ಹಲವು ವಾರಗಳ ಹಿಂದೆ ಭಾರಿ ಸುದ್ದಿಯಾಗಿದ್ದ ಶ್ರುತಿ ಹರಿಹರನ್-ರ MeToo ಪ್ರಕರಣ ಎಲ್ಲಿಯವರೆಗೆ ಬಂದಿದೆ ಗೊತ್ತಾ?

0
496

ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ ಮೀಟೂ ಆರೋಪ ದೇಶದೆಲ್ಲದೆ ಸುದ್ದಿಯಾಗಿತ್ತು. ನಟಿ ಶೃತಿ ‘ವಿಸ್ಮಯ’ ಸಿನಿಮಾದ ಚಿತ್ರೀಕರಣ ಸಂದ​ರ್ಭ​ದಲ್ಲಿ ಅರ್ಜುನ್‌ ಸರ್ಜಾ ಅವರು ನಾಲ್ಕು ತಾಣ​ಗ​ಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆ​ಸಿ​ದ್ದಾಗಿ ಎಂದು ಆರೋಪ ಮಾಡಿದರು. ಇದು ಇಡಿ ಚಿತ್ರರಂಗವನ್ನೇ ಬಿಸಿ ಮಾಡಿತ್ತು. ನಂತರ ಈ ಪ್ರಕರಣ ಚಲನಚಿತ್ರ ವಾಣಿಜ್ಯ ಮಂಡಳಿ ಅಂಗಳಕ್ಕೆ ತಲುಪಿದ್ದು, ಇತ್ಯರ್ಥವಾಗದೆ ಹಾಗೆಯೇ ಉಳಿಯಿತು. ಆದಾದ ನಂತರ ಶೃತಿ ಎಲ್ಲಿ ಇದ್ದಾರೆ ಏನ್ ಮಾಡುತ್ತಿದ್ದಾರೆ? ಮೀಟೂ ಎಲ್ಲಿಗೆ ಬಂತು ಅಂತ ಹಲವಾರು ಪ್ರಶ್ನೆಗಳು ಮೂಡಿದವು ಈ ಎಲ್ಲ ಪ್ರಶ್ನೆಗಳಿಗೆ ಶೃತಿ ಹೇಳಿದ್ದು ಹೀಗೆ.

ಹೌದು ಅರ್ಜುನ್ ಸರ್ಜಾ ವಿರುದ್ದ ಆರೋಪಮಾಡಿ ತಪ್ಪು ಮಾಡಿದೆ ದುಡುಕಿ ಬಿಟ್ಟೆ ಎನಿಸುತ್ತಿಲ್ಲ, ನನಗೆ ಆದ ನೋವು ಹೇಳಬೇಕಿತ್ತು ಅದನ್ನೆಲ್ಲಾ ಹೇಳಿದೆ, ಈಗ ರಿಲ್ಯಾಕ್ಸ್ ಆಗಿದ್ದೇನೆ ಸದ್ಯ ಪ್ರಕರಣ ಕೋರ್ಟ್ ನಲ್ಲಿದೆ ಅದೇನಾಗುತ್ತೋ ಕಾಯುತ್ತಿದ್ದೇನೆ. ಅದು ಬಿಟ್ಟರೆ ಕಲಾವಿದೆಯಾಗಿ ನಾನಿಲ್ಲೇ ಇರುತ್ತೇನೆ ಎಂದು ಮಾಧ್ಯಮ ಒಂದರ ಸಂದರ್ಶನದಲ್ಲಿ ಮಾತನಾಡಿದ ಶೃತಿ, ನನಗೆ ಈ ಪ್ರಕರಣ ಹುಟ್ಟುಹಾಕಿ ನಾನು ತಪ್ಪು ಮಾಡಿದೆ ಅಂತ ಯಾವತ್ತು ಅನ್ಸಿಲ್ಲ, ಮತ್ತು ನನಗೆ ಆದ ತೊಂದರೆಯನ್ನು ಹೊರಹಾಕಿ ಈಗ ರಿಲ್ಯಾಕ್ಸ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.

ಮೀಟೂದಿಂದ ಅವಕಾಶವಿಲ್ವ?

ಮೀಟೂ ಆರೋಪದಿಂದ ಶೃತಿಗೆ ಅವಕಾಶ ಸಿಗುತ್ತಿಲ್ಲ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಅದು ಹಾಗೇನಿಲ್ಲ ನಾನು ಹಲವಾರು ಪ್ರಾಜೆಕ್ಟ್- ನಲ್ಲಿ ಬ್ಯುಸಿ ಆಗಿದ್ದೇನೆ ನನಗೆ ಅವಕಾಶಗಳು ಕಡಿಮೆಯಾದರು ಅದಕ್ಕೆ ಬಲವಾದ ವ್ಯಯಕ್ತಿಕ ಕಾರಣಗಳಿವೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ನನಗೆ ಸಾಕಷ್ಟು ವಿರೋಧಗಳು ಬಂದವು ಇದರಲ್ಲಿ ಕೆಲವೊಬ್ಬರು ಕೆಟ್ಟದಾಗಿ ಮಾತನಾಡಿ ನೀನು ಹೆಣ್ಣ? ನೀನು ಪತಿರತಿನಾ? ಅಂತ ಏನೇನೊ ವಯಕ್ತಿಕ ವಿಚಾರವನ್ನು ಮಾತನಾಡಿದರು, ನಾನು ಒಬ್ಬಳು ಹೆಣ್ಣಾದರಿಂದ ನಂಗೆ ತುಂಬಾನೇ ನೋವು ಆಯಿತು. ಹಾಗೆಯೇ ನನಗೆ ಪ್ರಾಣ ಬೆದರಿಕೆ ಕೂಡ ಬಂದಿತ್ತು ಅದಕ್ಕೆ ಸಂಬಂಧಪಟ್ಟತ್ತೆ ಕೂಡಲೇ ಕೆಸ ಹಾಕಿದ್ದೇನೆ ಅದು ಒಂದು ಕಡೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ದುಡ್ಡಿನ ಆಸೆಗೆ ಆರೋಪ ಮಾಡಿದ?

ಅರ್ಜುನ್ ಸರ್ಜಾ ಅವರ ವಿರೋಧಿಗಳು ನನಗೆ ದುಡ್ಡುಕೊಟ್ಟು ಈ ಆರೋಪ ಮಾಡು ಅಂತ ಯಾರು ಹೇಳಿಲ್ಲ, ನನಗೆ ಆದ ನೋವು, ತೊಂದರೆಗೆ ಬೇಸತ್ತು ಆರೋಪ ಮಾಡಿದ್ದೇನೆ ಹಾಗೇನಾದ್ರೂ ಹಣದ ಆಸೆಗೆ ಒಳಗಾಗಿ ನಾನು ಈ ಆರೋಪ ಮಾಡಿದರೆ ನನ್ನ ಸಿನಿಮಾ ವೃತಿಯನ್ನು ಅಪಾಯದಲ್ಲಿ ಇಟ್ಟುಕೊಂಡು ಆರೋಪ ಮಾಡುತ್ತಿರಲಿಲ್ಲ ಇದು ನನ್ನ ವಯಕ್ತಿಕ ಹೊರಾಟವಾಗಿದೆ. ಎಲ್ಲರೂ ತಿಳಿದ ಹಾಗೆ ಯಾವುದೇ ರಾಜಕಾರಣಿಗಳು ಹೇಳಿ ಮಾಡಿಸಿದ್ದು ಅಲ್ಲ. ಈ ಆರೋಪ ಎರಡು ವರ್ಷ ಹಿಂದಿನ ಆರೋಪ ಅಂತ ಹಲವರು ಮಾತನಾಡಿದರು ಇಂತಹ ಆರೋಪ ಹತ್ತು ವರ್ಷಗಳ ಹಿಂದಿನದು ಆದರು ಯಾರೇ ಆರೋಪ ಮಾಡುತ್ತಿದ್ದರು ಹಾಗೆಯೇ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಈ ಆರೋಪದಿಂದ ಬೇಸರವಿಲ್ಲವಂತೆ:

ಈ ಎಲ್ಲ ಚರ್ಚೆಯ ಹಿನ್ನೆಲೆಯಲ್ಲಿ ನನಗೆ ಆದ ತೊಂದರೆಗಳಿಂದ ನಾನ್ ಯಾಕೆ ಇಂತಹ ತಪ್ಪು ಮಾಡಿದೆ ಅಂತ ರಾತ್ರಿಯಲ್ಲ ಕೂತು ಅತ್ತು ಬೇಸರ ಮಾಡಿಕೊಳ್ಳುವ ವಿಚಾರ ಯಾವತ್ತು ಬಂದಿಲ್ಲ, ಈ ಪ್ರಕರಣ ನನ್ನ ಜೀವನದ ಹೊಸ ಹೆಜ್ಜೆಯಾಗಿದೆ ಈ ಆರೋಪ ಸದ್ಯ ಕೋರ್ಟ್ ನಲ್ಲಿದೆ ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ ಎಂದು ಶೃತಿ ಹರಿಹರನ್ ಹಲವು ವಿಚಾರಗಳನ್ನು ಹಚ್ಚಿಕೊಂಡಿದ್ದಾರೆ.