ಬೆಂಗಳೂರಿನಲ್ಲಿ ತಪ್ಪಿದ ಭಾರಿ ಅನಾಹುತ; ಎನ್‍ಐಎ ದಾಳಿ ವೇಳೆ ಮನೆಯಲ್ಲೇ 10 ಸಜೀವ್ ಬಾಂಬ್ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆ..

0
192

ಬೆಂಗಳೂರಿನಲ್ಲಿ ಮತ್ತೆ 10 ಸಜೀವ ಬಾಂಬ್ ಪತ್ತೆಯಾಗಿವೆ. ಒಂದೇ ತಿಂಗಳಲ್ಲಿ ಇದು ಎರಡನೆ ಪ್ರಕರಣವಾಗಿದ್ದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬಿಳಿಸಿದ್ದು, ನಗರದ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ ಪತ್ತೆಯಾಗಿದ್ದು. ರಾಜ್ಯ ರಾಜಧಾನಿಯಲ್ಲಿ ಭಾರಿ ಅನಾಹುತಾವೊಂದು ತಪ್ಪಿದೆ. ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಬಂಧಿತನಾಗಿದ್ದ ಹಬೀವುಲ್‌ ಅನ್ನು ಬಂಧಿಸಿದ ವೇಳೆಯಲ್ಲಿ ತಾನು ಚಿಕ್ಕಬಾಣವಾರದಲ್ಲಿ ವಾಸವಿದ್ದ ಮನೆಯಲ್ಲಿ ಬಾಂಬ್‌ ಇಟ್ಟಿದೆ ಅಂತ ಮಾಹಿತಿ ನೀಡಿದ್ದ ಎನ್ನಲಾಗಿದ್ದು.

ಬೆಂಗಳೂರಿನಲ್ಲಿ ಮತ್ತೆ ಬಾಂಬ್?

ರಾಜಧಾನಿ ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್ ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿ ಬಿದ್ದಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್- ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಚಿಕ್ಕಬಾಣಾವರದ ರೈಲು ನಿಲ್ದಾಣದ ಸಮೀಪವಿರುವ ಮನೆಯಲ್ಲಿ ಈ ಬಾಂಬ್‌ಗಳು ಸಿಕ್ಕಿವೆ ಎಂದು ಹೇಳಲಾಗಿದೆ.

ಅಷ್ಟೇ ಅಲ್ಲದೆ ಜೊತೆಗೆ ಜೀವಂತ ಬುಲೆಟ್‍ಗಳು, ಗ್ರೆನೇಡ್ ಮಾಡುವುದು ಹೇಗೆ ಮತ್ತು ಬಾಂಬ್ ಬ್ಲಾಸ್ಟ್ ಮಾಡುವುದರ ಬಗ್ಗೆ ಪುಸ್ತಕ ಸಿಕ್ಕಿದೆ. ಸದ್ಯಕ್ಕೆ ಎನ್‍ಐಎ ಅಧಿಕಾರಿಗಳು ದಾಳಿಯಲ್ಲಿ ಸಿಕ್ಕಿ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದುರಿಸಿದ್ದಾರೆ. ಉಗ್ರ ಹಬೀಬುರ್ ರೆಹಮಾನ್, ಕಳೆದ ಎರಡು ವರ್ಷಗಳಿಂದ ಮುಸ್ತಾನ್ ಎಂಬವರಿಗೆ ಸೇರಿದ ಕಟ್ಟಡವನ್ನ ಬಾಡಿಗೆ ಪಡೆದಿದ್ದನು. ಬಳಿಕ ಮನೆಯನ್ನೇ ಬಾಂಬ್ ಫ್ಯಾಕ್ಟರಿ ಮಾಡಿಕೊಂಡಿದ್ದನು ಎನ್ನಲಾಗಿದೆ.

ಕೊಲ್ಕತ್ತಾದಿಂದ ಭಾನುವಾರ ನಗರಕ್ಕೆ ಹಬೀಬುರ್ ನನ್ನು ಕರೆ ತಂದಿರುವ ಎನ್‌ಐಎ ತಂಡ ನಗರದಲ್ಲಿ ಶಂಕಿತ ನೆಲೆಸಿದ್ದ ಮನೆಗಳನ್ನು ಶೋಧಿಸಿದೆ. ಶಂಕಿತ ಉಗ್ರ ಹಬೀಬುರ್ ರೆಹಮಾನ್ ಒಂದು ಕಡೆ ವಾಸ ಮಾಡುತ್ತಿರಲಿಲ್ಲ. ಪ್ರತಿ ಬಾರಿಯೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಲೆ ಬದಲಿಸುತ್ತಿದ್ದ. ಎರಡು ವರ್ಷದ ಹಿಂದೆ ಹಬೀಬುರ್ ರೆಹಮಾನ್ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಈ ಮನೆ ಮುಸ್ತಾಫ್ ಎಂಬುವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಮನೆಯಲ್ಲಿ ಹಬೀಬುರ್ ಜತೆ ಬಿಹಾರ ಮೂಲದ ಇನ್ನು ಮೂವರು ಶಂಕಿತ ಉಗ್ರರಿದ್ದರು. ಈ ವೇಳೆ ಶಂಕಿತರು ಬಾಂಬ್ ತಯಾರಿಸಿದ್ದರು ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಹಬೀಬುರ್‌ನನ್ನು ಎನ್‌ಐಎ ತಂಡ ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಚಿಕ್ಕಬಾಣಾವರದಲ್ಲಿ ತನ್ನ ಜತೆಗಿದ್ದ ಮೂವರು ಶಂಕಿತರ ಬಗ್ಗೆ ಬಾಯ್ಬಿಟ್ಟಿದ್ದ. ಹಬೀಬುರ್ ಕೊಟ್ಟ ಮಾಹಿತಿ ಮೇರೆಗೆ ಕೆಲ ದಿನಗಳ ಹಿಂದೆ ಕೊಲ್ಕತ್ತಾ ರಾಷ್ಟ್ರೀಯ ದಳದ ಅಧಿಕಾರಿಗಳು ಬಿಹಾರ ಮೂಲದ ಮೂವರ ಶಂಕಿತರನ್ನು ಬಂಧಿಸಿತ್ತು. ಅಲ್ಲದೆ, ಒಂದೂವರೆ ತಿಂಗಳ ಹಿಂದೆಯಷ್ಟೇ ಶಂಕಿತ ಮೂವರು ಚಿಕ್ಕಬಾಣಾವರದಲ್ಲಿನ ಮನೆ ಖಾಲಿ ಮಾಡಿದ್ದರು. ಇದೀಗ ಹಬೀಬುರ್ ರೆಹಮಾನ್‌ನನ್ನು ಕರೆ ತಂದು ಬಾಡಿಗೆ ಮನೆ ಶೋಧಿಸಲಾಗಿದೆ. ಶಂಕಿತ ಹಬೀಬುರ್‌ನನ್ನು ಎನ್‌ಐಎ ತಂಡ ದೊಡ್ಡಬಳ್ಳಾಪುರದಲ್ಲಿನ ಮಸೀದಿಗೆ ಕೂಡ ಭೇಟಿ ನೀಡಿ ಶೋಧ ನಡೆಸಲಿದೆ. ಅಲ್ಲದೆ, ತಮಿಳುನಾಡು ಹಾಗೂ ಇನ್ನಿತರ ಪ್ರದೇಶಗಳಿಗೂ ಶಂಕಿತನನ್ನು ಎನ್‌ಐಎ ತಂಡ ಕರೆದೊಯ್ಯಲಿದೆ ಎಂದು ಮೂಲಗಳು ತಿಳಿಸಿವೆ.