ಸಿನೆಮಾ ರಂಗಕ್ಕೆ ಕಾಲಿಟ್ಟ ಉಪೇಂದ್ರರ ಅಣ್ಣನ ಮಗ ನಿರಂಜನ್!!

0
808

ಚಿಕ್ಕಪ್ಪನ ಹಾದಿಯಲ್ಲಿ ನಿರಂಜನ್

ಕನ್ನಡದ ಚಿತ್ರರಂಗದಲ್ಲೇ ತಮ್ಮದೇ ಛಾಪು ಮೂಡಿಸಿರುವ ಸೂಪರ್ ಸ್ಟಾರ್ ಉಪೇಂದ್ರ ಅವರ, ವಂಶದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಸದ್ದಿಲ್ಲದೆ ಎಂಟ್ರೀ ನೀಡಿದೆ.  ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಿಂದ ನವ ಕಲಾವಿದರೊಬ್ಬರು ನಾಯಕ ನಟರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಲಿದ್ದಾರೆ.

ಹೌದು ಉಪೇಂದ್ರ ಅವರ ಅಣ್ಣ ಸುರೇಂದ್ರರ ಮಗ ನಿರಂಜನ್ ಚಂದನವನಕ್ಕೆ ಕಾಲಿಟಿದ್ದಾರೆ. ನಿರಂಜನ್ ಓದು ಮುಗಿಸಿದ್ದು, ಇನ್ನು ಹೆಸರಿಡದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸೋಕೆ ತಯಾರಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ  ಇದೇ 10 ರಿಂದ ಆರಂಭವಾಗಲಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಯೋಗಿ ದೇವಗಂಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 1/4 ಕೆಜಿ ಪ್ರೀತಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಶಿವಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗೇಶ್ ಕುಮಾರ್ ಚಿತ್ರ ನಿರ್ಮಿಸುತ್ತಿದ್ದಾರೆ.

ನಿರಂಜನ್ ಅವರ ಈ ಚಿತ್ರಕ್ಕಾಗಿ ಫೋಟೋ ಶುಟ್ ಮುಗಿಸಿದ್ದಾರೆ. ಉಪ್ಪಿ ಅಣ್ಣನ ಮಗನ ಚಿತ್ರದಲ್ಲಿ ನಿರಂಜನ್ ಅವರ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಉಪ್ಪಿ ಕುಟುಂಬದ ಇನ್ನೊಂದು ತಲೆ ಮಾರು ಚಿತ್ರರಂಗಕ್ಕೆ ಸದ್ದಿಲ್ಲದೆ ಎಂಟ್ರಿ ಕೊಡುತ್ತಿದೆ.

ನಿರಂಜನ್ ಈ ಚಿತ್ರದಲ್ಲಿ ಯಾವ ರೂಪದಲ್ಲಿ ಕಾಣಿಸಿಕೊ‍ಳ್ಳಲಿದ್ದಾರೆ. ನಾಯಕಿ ಯಾರು ಎಂಬ ಬಗ್ಗೆ ಇನ್ನು ಮಾಹಿತಿಗಳು ಲಭ್ಯವಾಗಿಲ್ಲ. ಇದಕ್ಕಾಗಿ ನಿರಂಜನ ಹಗಲಿರುಳು ಕಷ್ಟ ಪಡುತ್ತಿದ್ದು, ನಟನೆಯ ವ್ಯಾಕರಣಗಳನ್ನು ಕಲೆಯುತ್ತಿದ್ದಾರೆ.

ಚಿಕ್ಕಪ್ಪನಂತೆ ದೊಡ್ಡ ಹೆಸರು ಹಾಗೂ ಚಿತ್ರರಂಗದಲ್ಲಿ ಘಟ್ಟಿ ಊರುವ ಉದ್ದೇಶವನ್ನು ಹೊಂದಿರುವ ನಿರಂಜನ್ ಅವರ ಆಸೆ ಈಡೇರಲಿ, ಚಿತ್ರ ಶತದಿನೋತ್ಸವನ್ನು ಆಚರಿಸಲಿ ಎಂದು ಉಪ್ಪಿ ಅಭಿಮಾನಿಗಳ ಆಶಯವಾಗಿದ್ದ.