ದೆವ್ವದ ವೇಷ ಧರಿಸಿ ಟಿಕ್ ಟಾಕ್ ಮಾಡಲು ಹೋದ ಇವರಿಗೆ ಯಾವ ಗತಿ ಬಂತು ನೋಡಿ!!

0
404

ಹುಡುಗಾಟ ಮಾಡಿ ಜನರಿಗೆ ಮನರಂಜನೆ ನೀಡುವುದು ಈಗಿನ ಯುವ ಪೀಳಿಗೆಗೆ ಟ್ರೆಂಡ್ ಆಗಿದ್ದು, ಇದರಿಂದ ಆಗುವ ಅನಾಹುತಗಳನ್ನು ಅರಿಯದೆ ರಾತ್ರಿವೇಳೆಯಲ್ಲಿ ದೇವ್ವಗಳ ವೇಷ ದರಿಸಿ 90 ರ ದಶಕದಲ್ಲಿ ಬಂದ ಕನ್ನಡ ಭಯಾನಕ ಚಿತ್ರಗಳಲ್ಲಿ, ತೋರಿಸಿದ ರೀತಿ ಬಿಳಿ ನಿಲುವಂಗಿಯನ್ನು ಮತ್ತು ಉದ್ದನೆಯ ಕೂದಲನ್ನು ಹೊಂದಿರುವ ಮುಖವನ್ನು ಆವರಿಸಿರುವ ವಿಗ್ ಧರಿಸಿದ ಬೆಂಗಳೂರಿನಲ್ಲಿ ಏಳು ಯವಕರು ಪ್ರಯಾಣಿಕರನ್ನು ಹೆದರಿಸಲು ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಏಳು ಯುವಕರು ಜೈಲು ಸೇರಿದ್ದಾರೆ.

ಹೌದು ಬೆಂಗಳೂರಲ್ಲಿ ರಾತ್ರೋರಾತ್ರಿ ದೆವ್ವಗಳು ಕಾಣಿಸಲಾರಂಭಿಸಿದ್ದು, ಮಧ್ಯರಾತ್ರಿ ದೆವ್ವಗಳ ಹಾವಳಿಗೆ ನಗರದ ಜನತೆ ಭಯಭೀತರಾಗಿದ್ದು, ದಾರಿಯುದ್ದಕ್ಕೂ ಬೆನ್ನು ಹತ್ತುತ್ತಿವೆ. ಜನರನ್ನು ಬೆದರಿಸಲು ಈ ದೆವ್ವಗಳ ಗ್ಯಾಂಗ್ ಹುಟ್ಟಿಕೊಂಡಿದ್ದು, ದೆವ್ವದ ರೀತಿ ಮುಖವಾಡ ಹಾಕಿಕೊಂಡು ರಾತ್ರಿ ಓಡಾಡುತಿತ್ತು. ಇವುಗಳ ಕಾಟದಿಂದ ಬೇಸತ್ತ ಜನ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೆವ್ವಗಳ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್ ಆಗಿದ್ದು, ಈ ಮಾನವ ದೆವ್ವಗಳು ಸಿಕ್ಕಿಬಿದ್ದಿದ್ದು ಪೊಲೀಸರ ಅತಿಥಿಯಾಗಿವೆ.

ಈ ವೇಳೆ ಯುವಕರು ಮಾಡಿರುವ ವೀಡಿಯೋ ವೈರಲ್ ಆಗಿದ್ದು ಒಂದು ವೀಡಿಯೊದಲ್ಲಿ, ದೆವ್ವಗಳಂತೆ ಮುಖವಾಡ ಧರಿಸಿರುವ ಇಬ್ಬರು ಪುರುಷರು ಚಾಲಕನನ್ನು ಹೆದರಿಸುವ
ಪ್ರಯತ್ನದಲ್ಲಿ ಆಟೋರಿಕ್ಷಾ ಕಡೆಗೆ ಓಡುತ್ತಿರುವುದು ಕಂಡುಬರುತ್ತದೆ. ಆಟೋರಿಕ್ಷಾ ಚಾಲಕನು ತನ್ನ ವಾಹನವನ್ನು ಹಿಮ್ಮೆಟ್ಟಿಸಿ ಭಯದಿಂದ ಓಡಿಸುತ್ತಿರುವುದು ಕಂಡುಬರುತ್ತದೆ. ವಾಹನ ಚಾಲಕರನ್ನು ಹೆದರಿಸಲು ಪ್ರಯತ್ನಿಸುತ್ತಿರುವ ಗುಂಪಿನ ಹಲವಾರು ವೀಡಿಯೊಗಳು ಸಹ ವೈರಲ್ ಆಗಿವೆ. ಯುವಕರ ಹುಚ್ಚಾಟ್ಟಕ್ಕೆ “ಆಟೋ ಡ್ರೈವರ್ ಭಯಭೀತರಾಗಿದ್ದರು. ರಸ್ತೆಯಲ್ಲಿ ದೆವ್ವಗಳಿವೆ ಎಂದು ಅವರು ಮೊದಲಿಗೆ ಹೇಳಿದರು. ಅವರು ದೂರು ನೀಡಿದ ಕೂಡಲೇ, ಹಲವಾರು ಇತರ ಪ್ರಯಾಣಿಕರು ಸಹ ಪ್ರಯಾಣಿಕರನ್ನು ತಮಾಷೆ ಮಾಡುತ್ತಿರುವ ಕೆಲವು ಯುವಕರ ಬಗ್ಗೆ ದೂರು ನೀಡಿದರು.

ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದ ನಂತರ ನಾವು ಏಳು ಜನರನ್ನು ಬಂಧಿಸಿದ್ದೇವೆ. “ಎಂದು ಡಿಸಿಪಿ ಉತ್ತರ ಶಶಿಕುಮಾರ್ ಹೇಳಿದ್ದು ಇವರೆಲ್ಲ ಪ್ರ್ಯಾಂಕ್​ ವಿಡಿಯೋ ಮಾಡಿ, ಟಿಕ್ ಟಾಕ್, ಯೂಟ್ಯೂಬ್​ನಲ್ಲಿ ಅಪ್‌ಲೋಡ್‌ ಮಾಡುವ ಉದ್ದೇಶದಿಂದ 7 ಯುವಕರ ತಂಡವು ನಿತ್ಯವೂ ದೆವ್ವದ ವೇಷ ಧರಿಸಿ ಯಶವಂತಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ರಾತ್ರಿಯಲ್ಲಿ ಜನರನ್ನು ಬೆದರಿಸುವ ಕೆಲಸ ಮಾಡುತ್ತಿತ್ತು. ಇದರಿಂದ ಹೆದರಿ ಕೆಲವರು ಯಶವಂತಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಎಂದು ಹೇಳಿದ್ದಾರೆ.

ಬಂಧಿತ ಯುವಕರನ್ನು ಶಾನ್ ಮಲ್ಲಿಕ್, ನವೀದ್, ಸಜೀಲ್ ಮಹಮದ್, ಮಹಮದ್ ಅಕ್ಯೂಬ್, ಸಾಕಿಬ್, ಸೈಯದ್ ನಬೀಲ್, ಯೂಸಫ್ ಅಹಮದ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಎಂಜಿನಿಯರಿಂಗ್‌, ಬಿಬಿಎಂ, ಬಿಎಸ್‌ಸಿ ಅಗ್ರಿಕಲ್ಚರ್ ಓದುತ್ತಿದ್ದಾರೆ. ಏಳು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 504 (ಶಾಂತಿ ಉಲ್ಲಂಘನೆಯನ್ನು ಉಂಟುಮಾಡುವ ಉದ್ದೇಶದಿಂದ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪಾಲಕರು ಮಕ್ಕಳನ್ನು ಇಂತಹ ಹುಚ್ಚಾಟಗಳನ್ನು ಕೈಗೊಳ್ಳದಂತೆ ನೋಡಿಕೊಳ್ಳುವುದು ಒಳ್ಳೆಯದು.

Also read: ಹೃತಿಕ್ ರೋಷನ್ ಎಂದರೆ ಪಂಚಪ್ರಾಣ ಎಂದ ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.!