ಮುಕ್ತ ವಿದ್ಯಾಲಯದಲ್ಲಿ ಗ್ರೂಪ್‌ ಎ,ಬಿ,ಸಿ ಹುದ್ದೆಗಳ ನೇಮಕ: ಅರ್ಜಿಗೆ ಮೇ.17 ಕೊನೆ ದಿನ

0
499

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ (ಎನ್‌ಐಒಎಸ್‌) ವಿವಿಧ ಗ್ರೂಪ್‌ ಎ, ಬಿ, ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌-ನಲ್ಲಿ ಮೇ 17,2019 ರೊಳಗೆ ಅರ್ಜಿ ಸಲ್ಲಿಸಬೇಕು.

Also read: UPSC 398 ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಗ್ರೂಪ್‌-ಎ ಹುದ್ದೆಗಳು: ನಿರ್ದೇಶಕ(ಮೌಲ್ಯಮಾಪನ)-1, ಉಪ ನಿರ್ದೇಶಕ(ಶೈಕ್ಷಣಿಕ)-2, ಉಪ ನಿರ್ದೇಶಕ(ಖಾತೆ)-1, ಶೈಕ್ಷಣಿಕ ಅಧಿಕಾರಿ-11 ಹುದ್ದೆಗಳಿವೆ. ರಕ್ಷಣಾ ಅಧ್ಯಯನ, ಇಂಗ್ಲಿಷ್‌, ಲಲಿತ ಕಲೆ, ಭಾಷಾಶಾಸ್ತ್ರ, ಮನೋವಿಜ್ಞಾನ, ಸಂಸ್ಕೃತ, ವಿಜ್ಞಾನ, ಸಮಾಜ ವಿಜ್ಞಾನ, ವಿಶೇಷ ವಿಜ್ಞಾನ, ವಿಶೇಷ ಶಿಕ್ಷಣ, ಯೋಗ ವಿಷಯಗಳಲ್ಲಿ ತಲಾ ಒಂದೊಂದು ಶೈಕ್ಷಣಿಕ ಅಧಿಕಾರಿ ಹುದ್ದೆಗಳಿವೆ. ಗ್ರೂಪ್‌-ಬಿ ಹುದ್ದೆಗಳು: ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ-1, ಇಡಿಪಿ ಮೇಲ್ವಿಚಾರಕ-37 ಹುದ್ದೆಗಳಿವೆ. ಗ್ರೂಪ್‌-ಸಿ ಹುದ್ದೆಗಳು: ಕಿರಿಯ ಸಹಾಯಕ-37 ಹುದ್ದೆಗಳಿವೆ.

ಸಂಸ್ಥೆ (Organisation): ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ (ಎನ್‌ಐಒಎಸ್‌)

ವಿದ್ಯಾರ್ಹತೆ (Educational Qualification): ನಿರ್ದೇಶಕ (ಮೌಲ್ಯಮಾಪನ)- ಸ್ನಾತಕೋತ್ತರ ಪದವಿ, ಅಕಾಡೆಮಿಕ್‌ ಆಫೀಸರ್‌- ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ, ಇಡಿಪಿ ಸೂಪರ್‌ವೈಸರ್‌- ಪದವಿ, ಕಂಪ್ಯೂಟರ್‌ ಅಪ್ಲಿಕೇಷನ್‌/ಹಾರ್ಡ್‌ವೇರ್‌ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್‌ ಡಿಪ್ಲೊಮಾ, ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗೆ ಸೀನಿಯರ್‌ ಸೆಕೆಂಡರಿ ವಿದ್ಯಾರ್ಹತೆ ಬಯಸಲಾಗಿದೆ. ಪ್ರತಿಗಂಟೆಗೆ 6 ಸಾವಿರ ಕೀ ಟೈಪಿಸುವ ಸಾಮರ್ಥ್ಯ‌ ಹೊಂದಿರಬೇಕು. ಹಿಂದಿ ಮತ್ತು ಇಂಗ್ಲಿಷ್‌ ಜ್ಞಾನವಿರಬೇಕು.

ವಯೋಮಿತಿ: ಆಗಸ್ಟ್ 1,2019ರ ಅನ್ವಯ ಕನಿಷ್ಟ 20 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಸಹಾಯವಾಣಿ ಸಂಖ್ಯೆ: 1800ಧಿ-180ಧಿ-9393

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಗ್ರೂಪ್‌ ಎ ಹುದ್ದೆಗಳಿಗೆ 750 ರೂ., ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ 500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಗ್ರೂಪ್‌ ಎ ಮತ್ತು ಬಿ ಹುದ್ದೆಗೆ 250 ರೂ. ಮತ್ತು ಗ್ರೂಪ್‌ ಸಿ ಹುದ್ದೆಗೆ 150 ರೂ. ಅರ್ಜಿ ಶುಲ್ಕ ಪಾವತಿಸಬೇಕು
ಆಯ್ಕೆ ಪ್ರಕ್ರಿಯೆ: ಡೈರೆಕ್ಟರ್‌ (ಮೌಲ್ಯಮಾಪನ), ಅಕಾಡೆಮಿಕ್‌ ಆಫೀಸರ್‌, ಇಡಿಪಿ ಸೂಪರ್‌ವೈಸರ್‌, ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗಳನ್ನು ನೇರ ನೇಮಕದ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ ಹುದ್ದೆಗಳನ್ನು ಡೆಪ್ಯೂಟೇಷನ್‌ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌-ನಲ್ಲಿ https://nios.ac.in/vacancy.aspx#_ga=2.21899762.854256945.1556528326-1990656369.1552842879 ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಬಹುದಾಗಿದೆ.