ಹೊಸ ನೋಟಿನ ಶುಚಿತ್ವಕ್ಕೆ ಈ ಎಂಟು ಸೂಚನೆಗಳು ಅತ್ಯಗತ್ಯ…

0
1207

ಐನೂರು ಮತ್ತು ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಿ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿ ಸರಕಾರ. ಹೊಸ ನೋಟುಗಳ ಪೂರೈಕೆ ಈಗಾಗಲೇ ಪ್ರಾರಂಭಿಸಲಾಗಿದೆ.ಅವರೇನೋ ಬುಡುಗಡೆಗೊಳಿಸಿದ್ದಾರೆ ಆದರೆ ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಇಲ್ಲಿಯವರೆಗೆ ನೀವು ನೋಟಿನ ಮೇಲೆ ಎನಾದರು ಬರೆಯುತ್ತಿದ್ದಿರಿ. ಆದರೆ ಇನ್ನು ಮುಂದೆ ನೋಟಿನ ಮೇಲೆ ಏನನ್ನು ಬರೆಯಲು ಹೋಗಬೇಡಿ, ದೇಶದ ಕರೆನ್ಸಿಯ ಬಗ್ಗೆ ಒಲವು ಇರಲಿ.

  • ನೋಟಿನ ಮೇಲೆ ಏನನ್ನೂ ಬರೆಯಲು ಹೋಗಬೇಡಿ, ನೋಟುಗಳನ್ನು ಸ್ವಚ್ಛವಾಗಿ ಇಡುವ ಮನಸ್ಸು ಮಾಡಿ…
  • ಕೆಲವು ಮಂದಿ ಕವನಗಳನ್ನೇ ಗೀಚಿರುತ್ತಾರೆ, ಮತ್ತೂ ಕೆಲವರು ತಮ್ಮಗೆ ಇಷ್ಟವಾದವರ ಹೆಸರನ್ನು ಬರೆಯುವ ಚಾಳಿ ಇರುತ್ತದೆ. ಇಂತಹ ವಿಕೃತ ಪ್ರತಿಭೆಗಳನ್ನು ನಿಲ್ಲಿಸುವುದು ಒಳ್ಳೆಯದೆ.
  • ನೋಟು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು, ತಿಳುವಳಿಕೆ ಕಮ್ಮಿ ಇರುವ ಜನರಲ್ಲಿ ಜಾಗೃತಿ ಮೂಡಿಸಿ.
  • ನೋಟುಗಳನ್ನು ಉಂಡೆ ಮಾಡಿಟ್ಟುಕೊಳ್ಳುವುದನ್ನು ಮಾಡಬೇಡಿ, ಹೀಗೆ ಮಾಡಿದರೆ ನೋಟುಗಳ ಬಾಳಿಕೆ ಕಡಿಮೆಯಾಗುತ್ತದೆ.
  • ಒಂದು ವೇಳೆ ನೋಟಿನ ಮೇಲೆ ಎನಾದರು ಬರೆದರೆ, ದೇಶದ ಯಾವುದೇ ಬ್ಯಾಂಕ್ ಆ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಸಾಮಾನ್ಯ ಜ್ಞಾನವಿರಲಿ.
  • ಎಣ್ಣೆಗೆ ತಾಗದೆ ಇರುವ ರೀತಿಯಲ್ಲಿ ಮುಂಜಾಗ್ರತೆ ವಹಿಸಿ. ಎಣ್ಣೆ ಅಂಟಿದ ನೋಟು ಚಲಾವಣೆಯಾಗುವುದಿಲ್ಲ ಎಂಬುದು ನೆನಪಿರಲಿ
  • ನೀವು ನೋಟಿನ ಮೇಲೆ ಬರೆದರೆ ಅದು ಮತ್ತೊಬ್ಬರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಗಾಣಿರಿ. ಜಾಗೃತಿ ಇರಲಿ.
  • ನೀವೇನಾದರೂ ಬರೆದರೆ ಖಂಡಿತ ೧೫೦೦೦ ಸಾವಿರ ದಂಡ ತೆರಬೇಕಾಗುತ್ತದೆ, ಜೊತೆಗೆ ೨ ವರ್ಷ ಜೈಲು ಶಿಕ್ಷೆ ಖಂಡಿತ.

ನೋಟಿನ ಶುಚಿತ್ವ ಕಾಪಾಡುವ ಅಭಿಯಾನ ಅಗತ್ಯವಿದೆ, ಇದನ್ನು ಎಲ್ಲರೂ ಮಾಡಬೇಕು.