆ. ಇಂತಹ ಕಂಪೆನಿಗಳು ಜೀವ ಸುರಕ್ಷತೆ ಬಗ್ಗೆ ಕಾಳಜಿವಹಿಸುವುದಿಲ್ಲ. ಇದೇ ಕಾರಣದಿಂದ ಹೆಲ್ಮೆಟ್​ ಬಳಸಿದರೂ, ಅಪಘಾತದ ಸಂದರ್ಭದಲ್ಲಿ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿ ಚಾಲಕರು ಅಸುನೀಗುತ್ತಿದ್ದಾರೆ.

ಕಳೆದ 5 ವರ್ಷಗಳಲ್ಲಿ ಪುಣೆ ನಗರವೊಂದರಲ್ಲೇ ಬರೋಬ್ಬರಿ 1 ಸಾವಿರ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಮಾತ್ರ ಹೆಲ್ಮೆಟ್​ ಧರಿಸಿಯೂ ಸಾವನ್ನಪ್ಪಿದವರು. ಉಳಿದವರು ಹೆಲ್ಮೆಟ್​ ಧರಿಸಿರದೇ ಇದ್ದಿದ್ದೂ ಸಾವಿಗೆ ಒಂದು ಪ್ರಮುಖ ಕಾರಣವಾಗಿದೆ. ಎನ್ನುವ ಪೊಲೀಸರ ಬಳಿ ಇರುವ ದಾಖಲೆಯ ಹೇಳುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಇಂತಹ ಹೆಲ್ಮೆಟ್​ಗಳಿಗೆ ಕಡಿವಾಣ ಹಾಕಲು ಸರ್ಕಾರ ವಾಹನ ಸವಾರರು ಬಳಸುವ ಹೆಲ್ಮಟ್ ಗಳಿಗೆ ISI ಮಾರ್ಕ್​ ಅನ್ನು ಕಡ್ಡಾಯಗೊಳಿಸಲು ಯೋಜನೆ ರೂಪಿಸುತ್ತಿದೆ. ಈ ಹೊಸ ಮೋಟರ್ ವಾಹನ ಕಾಯ್ದೆಯನ್ನು ಶೀಘ್ರದಲ್ಲೇ ಘೋಷಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದೆ.

ಈ ನಿಯಮದಿಂದ ಏನು ಪ್ರಯೋಜನ?

Also read: ಇನ್ಮುಂದೆ ದೇವಾಲಯಗಳಿಗೆ ಪ್ಲಾಸ್ಟಿಕ್‌ ಚೀಲಗಳನ್ನು ತಂದರೆ ದೇವರ ದರ್ಶನ ಇಲ್ಲ; ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿಯ ಆದೇಶ..

ಕೇಂದ್ರ ಸರ್ಕಾರದ ಹೊಸ ನಿಯಮ ಜಾರಿಯಾದರೆ ಬೈಕ್ ಮತ್ತು ಸ್ಕೂಟರ್ ಸವಾರರ ಹೆಲ್ಮೆಟ್ ಮೇಲೆ ISI ಮಾರ್ಕ್ ಇರಬೇಕಾಗಿರುವುದು ಕಡ್ಡಾಯವಾಗಲಿದೆ. ಅಲ್ಲದೆ ಇದನ್ನು ಪರಿಶೀಲಿಸಲು ಹೊಸ ವಿಧಾನದ ಬಗ್ಗೆ ಕೂಡ ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಬಿಐಎಸ್ ಆಕ್ಟ್ 2016 ರ ಅಡಿಯಲ್ಲಿ ಈ ಹಿಂದೆಯೇ ಹೆಲ್ಮೆಟ್​ ಸುರಕ್ಷತೆಯ ಪ್ರಮಾಣ ಪತ್ರ ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. 2018 ರಲ್ಲಿ ಇದರಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಹೆಲ್ಮೆಟ್​ನ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಈ ನಿಯಮಕ್ಕೆ ಮತ್ತಷ್ಟು ಪ್ರಾಧನ್ಯತೆ ನೀಡಿ ಹೊಸ ಹೆಲ್ಮೆಟ್ ನಿಯಮ ಜಾರಿಯಾಗಲಿದೆ.

ಒಟ್ಟಾರೆಯಾಗಿ ಹೆಲ್ಮೆಟ್​ ಧರಿಸದೇ ಇದ್ದರೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಬದುಕುಳಿಯುವ ಸಾಧ್ಯತೆ ತೀರ ವಿರಳ. ಹೀಗಾಗಿ ಗುಣಮಟ್ಟದ ಹೆಲ್ಮೆಟ್ ನಿಯಮ ದೇಶದೆಲ್ಲೆಡೆ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ.