ಬೆಂಗಳೂರಿನ ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವೀಧರರಿಗೆ ಉದ್ಯೋಗ ಅವಕಾಶ

0
505

ಒಟ್ಟು ಹುದ್ದೆಗಳು 10

ಆಗಸ್ಟ್‌8ರೊಳಗೆ ಅರ್ಜಿ ಸಲ್ಲಿಸಿ

ಗುತ್ತಿಗೆ ಆಧಾರದಲ್ಲಿ ನಡೆಯಲಿದೆ ನೇಮಕ

ಹೆಚ್ಚಿನ ಮಾಹಿತಿಗಾಗಿ: www.nimhans.ac.in

source: nimhans.ac.in

ಹುದ್ದೆಗಳ ವಿವರ: 

ಫಿಸಿಸಿಸ್ಟ್‌ (ಸೈಕ್ಲೋಟ್ರೋನ್‌): ಮೆಡಿಕಲ್‌ ಫಿಸಿಕ್ಸ್‌ನಲ್ಲಿ ಎಂಎಸ್ಸಿ ಓದಿರುವ ಅಥವಾ ಬಯೋ ಫಿಸಿಕ್ಸ್‌/ಫಿಸಿಕ್ಸ್‌ನಲ್ಲಿ ಎಂಎಸ್ಸಿ ವಿದ್ಯಾರ್ಹತೆ ಪೂರ್ಣಗೊಳಿದ್ದು, ರೇಡಿಯೋಲಾಜಿಕಲ್‌ ಫಿಸಿಕ್ಸ್‌ನಲ್ಲಿ ಪೋಸ್ಟ್‌ ಗ್ರ್ಯಾಜುಯೇಟ್‌ ಡಿಪ್ಲೊಮಾ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ಸೀನಿಯರ್‌ ಸೈಂಟಿಫಿಕ್‌ ಆಫೀಸರ್‌: ಯೋಗದಲ್ಲಿ ಪಿಎಚ್‌.ಡಿ ಅಥವಾ ಎಂಡಿ ಓದಿರುವ ಮತ್ತು ಕನಿಷ್ಠ ಒಂದು ವರ್ಷದ ಸೇವಾನುಭವ ಇರುವ ಅಭ್ಯರ್ಥಿಗಳು ಸೈಂಟಿಫಿಕ್‌ ಆಫೀಸರ್‌ ಆಗಬಹುದು. 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಸೈಕ್ಯಾಟ್ರಿಕ್‌ ಸೋಷಿಯಲ್‌ ವರ್ಕರ್‌: ಐದು ಹುದ್ದೆಗಳು ಖಾಲಿ ಇವೆ. ಸೋಷಿಯಲ್‌ ವರ್ಕ್‌ನಲ್ಲಿ ಸ್ನಾತಕೋತ್ತರ ಮತ್ತು ಸೈಕ್ಯಾಟ್ರಿಕ್‌ ಸೋಷಿಯಲ್‌ ವರ್ಕ್‌ನಲ್ಲಿ ಎರಡು ವರ್ಷದ ಎಂಫಿಎಲ್‌ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ಅಕೌಂಟ್‌ ಅಸಿಸ್ಟೆಂಟ್‌: ಕಂಪನಿ ಅಕೌಂಟ್ಸ್‌ನಲ್ಲಿ ಅನುಭವ ಇರುವ 30 ವರ್ಷದೊಳಗಿನ ಬಿಕಾಂ ಪದವೀಧರರನ್ನು ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ವಿಳಾಸ:
The Director, NIMHANS, P.B.No.2900,
Hosur Road, Bengaluru – 560 029