ನರೇಂದ್ರ ಮೋದಿಯವರ ಕಲರ್ ಕಲರ್ ಹೊಸ ನೋಟುಗಳ ಬಾಳಿಕೆ ಬರಿ ಎರಡು ವರ್ಷವಂತೆ; ಹೊಸ ನೋಟುಗಳ ಬಗ್ಗೆ ದೇಶದೆಲ್ಲೆಡೆ ಅನುಮಾನ…

0
441

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2016ರಲ್ಲಿ ನೋಟು ಅಪನಗದೀಕರಣ ಮಾಡಿ ಕಲರ್ ಕಲರ್ ಹೊಸ ನೋಟುಗಳನ್ನ ಜಾರಿಗೆ ತಂದು, 500 ಹಾಗೂ 2000 ರೂ. ಚಲಾವಣೆಗೆ ತಂದಿದ್ದರು. ಪ್ರಾರಂಭದಲ್ಲೇ ಈ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ಮತ್ತೆ ಹೊಸ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದರ ಬಗ್ಗೆ ದೇಶದೆಲ್ಲಡೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

Also read: ಖೋಟಾ ನೋಟುಗಳ ಹಾವಳಿ ಜಾಸ್ತಿಯಾಗ್ತಿದೆ, ಖೋಟಾ ನೋಟನ್ನು ಪತ್ತೆ ಹಚ್ಚುವುದು ಹೇಗೆ ಅಂತ ಹೇಳ್ತೀವಿ ನೋಡಿ!!

ಹೌದು ಅಪನಗದೀಕರಣದ ಬಳಿಕ ಜಾರಿಗೆ ತರಲಾಗಿದ್ದ 2,000 ಮತ್ತು 500 ರೂ. ಹೊಸ ನೋಟುಗಳು ಅನುಪಯುಕ್ತವಾಗುತ್ತಿವೆ ಎಂದು ಹೇಳಲಾಗಿದೆ. ಹೊಸ ನೋಟುಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಹರಿದ ನೋಟುಗಳ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಹೊಸ ನೋಟುಗಳ ಗುಣಮಟ್ಟಕ್ಕೆ ಹೋಲಿಸಿದರೆ ಹಳೆಯ 1,000 ಮತ್ತು 500 ರೂ. ಮುಖಬೆಲೆಯ ನೋಟುಗಳ ಗುಣಮಟ್ಟ ಅತ್ಯಂತ ಉತ್ತಮವಾಗಿತ್ತು ಒಂದು ಬಾರಿ ನೂತನ ನೋಟುಗಳನ್ನು ಬಳಸಿದರೆ ಮತ್ತೆ ಎಟಿಎಂಗೆ ಬಳಸಿದ ನೋಟುಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಳಸಿದ ನೋಟನ್ನು ಎಟಿಎಂಗೆ ಹಾಕಿದರೆ, ಜನರು ಹಣ ಡ್ರಾ ಮಾಡುವಾಗ ಎಟಿಎಂನಲ್ಲಿ ಅಳವಡಿಸಿರುವ ಸೆನ್ಸಾರ್ ಬಳಸಿದ ನೋಟನ್ನು ಸೆನ್ಸಾರ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಳಸಿದ ನೋಟುಗಳನ್ನು ‘ಅನುಪಯುಕ್ತ ನೋಟು’ ಗಳೆಂದು ವಿಂಗಡಿಸಿ ಆರ್ ಬಿಐ ಗೆ ಬ್ಯಾಂಕುಗಳು ವಾಪಸ್ ಕಳಿಸುತ್ತಿದೆ ಎಂದು ವರದಿಯಾಗಿದೆ.

ಕಳಪೆ ಗುಣ ಮಟ್ಟದ ನೋಟುಗಳಿಗೆ ಕಾರಣವೇನು?

ಹೊಸ ನೋಟು ತಯಾರಿಕೆಯಲ್ಲಿ ಬಳಸುವ ಕಚ್ಚಾ ಪೇಪರ್ ಗುಣಮಟ್ಟ ಸರಿಯಾಗಿ ಇಲ್ಲ ಹಿಂದಿನ ಹಳೆಯ ನೋಟುಗಳ ತಯಾರಿಕೆಯಲ್ಲಿ ಬಳಸುವ ಪೇಪರ್ ಗುಣಮಟ್ಟ ಸರಿಯಾಗಿತ್ತು. ಈಗಿನ ನೋಟುಗಳು ಕಳಪೆಯಾಗಿವೆ ಎಂದು ವರದಿಯಲ್ಲಿ ತಿಳಿಸಿದೆ. ಈ ವರದಿಯನ್ನು ಅಲ್ಲೆಗಳೆದಿರುವ ಕೇಂದ್ರ ಸರ್ಕಾರ, ಕೋಟಾನೋಟುಗಳ ತಯಾರಿಕೆಯನ್ನು ತಪ್ಪಿಸಲು ಇಂತಹ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೇವೆ ಎಂದು ಹೇಳಿದೆ.

Also read: ಪ್ಲಾಸ್ಟಿಕ್ ಕರೆನ್ಸಿ ನೋಟುಗಳ ಮುದ್ರಣ ಕೇಂದ್ರ ಸರ್ಕಾರದ ಹೊಸ ಯೋಜನೆ

ಈ ವಿಷಯವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಬ್ಯಾಂಕಿಂಗ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಜನರು ನೋಟುಗಳ ಬಳಕೆಯಲ್ಲಿ ಸರಿಯಾದ ಕ್ರಮ ಅನುಸರಿಸುತ್ತಿಲ್ಲ, ಮತ್ತು ಅವುಗಳ ಬಳಕೆಯಲ್ಲಿ ದೊಡ್ಡ ತಪ್ಪುಗಳನ್ನು ಕಂಡು ಬರುತ್ತಿವೆ, ಮಡಚುವುದು, ಸೀರೆಯಲ್ಲಿ ಗಂಟು ಹಾಕಿ ಇಡುವುದು, ಪಂಚೆಯಲ್ಲಿ ಮುದುಡಿಕೊಂಡು ನೋಟುಗಳನ್ನು ಹಾಳು ಮಾಡುತ್ತಿದ್ದಾರೆ. ಎಂದು ತಿಳಿಸಿದ್ದಾರೆ.

ಹೊಸ ನೋಟುಗಳ ಬಗ್ಗೆ ಬ್ಯಾಂಕ್-ಗಳ ಅಭಿಪ್ರಾಯ?

ಬ್ಯಾಂಕ್ ಅಧಿಕಾರಿಗಳ ಪ್ರಕಾರ ಮುಖಬೆಲೆಯ ರೂ. 2000 ಹಾಗೂ 500 ನೋಟುಗಳಿಗಿಂತ ಈ ವರ್ಷ ಮುದ್ರಣವಾದ ರೂ. 10 ನೋಟು ಬೇಗ ಹಾಳಾಗುತ್ತಿದೆ. ಒಂದು ದಿನದಲ್ಲಿ ನೂರಾರು ಜನರ ಕೈಸೇರುವ ಹತ್ತು ರೂಪಾಯಿ ನೋಟು ಬೇಗ ಹಾಳಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ನಿರ್ವಹಣಾ ವೆಚ್ಚ

Also read: ಹೊಸದಾಗಿ ಮುದ್ರಿತವಾದ ನೋಟುಗಳು ೧೯೬೦ರ ರಾಷ್ಟ್ರಪತಿ ಆದೇಶಕ್ಕೆ ವಿರುದ್ಧವಾಗಿದೆ

ಹೊಸ ನೋಟುಗಳ ಮುದ್ರಣಕ್ಕೆ ಹೆಚ್ಚು ವೆಚ್ಚ ತಗಲಿದ್ದು, ಅಲ್ಲದೇ ಅದರ ನಿರ್ವಹಣಾ ವೆಚ್ಚ ಕೂಡ ದುಪ್ಪಟ್ಟಾಗಿದೆ. ಎಟಿಎಂ ಯಂತ್ರಗಳನ್ನು ಅವುಗಳ ಗಾತ್ರಕ್ಕೆ ಅನುಗುಣಕ್ಕೆ ಬದಲಾಯಿಸುವುದು ಸವಾಲಿನ ಕೆಲಸವಾಗಿದೆ. ಬ್ಯಾಂಕುಗಳಿಗೆ ಇದು ದೊಡ್ಡ ತಲೆನೋವಿನ ಕೆಲಸವಾಗಿದೆ.

ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಹೇಳಿಕೆ:

ಹೌದು, ಮೋದಿ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಸುಬ್ರಮಣಿಯನ್, ಅಪನಗದೀಕರಣ ದೇಶದ ಆರ್ಥಿಕತೆ ಮೇಲೆ ಮಾಡಿದ ಕಠಿಣ ಆಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್, ಅಪನಗದೀಕರಣದ ವೇಳೆಯೂ ಇದೇ ಹುದ್ದೆಯಲ್ಲಿದ್ದರು. ನಂತರ 2018 ರಲ್ಲಿ ವೈಯಕ್ತಿಕ ಕಾರಣ ನೀಡಿ ಸುಬ್ರಮಣಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.