ನಗದು ರಹಿತ ವಹಿವಾಟು: ಮೋದಿಗೆ ಸಾಥ್ ನೀಡಲಿದ್ದಾರೆ ಕಾಂಗ್ರೆಸ್ ನಂದನ್ ನಿಲಕೇಣಿ!

0
789

ದೊಡ್ಡ ನೋಟುಗಳನ್ನು ರದ್ದುಮಾಡಿ ಜನತೆಗೆ ದೊಡ್ಡ ಆಘಾತ ನೀಡಿದ ಪ್ರಧಾನಿ ನರೇಂದ್ರ ಮೋದಿ ನಗದು ರಹಿತ ವಹಿವಾಟು ಮಾಡುವ ತಮ್ಮ ಕನಸಿನ ಯೋಜನೆ ಯಶಸ್ವಿಯಾಗಿ ಜರುಗಿಸಲು ಐಟಿ ತಜ್ಞ ಹಾಗೂ ಕಾಂಗ್ರೆಸ್ ನ ನಂದನ್ ನಿಲಕೇಣಿ ಅವರ ನೆರವು ಪಡೆಯುವಲ್ಲಿ ಸಫಲರಾಗಿದ್ದಾರೆ.

ನಂದನ್ ನಿಲಕೇಣಿ ಸಾಫ್ಟ್ ವೇರ್ ಉದ್ಯಮದಲ್ಲಿ ಪರಿಣಿತರು. ಆಧಾರ್ ಕಾರ್ಡ್ ಯೋಜನೆ ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾಂಗ್ರೆಸ್ ನಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದರು.

ಇದಿಗ ಡಿಜಿಟಲ್ ಪೇಮೆಂಟ್ ಜಾರಿಗೆ ತರಲು ಉದ್ದೇಶಿಸಿರುವ ಮೋದಿಯ ಮುಂದೆ ಹಲವಾರು ಕಠಿಣ ಸವಾಲುಗಳಿವೆ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಇದೀಗ ನಂದನ್ ನಿಲಕೇಣಿ ಅವರ ಸಹಾಯ ಪಡೆಯುವಲ್ಲಿ ಅವರೊಂದಿಗೆ ಯಶಸ್ವಿಯಾಗಿ ಮಾತುಕತೆ ನಡೆಸಿದ್ದಾರೆ.

ನಗದು ರಹಿತ ವಹಿವಾಟು ಜಾರಿಗೆ ತರುವುದು ಅತ್ಯಂತ ಕಠಿಣವಾಗಿದೆ. ಅದರಲ್ಲೂ ದೇಶದ ಅತೀ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದಲ್ಲಿ ನಗದು ರೂಪದಲ್ಲಿಯೇ ವಹಿವಾಟು ನಡೆಯುತ್ತಿದೆ. ಅಂದರೆ ಸುಮಾರು ೩೫ ಕೋಟಿಯಷ್ಟು ಜನ ಡಿಜಿಟಲ್ ಮಾಧ್ಯಮದ ಗಂಧ-ಗಾಳಿಯೇ ತಿಳಿದಿಲ್ಲ.

ನಂದನ್ ನಿಲಕೇಣಿ ನೇತೃತ್ವದ ೧೩ ಸದಸ್ಯರ ತಂಡ ನಗದು ರಹಿತ ವಹಿವಾಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು ಯೋಜನೆ ರೂಪಿಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಂದನ್ ನಿಲಕೇಣಿ, ಸಮಿತಿಯ ಮೊದಲ ಸಭೆಯಲ್ಲಿ ಅತ್ಯಂತ ಶೀರ್ಘವಾಗಿ ಜನರನ್ನು ಹೇಗೆ ತಲುಪಬಹುದು ಹಾಗೂ ಅವರನ್ನು ಡಿಜಿಟಲ್ ವ್ಯವಹಾರಕ್ಕೆ ಹೇಗೆ ಪರಿವರ್ತಿಸಬಹುದು ಎಂದು ಚರ್ಚಿಸಲಾಗುವುದು ಎಂದಿದ್ದಾರೆ.

ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಭಾಗದ ಕೆಲವೆಡೆ ಸ್ಮಾರ್ಟ್ ಫೋನ್ ಬಳಕೆ ಆಗುತ್ತಿದ್ದು. ಪೇಟಿಯಂ ಸೇರಿದಂತೆ ನಾನಾ ರೀತಿಯಲ್ಲಿ ವಹಿವಾಟ ನಡೆಯುತ್ತಿದೆ. ಈ ಸಂಬಂದ ಗುಗಲ್ ಸೇರಿದಂತೆ ಇತರರ ನೆರವೂ ಪಡೆಯಲಾಗುವುದು. ನಮ್ಮ ಗುರಿ ಇರುವುದು ೪ ವರ್ಷ. ಆದರೆ ಸರಕಾರದ ನೆರವು ಸಮರ್ಪಕವಾಗಿ ದೊರತರಡ ಇನ್ನೂ ಬೇಗ ಗುರಿ ಸಾಧಿಸಬಹುದು ಎಂದು ನಿಲಕೇಣಿ ವಿವರಿಸಿದರು.