ರೈತರು, ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ; ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಹಲವು ಸರ್ಕಾರಿ ಸೇವೆಗಳು.!

0
262

ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಲಂಚದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರ್ಕಾರ ಹೊಸ ಉಪಾಯವನ್ನು ಮಾಡಿದ್ದು, ಹಳ್ಳಿಯ ಜನರು ತಾಲೂಕು ಪಂಚಾಯತಿಗೆ ಹೋಗಿ ಲಂಚ ನೀಡುವುದು ತಪ್ಪಲಿದೆ. ಏಕೆಂದರೆ ರೈತರು ಮತ್ತು ಜನಸಾಮಾನ್ಯರು ಯಾವುದೇ ದಾಖಲೆ ಪಡೆಯಲು ಸಂಬಂಧಪಟ್ಟ ಆಫೀಸ್-ಗಳಿಗೆ ಹೋದರೆ ಒಂದೇ ದಿನದಲ್ಲಿ ಸಿಗುವ ದಾಖಲೆಗಳಿಗೆ ತಿಂಗಳು ತಿರುಗಿದರು ಸಿಗದ ಪರಿಸ್ಥಿತಿ ಸದ್ಯ ಇದ್ದು, ಒಂದು ವೇಳೆ ಹಣ ನೀಡಿದರೆ ಮಾತ್ರ ಬೇಗನೆ ಕೆಲಸ ಮಾಡಿಕೊಡುವ ಪದ್ದತಿಗಳು ನಡೆಯುತ್ತಿದೆ. ಅದಕ್ಕಾಗಿ ಸರ್ಕಾರ ಮನೆ ಬಾಗಿಲಿಗೆ ಹಲವು ಸೇವೆಯನ್ನು ನೀಡಲು ಮುಂದಾಗಿದೆ.

Also read: ಜನ ಸಾಮಾನ್ಯರಂತೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡೋ ದೇಶದ ಪ್ರಧಾನಿ ಮೋದಿ; ನಾನೇ ಸಿಎಂ ಎಂದು ರೂಲ್ಸ್ ಬ್ರೇಕ್ ಮಾಡುತ್ತಿರುವ ಯಡಿಯೂರಪ್ಪ.!

ಮನೆಬಾಗಿಲಿಗೆ ಬರಲಿವೆ ಸರ್ಕಾರದ ಸೇವೆಗಳು?

ಹೌದು ರಾಜ್ಯದ ಜನತೆಗೆ ಬಿಎಸ್ ವೈ ಸರ್ಕಾರವು ಸಿಹಿಸುದ್ದಿ ನೀಡಿದ್ದು ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ರೈತರು ಹಾಗೂ ಕೂಲಿ ಕಾರ್ಮಿಕರು ಅಲೆಯುವುದನ್ನು ತಪ್ಪಿಸಲು ಇನ್ನು ಮುಂದೆ ತಾಲೂಕು ಕಚೇರಿ ಅಧಿಕಾರಿಗಳೇ ವಾರಕ್ಕೊಮ್ಮೆ ಹಳ್ಳಿಗಳಿಗೆ ಭೇಟಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಇಂತಹದೊಂದು ಮಹತ್ವದ ಚಿಂತನೆ ನಡೆಸಿದ್ದು, ತಾಲೂಕು ಕಚೇರಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ರೈತರ ಪಹಣಿ, ಪೋಡಿ, ಸಾಮಾಜಿಕ ಪಿಂಚಣಿ ನೀಡಿಕೆ, ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಣೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸೇರಿದಂತೆ ಹಲವು ವಿಚಾರಗಳನ್ನು ಸ್ಥಳದಲ್ಲೇ ಪರಿಹರಿಸಬೇಕಿದೆ.

Also read: ರಾಜ್ಯದಲ್ಲಿ ಮತ್ತೆ ಒಂದು ಸಾವಿರಕ್ಕೂ ಹೆಚ್ಚು ಆಂಗ್ಲ ಶಾಲೆ ತೆರೆಯಲು ಮುಂದಾದ ಸರಕಾರ? ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭವಾಗಲಿವೆ ಶಾಲೆಗಳು.!

ಅಷ್ಟೇ ಅಲ್ಲದೆ ಚಿಕ್ಕಪುಟ್ಟ ಕೆಲಸಕ್ಕೂ ವಾರಗಟ್ಟಲೆ ತಾಲೂಕು ಕಚೇರಿ ಅಲೆಯುವ ಸ್ಥಿತಿ ಇದೆ. ಇಂತಹ ಪರದಾಟಕ್ಕೆ ಬ್ರೇಕ್ ಹಾಕುವ ಜೊತೆಯಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕಾಗಿ ತಾಲೂಕು ಆಡಳಿತವನ್ನೇ ಜನರ ಬಳಿಗೆ ಕೊಂಡೊಯ್ಯುವುದು ಸರ್ಕಾರದ ಉದ್ದೇಶವಾಗಿದ್ದು. ಈ ಯೋಜನೆಯ ಅನುಷ್ಠಾನಕ್ಕಾಗಿ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪೂರಕ ಪ್ರಕ್ರಿಯೆಗಳನ್ನು ನಡೆಸಿದೆ ಎನ್ನಲಾಗಿದೆ. ಯೋಜನೆ ಜಾರಿಗೊಂಡರೆ ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಾಖಲೆ ಪತ್ರಗಳಿಗಾಗಿ ತಾಲೂಕು ಕಚೇರಿಗೆ ಅಲೆಯುವುದು ತಪ್ಪಲಿದೆ.

Also read: ಸಂಚಾರಿ ನಿಯಮದ ನೇಪದಲ್ಲಿ ಟ್ರಾಫಿಕ್ ಪೋಲೀಸರ ದುರ್ವರ್ತನೆಗೆ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ; ಇದಕ್ಕೆ ಯಾರು ಹೊಣೆ??

ಈ ಬಗ್ಗೆ ಸಚಿವರು ಮಾತನಾಡಿದ್ದು ತಾಲೂಕು ಪಂಚಾಯತ್ ಅಧಿಕಾರಿಗಳು ವಾರದಲ್ಲಿ ಒಂದು ದಿನ ಒಂದೊಂದು ಹಳ್ಳಿಗೆ ಭೇಟಿ ನೀಡಬೇಕು. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದವರು ನಿಯೋಜಿತ ಹಳ್ಳಿಗೆ ತೆರಳಿ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನಿಸಬೇಕು. ಈ ಮೂಲಕ ಜನರ ವಿಶ್ವಾಸ ಗಳಿಸಿ ಜನಪರ ಆಡಳಿತ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಇದೆ ರೀತಿಯ ನಿಯಮವನ್ನು ದೆಹಲಿ ಸರ್ಕಾರ ಜಾರಿಗೆ ತಂದಿದ್ದು, ಈ ಸೇವೆಯನ್ನು ಪಡೆಯಲು ನಾಗರಿಕರು 50 ರು. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಜಾತಿ ಪ್ರಮಾಣ ಪತ್ರ, ಹೊಸ ನೀರು ಸಂಪರ್ಕ, ಆದಾಯ, ಡ್ರೈವಿಂಗ್ ಲೈಸೆನ್ಸ್, ವಾಸ ದೃಢೀಕರಣ, ಮದುವೆ ನೋಂದಣಿ, ಆರ್‌ಸಿ ಪ್ರತಿ, ಆರ್‌ಸಿಯಲ್ಲಿ ವಿಳಾಸ ಬದಲಾವಣೆ ಮುಂತಾದ ವಿವಿಧ ಪ್ರಮಾಣ ಪತ್ರ ಪೂರೈಸಲಾಗುತ್ತಿದೆ. ಇದೆ ಮಾದರಿಯನ್ನು ರಾಜ್ಯದಲ್ಲಿ ಮಾಡಲು ಮುಂದಾಗಿದೆ.