ರಾಜ್ಯದಲ್ಲಿ ಶಿಕ್ಷಕರಾಗಲು ಬಯಸುವವರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ..

0
1212

ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಧಿನಿಯಮ 2009 ಕಲಂ 23ರ ಉಪಕಲಂ 1ರ ಪ್ರಕಾರ, ಶಿಕ್ಷಕ ವೃತ್ತಿ ಕೈಗೊಳ್ಳಲು ಈಗ ಕಡ್ಡಾಯ ಅರ್ಹತೆಯಾಗಿ ಈ ಅರ್ಹತಾ ಪರೀಕ್ಷೆಯನ್ನು ಪರಿಗಣಿಸಲಾಗುತ್ತಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರಾಗ ಬಯಸುವವರು ಈ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಿರಲೇಬೇಕು. ಎಂಬ ನಿಯಮದ ಪ್ರಕಾರ ಇಲಾಖೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2018ರ ಅಧಿಸೂಚನೆ ಹಾಗೂ ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ‘ನೆಟ್‌’, ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಮಾದರಿಯಲ್ಲಿಯೇ ಟಿಇಟಿ ಕೂಡ ನಡೆಯುತ್ತದೆ.

Also read: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಕಳೆದ ಬಾರಿ 2016ರಲ್ಲಿ ಟಿಇಟಿ ನಡೆಸಲಾಗಿತ್ತು. ಬಳಿಕ ಇದೀಗ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2018ರ ಅಧಿಸೂಚನೆ ಹಾಗೂ ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಳೆದ ವರ್ಷ ಶಿಕ್ಷಣ ಇಲಾಖೆಯು ಈ ಅರ್ಹತಾ ಪರೀಕ್ಷೆ ನಡೆಸದೇ 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಕೈಗೊಂಡಿತ್ತು. ಅದಿನ್ನೂ ಮುಗಿಯುವ ಹಂತದಲ್ಲಿರುವಾಗಲೇ ಈಗ ಮತ್ತೆ ಐದು ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡಿತ್ತು. ಆದರೆ, ಟಿಇಟಿಯೇ ನಡೆಯದೇ ಇದ್ದುದರಿಂದ ಸಾವಿರಾರು ಅಭ್ಯರ್ಥಿಗಳು ಈ ನೇಮಕ ಪ್ರಕ್ರಿಯೆಯಿಂದ ಹೊರಗುಳಿಯುವ ಭೀತಿ ಎದುರಾಗಿತ್ತು. ಇದೀಗ ಶಿಕ್ಷಣ ಇಲಾಖೆ ಟಿಇಟಿ ನಡೆಸಲು ಪ್ರಕಟಣೆ ಹೊರಡಿಸಿರುವುದಕ್ಕೆ. ಡಿ.ಎಡ್ ಬಿ.ಎಡ್ ಮಾಡಿ ಅರ್ಹತಾ ಪರೀಕ್ಷೆಗಾಗಿ ಸುಮಾರು ಎರಡು ವರ್ಷಗಳಿಂದ ಕಾಯುತ್ತಿರುವ ಬಾವಿ ಶಿಕ್ಷಕರಿಗೆ ನಿರಾಳವಾಗಿದೆ.

ಟಿಇಟಿ ಪರೀಕ್ಷೆ ಬರೆಯಲು ಅವಕಾಶಗಳೆಷ್ಟು?

Also read: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಪ್ರತಿ ವರ್ಷ ಈ ಪರೀಕ್ಷೆ ನಡೆಯುತ್ತಿದ್ದು, ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಅಂಕ ಪಡೆಯಲು ಬಯಸುವವರು ಮರು ಪರೀಕ್ಷೆಯನ್ನು ಸಹ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಅಂಕಗಳನ್ನು ನೇಮಕಾತಿಗೆ ಮಾನದಂಡವನ್ನಾಗಿ ಅನುಸರಿಸಲಾಗುತ್ತದೆ. ಒಮ್ಮೆ ಅರ್ಹತೆ ಪಡೆದರೆ ಏಳು ವರ್ಷಗಳ ಕಾಲ ಮಾನ್ಯತೆ ಇರುತ್ತದೆ. ಈ ಅವಧಿಧಿಯಲ್ಲಿ ಅವರು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈಗ ತಾತ್ಕಾಲಿಕ ಶಿಕ್ಷಕರಾಗಿ (ಖಾಯಂ ಆಗದವರು) ಕಾರ್ಯನಿರ್ವಹಿಸುತ್ತಿರುವ, ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಕೂಡ ಈ ಅರ್ಹತಾ ಪರೀಕ್ಷೆ ಬರೆಯಬೇಕಾಗುತ್ತದೆ.

ಟಿಇಟಿ ಪರೀಕ್ಷೆಗೆ ಬೇಕಾದ ಅರ್ಹತೆ?

ಪ್ರಾಥಮಿಕ ಶಿಕ್ಷಕರಿಗೆ ಅರ್ಹತೆ:

  1. 1 ರಿಂದ 5ನೇ ತರಗತಿಯವರೆಗೂ ಪ್ರಾಥಮಿಕ ಶಿಕ್ಷಕರಾಗಲು ಅಭ್ಯರ್ಥಿಗಳಿಗೆ ಪದವಿಯಲ್ಲಿ ಶೇ.50 ರಷ್ಟು ಅಂಕ ಗಳಿಸಿರಬೇಕು.
  2. ದ್ವಿತೀಯ ಪಿ.ಯು.ಸಿಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿದವರನ್ನು ಮಾತ್ರ ಅರ್ಹರನ್ನಾಗಿ ಪರಿಗಣಿಸಲಾಗುತ್ತಿದೆ.
  3. ದ್ವಿತೀಯ ಪಿಯುಸಿ ಜೊತೆಗೆ ಡಿ.ಇಡಿ ಅಥವಾ ಬಿ.ಇಡಿ ಅಥವಾ ಡಿ.ಎಲ್‌.ಇಡಿ ಕೋರ್ಸ್‌ ಕಡ್ಡಾಯವಾಗಿದೆ.
  4. ಡಿ.ಇಡಿ ಅಥವಾ ಬಿ.ಇಡಿ ಅಥವಾ ಡಿ.ಎಲ್‌.ಇಡಿ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು, ಡಿಪ್ಲೊಮಾ ಇನ್‌ ಎಜುಕೇಷನ್‌(ವಿಶೇಷ ಶಿಕ್ಷಣ) ಕೋರ್ಸ್‌ ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
  5. ಹಿರಿಯಪ್ರಾಥಮಿಕ ಶಿಕ್ಷಕರ, 6 ರಿಂದ 8ನೇ ತರಗತಿ ಶಿಕ್ಷರಾಗಲು ಬಯಸುವವರು ಕೂಡ ಇದೆ ಅರ್ಹತೆ ಇರಬೇಕು ಎಂದು ಇಲಾಖೆಯ ಅಧಿಸುಚನೆಯಲ್ಲಿ ತಿಳಿಸಿದೆ.
  6. ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ 700, / 1000, sc/st ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ ರೂ 350/500 ನಿಗದಿಪಡಿಸಲಾಗಿದೆ.

ಟಿಇಟಿ ಪರೀಕ್ಷೆಗೆ ಯಾವ ರೀತಿಯ ಅಭ್ಯಾಸ ಮುಖ್ಯ?

Also read: ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!

ಶಿಕ್ಷಕರ ಅರ್ಹತಾ ಪರೀಕ್ಷೆ ಯಲ್ಲಿ (ಟಿಇಟಿ)ಯಶಸ್ಸು ಗಳಿಸಬೇಕೆ ಎನ್ನುವರು ಭಾಷೆಗೆ ಸಂಬಂಧಿಧಿಸಿದ ಪತ್ರಿಕೆಗಳಲ್ಲಿ ಅಪರಿಚಿತ ಸನ್ನಿವೇಶದ ಯಾವುದಾದರೂ ಗದ್ಯಾಂಶ ಮತ್ತು ಪದ್ಯಾಂಶಗಳಿರುತ್ತವೆ. ಅವು ಸಾಹಿತ್ಯ, ವಿಜ್ಞಾನ ಅಥವಾ ಕಥಾ ಸಾರಾಂಶವನ್ನು ಒಳಗೊಂಡಿರುತ್ತವೆ. ಅವುಗಳನ್ನು ಓದಿ ಅರ್ಥೈಸಿಕೊಂಡು ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸ ಬೇಕಾಗುತ್ತದೆ. ಆದ್ದರಿಂದ ಸಾಮಾನ್ಯ ಜ್ಞಾನ ಮತ್ತು ಆಲೋಚನೆಯ ಸಾಮರ್ಥ್ಯ‌ಗಳು ಬಹಳ ಮುಖ್ಯ ಇವುಗಳನ್ನು ನೀವು ಎಷ್ಟು ವೇಗವಾಗಿ ಓದಿ ಅರ್ಥೈಸಿಕೊಳ್ಳುವಿರೋ ಅಷ್ಟು ಬೇಗ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ಆ ಪ್ರಶ್ನೆಯಲ್ಲಿನ ಆಯ್ಕೆಗಳು ನಿಮ್ಮನ್ನು ದ್ವಂದ್ವಕ್ಕೊಳಪಡಿಸುತ್ತವೆ. ಹೀಗಾಗಿ ನಿಮ್ಮ ಗ್ರಹಿಕೆ ಸರಿಯಾಗಿರುವಂತೆ ನೋಡಿಕೊಳ್ಳಿ. ಈಗಾಗಲೇ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ ಅದೇ ಮಾದರಿಯಲ್ಲಿ ತಯಾರಿನಡೆಸಿ.