ದ್ವಿಚಕ್ರ ಹಾಗೂ ಕಾರ್ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರದ ಹೊಸ ಆದೇಶ!! ನಿಮ್ಮ ಗಾಡಿ ಸೀಜ್ ಆಗಬಾರದು ಅಂದ್ರೆ ಮೊದಲು ಇದನ್ನ ಓದಿ…

0
1781

ಇಷ್ಟು ದಿನ ಇನ್ಸುರೆನ್ಸ್ ಇಲ್ಲದ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದರೆ ಪೈನ್ ಕಟ್ಟಿ ವಾಪಸ್ ಪಡೆಯಬಹುದಿತ್ತು ಆದರೆ ಈಗ ರಾಜ್ಯ ಸರ್ಕಾರವು ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ ಅದು ಏನ್ ಅಂದ್ರೆ ಇನ್ಸುರೆನ್ಸ್ ಇಲ್ಲದ ವಾಹನವನ್ನು ಓಡಿಸುವ ಹಾಗಿಲ್ಲ ಒಂದು ವೇಳೆ ಓಡಿಸಿ ಪೊಲೀಸ್ ಕೈಗೆ ಸಿಕ್ಕು ಸೀಜ್ ಮಾಡಿದರೆ ವಾಹನವನ್ನು ಮರಳಿ ಕೊಡುವುದಿಲ್ಲ, ಅದಕ್ಕೆ ದಂಡ ಕಟ್ಟಿದರು ಕೂಡ ಮಾಲಿಕರಿಗೆ ವಾಹನವು ಸಿಗುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಆದೇಶ ದ್ವಿಚಕ್ರ ವಾಹನ ಒಳಗೊಂಡಂತೆ ಎಲ್ಲ ತರಹದ ವಾಹನಗಳಿಗೆ ಅನ್ವಯವಾಗುತ್ತೆ. ಆದ ಕಾರಣ ವಾಹನದ ಮಾಲೀಕರು ಜಾಗರೋಪಕತೆಯಿಂದ ವಾಹನವನ್ನು ರೋಡ್-ಗೆ ತರಬೇಕಾಗುತ್ತೆ.

ಈ ವಿಷಯಕೆ ಸಂಬಂಧ ಪಟ್ಟತೆ ಮೋಟಾರು ವಿಮೆ ಎಂದರೇನು? ಯಾಕೆ ವಿಮೆ ಮಾಡಿಸಬೇಕು..

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ವಾಹನ ವಿಮೆಯಿಂದ ಆಗುವ ಲಾಭಗಳು ಏನ್?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಕಾರು, ಮೋಟಾರ್ ಸೈಕಲ್, ಟ್ರಕ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸಂಭವಿಸಿದ್ದಾಗ ಸುರಕ್ಷತೆಯನ್ನು ಒದಗಿಸುತ್ತದೆ. ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕವಾದ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದ್ದು, ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ನಮ್ಮ ದೇಶದಲ್ಲಿ ನೀವು ಕಾರು ರಸ್ತೆಗಿಳಿಸುವ ಮೊದಲು ಮೂರನೇ ವ್ಯಕ್ತಿ ಮೋಟಾರು ವಿಮೆ ಹೊಂದಿರಲೇಬೇಕು ಇದು ಕಡ್ಡಾಯವಾಗಿದೆ ಮತ್ತು ಕಾರು ಇನ್ಸುರೆನ್ಸ್ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ ‘A’ ಎಂಬುದು ಮೂರನೇ ವ್ಯಕ್ತಿಗೆ ಅಂದರೆ ನಿಮ್ಮ ವಾಹನದಿಂದ ಆದ ಬೇರೆ ವಾಹನದ ನಷ್ಟ ತುಂಬಲು. ‘B’ ಎಂಬುದು ಸಮಗ್ರ ಪಾಲಿಸಿಯಾಗಿದೆ. ಒಂದು ವೇಳೆ ಅಪಘಾತ ಸಂಭವಿಸಿದ್ದರೆ ಅಲ್ಲಿ ಆಗಿರುವ ಸಂಪೂರ್ಣ ನಷ್ಟವನ್ನು ತುಂಬಲು ಸಹಾಯಕವಾಗುತ್ತೆ. ಈ ಎಲ್ಲಾ ಉದೆಶವನ್ನು ಇಟ್ಟುಕೊಂಡು ಸರ್ಕಾರ ವಿಮೆಯನ್ನು ತುಂಬಲು ಆದೇಶವನ್ನು ಹೊರಡಿಸಿತ್ತು ಆದರೂ ಕೂಡ ಕೆಲವೊಂದು ಮಾಲೀಕರು ವಿಮೆ ಇಲ್ಲದೆ ವಾಹನ ಮಾಡಿ ನಷ್ಟಕ್ಕೆ ಒಳಗಾಗುವುದ್ದನು ಕಂಡ ರಾಜ್ಯಸರ್ಕಾರ ವಿಮೆ ಇಲ್ಲದ ವಾಹನ ಸಪುರ್ಣ ಸಿಜ್ ಮಾಡಲು ಆದೇಶ ನೀಡಿದೆ