ಮಿದುಳನ್ನು ಚುರುಕುಗೊಳಿಸಲು ‘ಹೊಸ’ ಪಾಠಗಳು

0
652

ನಮ್ಮಂಥ  ಸಾಮಾನ್ಯ ಬುದ್ಧಿಮತ್ತೆಯ ವ್ಯಕ್ತಿಗಳು ಮಿದುಳನ್ನು ಇನ್ನಷ್ಟು ಚುರುಕು ಗೋಳಿಸಲು ಏನೇನು ಮಾಡಬೇಕು? ಇದು ತಲೆ ತಿನ್ನುವ ಪ್ರಶ್ನೆ. ‘ಮುಖ್ಯ ಸಂಗತಿ ಏನೆಂದರೆ  ನಮಗೆ ರಿಚಯವಿಲ್ಲದ ಕ್ಷೇತ್ರಗಳಲ್ಲಿ ಬುದ್ಧಿ ಓಡಿಸಲು ಯತ್ನ ಮಾಡಬೇಕು. ತಲೆಗೆ ಹೊಸತನ್ನು ತುಂಬಲು ಯತ್ನಿಸಿದಷ್ಟೂ, ತಲೆಯಲ್ಲಿ ಹೊಸ ನರಕೋಶಗಳು ಬೆಳೆಯುತ್ತದೆ’ ಎನ್ನುತ್ತಾರೆ. ಬುದ್ಧಿತಜ್ಞರು. ಆ  ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ನೋಡಿ.

*ಪದಬಂಧ ಬಿಡಿಸಿ, ಒಗಟು ಬಿಡಿಸಿ, ಚಿತ್ರಗಳನ್ನು ತುಂಡು ತುಂಡಾಗಿ ಕತ್ತರಿಸಿ ಜೋಡಿಸುವ ‘ಝಿಂಗ್ ಸಾ ಪಝಲ್’ ಜತೆ ವೇಳೆ ವ್ಯಯಮಾಡಿ. ಅಂತರಿಕ್ಷದಲ್ಲಿ ನಿಂತಂತೆ ಊಹಿಸಿಕೊಂಡು, ನಿಮ್ಮ ಊರಿನ ಬೀದಿಗಳ ನಕ್ಷೆಯನ್ನು ಮನಸ್ಸಿನಲ್ಲಿಯೇ ಚಿತ್ರಿಸುತ್ತ ಹೋಗಿ.

*ಯಾವುದಾದರೂ ವಾದ್ಯ ನುಡಿಸಲು ಯತ್ನಿಸಿ. ಉದಾಹರಣೆಗೆ ನೀವು ಪಟೀಲನ್ನು ಕೈಗೆತ್ತಿಕೊಳ್ಳುತ್ತದ್ದ ಹಾಗೆ ಈವರೆಗೆ ಬಳಕೆಗೆ ಬಂದಿದ್ದ ಅಸಂಖ್ಯಾತ ಸೂಕ್ಷ್ಮ ಸ್ನಾಯುಗಳಿಗೆ ಚಾಲನೆ ಸಿಗುತ್ತದೆ. ಮಿದುಳು ಅವುಗಳಿಗೆಲ್ಲ  ಅರ್ಥ ಕೊಡಲು ಯತ್ನಿಸುತ್ತದೆ. ನಿಮ್ಮೆದುರು ಸಂಗೀತ ಲಿಪಿಯನ್ನು ಇಟ್ಟುಕೊಂಡಿದ್ದರಂತೂ ಲಕ್ಷಾಂತರ ಹೊಸ ನರಕೋಶಗಳು ಚಿಗುರುತ್ತದೆ.

*ಯಂತ್ರಗಳನ್ನು ಕಳಚಿ ಜೋಡಿಸಲು ಯತ್ನಿಸಿ ಹಳೇ ಗಡಿಯಾರವನ್ನೂ, ಮಿಕ್ಸಿಯನ್ನು ರಿಪೇರಿ ಆಗಬೇಕೆಂದೇನಿಲ್ಲ. ‘ಆ ನಿಟ್ಟಿನಲ್ಲಿ ಯತ್ನಿಸುತದತಿದ್ದಾಗಲೇ ನ್ಯೂರಾನ್ ಗಳು ಬೆಳೆಯಬ ತೊಡಗು್ತವೆ’ ಎನ್ನುತ್ತಾರೆ. ಅಮೆರಿಕದ ರಾಷ್ಟ್ರೀಯ ವೃದ್ಧಾಪ್ಯ ಸಂಶೋಧನಾ ಸಂಸ್ಥೆಯ ತಜ್ಞ ಝೇವನ್ ಖಚಾತುರಿಯನ್.

*ಸಾಹಿತ್ಯ, ಲಲಿತ ಕಲೆಗಳಲ್ಲಿ ಕೈಯಾಡಿಸಿ. ನಿಮಗೆ ಈಗಾಗಲೇ ಬರವಣಿಗೆ ಚಿನ್ನಾಗಿಗೊತ್ತಿದ್ದರೆ, ಕುಂಚ-ಬಣ್ಣಗಳನ್ನು ಕೈಗೆತ್ತಿಕೊಂಡು ಚಿತ್ರಕಲೆಯನ್ನು ಪ್ರಾರಂಭಿಸಿ. ಉಬ್ಬುಚಿತ್ರ, ಉಗುರುಚಿತ್ರ, ಶಿಲ್ಪಕಲೆ, ಒರಿಗ್ಯಾಮಿ, ಇಂಥ ಯಾವುದಾದರೂ ಆದಿತು. ಅದರಲ್ಲಿ ತಾದಾತ್ಮ್ಯ ಮುಖ್ಯ. ವರ್ಣ. ಚಿತ್ರಗಳಲ್ಲಿ ಆಗಲೇ ನೀವು ಪಳಗಿದ್ದರೆ ಭಾಮಿನೀ ಷಟ್ಪದಿಯಲ್ಲಿ ಕವನ ರಚಿಸಲು ಯತ್ನಿಸಿ.

*ಈಗ ನೃತ್ಯಭ್ಯಾಸ! ಡಾ. ಶಿವರಾಮ ಕಾರಂತರನ್ನು ನೆನವು ಮಾಡಿಕೊಳ್ಳಿ ವಯಸ್ಸು ಮುಖ್ಯವಲ್ಲ, ಸಂಗೀತಕ್ಕೆ ತಕ್ಕಂತೆ ಕಾಲು ಕೈಗಳಿಗೆ ಚಲನೆ ಕೊಡುವುದರಿಂದ ಮಿದುಳಿನ ಸರ್ವಾಂಗ ಸಮತೋಲನ ನಿರ್ವಹಣೆ ಚುರುಕಾಗುತ್ತದೆ. ತಾಲೀಮು ಕೋಂಚ ಹೆಚ್ಚೇ ಆಗಿದ್ದರೂ ಪರವಾಗಿಲ್ಲ. ‘ಮಿದುಳಿನಳ್ಳಿ ಸೂಕ್ಷ್ಮ ರಕ್ತನಾಳಗಳು ಹೊಸದಾಗಿ ಚಿರುಗುತ್ತದೆ. ರಕ್ತನಾಳಗಳ ಜಾಲ ಹೆಚ್ಚಾದಂತೆ ಮಿದುಳಿಗೆ ಆಮ್ಲಜನಕದ ಪೂರೈಕೆ ವ್ಯಾಪಕವಾಗುತ್ತದೆ’ಎನ್ನುತ್ತಾರೆ. ಹಾರ್ವರ್ಡ್’ನ ಮಿದುಳುತಜ್ಞ ಮರಿಲಿನ್ ಅಲ್ಬರ್ಟ್. ಭರತನಾಟ್ಯದ ತಾಲೀಮು ಸಾಕು ಎಂದೆನಿಸಿದರೆ, ಒಡಿಸ್ಸೀ ನೃತ್ಯ ಯತ್ನಿಸಬಹುದು. ಹೊಸ ಕಲಿಕೆಗೆ ಯತ್ನಿಸಿದಷ್ಟು ಮಿದುಳು ಹೊಸ ಹೆಜ್ಜೆ ಹೊಸ ತಾಳಗಳ ಲೆಕ್ಕಾಚಾರಗಳಲ್ಲಿ ತೊಡಗುತ್ತದೆ.

*ತರ್ಕಶಕ್ತಿಯನ್ನು ಹೆಚ್ಚಿಸಬಲ್ಲ ಐಕ್ಯೂ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಿಡಿಸಲು ಯತ್ನಿಸಿ. ಚದುರಂಗ ಸ್ಕ್ರ್ಯಾಬರ್ ಆಟ ಆಡಿ.

*ನಿಮ್ಮ ವಿಚಾರ ಶಕ್ತಿಗೆ ಸವಾಲೇಸೆಯಬಲ್ಲವರ ಜತೆ ಒಡನಾಟ ಮಾಡಿ. ಸಖ್ಯ ಬೆಳಸಿಕೊಳ್ಳಿ, ಸಾಧ್ಯವಿದ್ದರೆ ಅವರನ್ನೇ ಲಗ್ನಮಾರ್ಗ ಎನ್ನುತ್ತಾರೆ. ಕ್ಯಾಲಿಪೋರ್ನಿಯ ವಿಶ್ವ ವಿದ್ಯಾಲಯದ ಮಿದುಳು ಸಂಶೋಧನಾ ಘಟಕದ ಮುಖ್ಯಸ್ಥ ಆರ್ನಾಲ್ಡ್ ಶೀಬೆಲ್ ಅವರ ಪ್ರಕಾರ.

*ಜೀವನವಿಡೀ ಕಲಿಕೆಯ ಉತ್ಸಹಾವಿರಬೇಕು ಮಿದುಳು ಎಂದೂ ಜಡವಾಗದಂತೆ. ಸದಾ ಅದರಲ್ಲಿ ಹೊಸ ಹೊಸ ನರಕೋಶಗಳು ಬೆಲೆಯಲು ಅವಕಾಶ ಸಿಗುತ್ತಿರಬೇಕು.