ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು 10 ವರ್ಷದಿಂದ ಬಳಸದಿದ್ದರೆ ಏನಾಗುತ್ತೆ? ಇಲ್ಲಿದೆ ನೋಡಿ ಮಾಹಿತಿ..

0
1532

ಬ್ಯಾಂಕ್ ಗಳಲ್ಲಿ ಹತ್ತಾರು ವರ್ಷಗಳಿಂದ ತಮ್ಮ ಅಕೌಂಟ್-ನಲ್ಲಿ ಜಮಾ ಇಟ್ಟಿರುವ ಹಣವನ್ನು ಕೆಲವರು ಮುಟ್ಟುವುದೇ ಇಲ್ಲ ಅದು ಅಲ್ಲಿಯೇ ಸೇಫ್ ಆಗಿ ಇರಲಿ ಎನ್ನುವ ಉದ್ದೇಶದಿಂದ ಬಹುತೇಕ ಜನರು ಹಾಗೆ ಬಿಟ್ಟಿರುತ್ತಾರೆ. ಇಂತಹ ಹಣವು ಮೊದಲು ಎಷ್ಟೇ ವರ್ಷ ಇಟ್ಟರು ಬಡ್ಡಿ ಸೇರುತ್ತಾ ಇರುತಿತ್ತು, ಆದರೆ ಈಗ ಈ ವ್ಯವಸ್ಥೆ ಬದಲಾಗಿದ್ದು. ಅಕೌಂಟ್​​ನಲ್ಲಿ ಇಟ್ಟಿರುವ ಹಣವನ್ನು 10 ವರ್ಷಗಳಿಂದ ಬಳಸದೇ ಇದ್ದರೆ, ಆ ಹಣವನ್ನು ಬ್ಯಾಂಕ್​ ಬೇರೆಡೆಗೆ ವರ್ಗಾಯಿಸುತ್ತದೆ. ಹಾಗಾದ್ರೆ ಜಮಾ ಮಾಡಿದ ಹಣವೆಲ್ಲಿ ಹೋಗುತ್ತೆ ಅನ್ನುವ ಗೊಂದಲ ಬೇಡ ಯಾಕೆ ಅಂತ ನೋಡಿ.

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಹೌದು ಹೆಚ್ಚು ಅಥವಾ ಕಡಿಮೆ ಹಣವನ್ನು ಖಾತೆದಾರರು ಬ್ಯಾಂಕ್ ಅಕೌಂಟ್-ನಲ್ಲಿ ಇಟ್ಟಿರುವ ಹಣವನ್ನು 10 ವರ್ಷಗಳಿಂದ ಬಳಸದೇ ಇದ್ದರೆ, ಆ ಹಣವನ್ನು ಬ್ಯಾಂಕ್​ ಬೇರೆಡೆಗೆ ವರ್ಗಾಯಿಸುತ್ತದೆ. ಖಾತೆಗಳಲ್ಲಿ ಬಳಸದೇ ಇಟ್ಟಿರುವ ಹಣವನ್ನು ಪರಿಗಣಿಸಿರುವ ಆರ್​ಬಿಐ, ಠೇವಣಿ ಶಿಕ್ಷಣ ಮತ್ತು ಜಾಗೃತಿ ಫಂಡ್​ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದು, ಈಗಾಗಲೇ ಬ್ಯಾಂಕ್​ಗಳು ಮತ್ತು ವಿಮಾ ಕಂಪನಿಗಳಲ್ಲಿ ಕ್ಲೇಮ್​ ಆಗಿಲ್ಲದ ಡೆಪಾಸಿಟ್ ಹಣ​ 32,455 ಕೋಟಿ ಇದೆ ಎಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ.

ಏನಿದು ಹೊಸ ನಿಯಮ?

ಖಾತೆದಾರರು ತಮ್ಮ ಬ್ಯಾಂಕ್​ ಖಾತೆಗಳಲ್ಲಿ ಬಳಸದೇ ಇಟ್ಟಿರುವ ಹಣವನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ಪರಿಗಣಿಸಿ, 2014 ರಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ(DEAF) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕ್ಲೇಮ್​ ಆಗದೇ ಇರುವ ಹಣ DEAF ಗೆ ವರ್ಗಾವಣೆಯಾಗುತ್ತದೆ. ಇದರ ಜೊತೆಗೆ ಬಡ್ಡಿಯನ್ನೂ ಸಹ ಸೇರ್ಪಡೆ ಮಾಡಲಾಗುತ್ತದೆ. ಕಳೆದ ವರ್ಷ ಬ್ಯಾಂಕ್​ಗಳಲ್ಲಿ ಕ್ಲೇಮ್ ಆಗದ ಡೆಪಾಸಿಟ್​ ಶೇ. 26.8 ರಷ್ಟಿದ್ದು, 14,578 ಕೋಟಿಯಷ್ಟಿತ್ತು. ಹೀಗಾಗಿ ಕ್ಲೇಮ್​ ಆಗದ ಬ್ಯಾಂಕ್ ಡೆಪಾಸಿಟ್​ನ್ನು ಪರಿಗಣಿಸಿ ಆರ್​ಬಿಐ ಒಂದು ಹೊಸ ನಿಯಮ ಜಾರಿ ಮಾಡಿದೆ. ಎಂದು ಬ್ಯಾಂಕ್​ ಖಾತೆಗಳಲ್ಲಿ ಕ್ಲೇಮ್​ ಆಗದ ಡೆಪಾಸಿಟ್​​​​ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಅದರಂತೆ ಬ್ಯಾಂಕ್​ ಖಾತೆಯಲ್ಲಿರುವ ಕ್ಲೇಮ್​ ಆಗದ ಹಣವನ್ನು ಪರಿಗಣಿಸಿ ಬ್ಯಾಂಕಿಂಗ್ ರೆಗ್ಯುಲೇಷನ್​ ಆ್ಯಕ್ಟ್​​ಗೆ ತಿದ್ದುಪಡಿ ತಂದು, 1949 ರಲ್ಲಿ ಸೆಕ್ಷನ್​ 26ಎ ಸೇರಿಸಿ DEAF ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ, ಯಾವುದೇ ಬ್ಯಾಂಕ್​ ಖಾತೆಯಲ್ಲಿ 10 ವರ್ಷ ಅದಕ್ಕಿಂತ ಹೆಚ್ಚಿನ ವರ್ಷಗಳಿಗಿಂತ ಕ್ಲೇಮ್​ ಆಗದ ಹಣ ಇದ್ದರೆ, ಆ ಹಣಕ್ಕೆ ಬಡ್ಡಿ ಹಣ ಸೇರಿಸಿ DEAF ಯೋಜನೆಗೆ ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ, ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ಇಚ್ಛಿಸಿದರೆ, ಆಗ ಬ್ಯಾಂಕ್​ ಬಡ್ಡಿಯನ್ನು ಸೇರಿಸಿ ಹಣ ನೀಡುತ್ತದೆ. DEAF ಖಾತೆಗೆ ವರ್ಗಾವಣೆಯಾಗಿರುವ ಹಣವನ್ನು ಬ್ಯಾಂಕ್​​ ಕ್ಲೇಮ್​ ಮಾಡುತ್ತದೆ. DEAF ಖಾತೆಯಲ್ಲಿ ಇಡುವ ಹಣಕ್ಕೆ ಶೇ. 4 ರಷ್ಟಿದ್ದ ಬಡ್ಡಿದರವನ್ನು 2018 ರ ಜುಲೈ ತಿಂಗಳಲ್ಲಿ ಶೇ.3.5 ಕ್ಕೆ ಇಳಿಸಲಾಗಿದೆ.