ಬಿಗ್ ಬ್ರೇಕಿಂಗ್; ಬೆಂಗಳೂರಿನಲ್ಲಿ ಉಗ್ರರಿಂದ 3 ರಾಕೆಟ್ ಉಡಾವಣೆ; ರಾಷ್ಟ್ರೀಯ ತನಿಖಾ ದಳ ತನಿಖೆಯಲ್ಲಿ ಬಯಲಾಯಿತು ಬೆಚ್ಚಿಬಿಳ್ಳುವ ವಿಷಯ..

0
236

ಸಿಲಿಕಾನ್ ಸಿಟಿಯ ಜನರನ್ನು ಬೆಚ್ಚಿಬಿಳಿಸಿದ ಉಗ್ರರ ಬಾಂಬ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಉಗ್ರರು ಬಾಂಬ್ ಜೊತೆಗೆ ರಾಕೆಟ್-ಗಳನ್ನು ಕೂಡ ಪರೀಕ್ಷೆ ಮಾಡಿದ್ದಾರೆ. ಒಂದು ವೇಳೆ ಉಗ್ರರ ಮಾಹಿತಿ ಸಿಗದೇ ಇದ್ದರೆ ಬೆಂಗಳೂರಿನ ಹಲವು ಕಡೆಯಲ್ಲಿ ರಾಕೆಟ್ ಮೂಲಕ ಬಾಂಬ್ ಸಿಡಿಸಲಾಗುತ್ತಿತ್ತು ಎಂದು ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾಹಿತಿ ನೀಡಿದೆ. ಬೆಂಗಳೂರಿನಿಂದ 90 ಕಿ.ಮೀ. ದೂರದ ಕೃಷ್ಣಗಿರಿಯಲ್ಲಿ ಶಂಕಿತ ಉಗ್ರರಿಂದ 3 ರಾಕೆಟ್‌ ಉಡಾವಣೆ ಮಾಡಲಾಗಿದೆ. ಇದರಲ್ಲಿ ಎರಡು ಯಶಸ್ವಿಯಾಗಿವೆ ಎನ್ನುವುದು ಕೂಡ ತಿಳಿಸಿದೆ.

ಉಗ್ರರಿಂದ ರಾಕೆಟ್ ಉಡಾವಣೆ?

ಹೌದು ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್ ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿ ಬಿದ್ದಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್- ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಚಿಕ್ಕಬಾಣಾವರದ ರೈಲು ನಿಲ್ದಾಣದ ಸಮೀಪವಿರುವ ಮನೆಯಲ್ಲಿ ಈ ಬಾಂಬ್‌ಗಳು ಸಿಕ್ಕಿದ್ದವು, ಉಗ್ರರು ಇವುಗಳನ್ನು ಮಾತ್ರ ತಯಾರಿಸದೆ ಇನ್ನೂ ಹಲವು ಕುತಂತ್ರಗಳನ್ನು ನಡೆಸಿದರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದ್ದು.
ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿಬಿದ್ದ ಜಮಾತ್‌-ಉಲ್‌-ಮುಜಾಹಿದೀನ್‌-ಬಾಂಗ್ಲಾದೇಶ್‌ (ಜೆಎಂಬಿ) ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ಗ್ಯಾಂಗ್‌ ತಮಿಳುನಾಡಿನ ಕೃಷ್ಣಗಿರಿಬೆಟ್ಟದಲ್ಲಿ ಪ್ರಾಯೋಗಿಕವಾಗಿ ಮೂರು ಬಾರಿ ‘ರಾಕೆಟ್‌’ ಉಡಾಯಿಸಿತ್ತು ಎನ್ನುವುದು ಇಡಿ ದೇಶವನ್ನೇ ಬೆಚ್ಚಿಬೀಳಿಸಿದೆ.

ಉಗ್ರರ ರಾಕೆಟ್‌ ಉಡಾವಣೆ ಯಶಸ್ವಿ?

ಬಾಂಬ್‌ ತಯಾರಿಸುವುದರಲ್ಲಿ ನಿಷ್ಣಾತನಾಗಿದ್ದ ಮುನೀರ್‌, ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿಯ ಶಿಕಾರಿಪಾಳ್ಯ ಹಾಗೂ ಬೇಗೂರಿನ ಬಾಡಿಗೆ ಮನೆಯಲ್ಲಿ ಹಬೀಬುರ್‌ ರೆಹಮಾನ್‌ ಮುಂತಾದವರ ಜತೆ ನೆಲೆಸಿದ್ದ. ಈ ವೇಳೆ ಶಂಕಿತರು ಅಮೋನಿಯಂ ಸಲ್ಫೇಟ್‌, ಪೊಟ್ಯಾಷಿಯಂ, ಕನೆಕ್ಟರ್‌, ವೈರ್‌ ಹಾಗೂ ಪೈಪ್‌ ಬಳಸಿ ‘ರಾಕೆಟ್‌’ ಸಿದ್ಧಪಡಿಸಿದ್ದರು. ಈ ರಾಕೆಟ್‌ ಅನ್ನು ತಮಿಳುನಾಡಿನ ಕೃಷ್ಣಗಿರಿಯ ಬೆಟ್ಟಕ್ಕೆ ಕೊಂಡೊಯ್ದು ಪ್ರಾಯೋಗಿಕವಾಗಿ ಉಡಾವಣೆ ಮಾಡಿದ್ದಾರೆ. ಮೂರು ಬಾರಿ ಉಡಾವಣೆಯಲ್ಲಿ ಎರಡು ಬಾರಿ ಸಫಲರಾಗಿದ್ದೇವೆ ಎಂದು ಶಂಕಿತ ವ್ಯಕ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೌದ್ಧರೆ ಗುರಿಯಾಗಿದ್ದರು;

 

ಬೌದ್ಧರನ್ನೇ ಗುರಿಯಾಗಿಸಿಕೊಂಡಿರುವ ಜೆಎಂಬಿ ಶಂಕಿತ ಉಗ್ರರು ಬೆಂಗಳೂರಿನ ಹೊರವಲಯದಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು. ಸುಮಾರು 100 ಮೀಟರ್‌ ದೂರದಲ್ಲಿ ನಿಂತು ಈ ರಾಕೆಟ್ಟನ್ನು ಉಡಾವಣೆ ಮಾಡಲು ಶಂಕಿತರು ಸಿದ್ಧತೆ ನಡೆಸಿದ್ದರು. ಸುಮಾರು 50ರಿಂದ 60 ಮಂದಿ ಇರುವ ಜನನಿಬಿಡ ಸ್ಥಳಕ್ಕೆ ಈ ರಾಕೆಟ್‌ ಉಡಾವಣೆ ಮಾಡಿದರೆ 10ರಿಂದ 12 ಮಂದಿ ಸಾವನ್ನಪ್ಪುತ್ತಾರೆ. ಹೀಗಾಗಿ ಸುಲಭವಾಗಿ ಕೃತ್ಯ ಎಸಗಲು ರಾಕೆಟ್‌ ಸಿದ್ಧಪಡಿಸಿದ್ದರು ಎಂದು ತಿಳಿದುಬಂದಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.