ಸಾವಿರಾರು ಕೋಟಿ ನುಂಗಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ನೀರವ್ ಮೋದಿ ಕೊನೆಗೂ ಅರೆಸ್ಟ್; ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ..

0
324

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಮಾಡಿ 11400 ಕೋಟಿ ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿ ಆದ ನಿರವ್ ಮೋದಿಯನ್ನು ಲಂಡನ್​ನಲ್ಲಿ ಬಂಧಿಸಲಾಗಿದೆ. ನೀರವ್​ ಮೋದಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು. ಆದರೀಗ ಅವರನ್ನು ಲಂಡನ್​ನಲ್ಲಿ ಬಂಧನ ಮಾಡಲಾಗಿದ್ದು ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

Also read: ಪಂಜಾಬ್ ನ್ಯಾಷನಲ್ ಬ್ಯಾಂಕ್-ಗೆ 11400 ಕೋಟಿ ಪಂಗನಾಮ ಹಾಕಿದ ನಿರವ್ ಮೋದಿ ಲಂಡನ್-ನಲ್ಲಿ ಕಿಂಗ್..

ನಿರವ್ ಮೋದಿ ಬಂಧನ?

ಹೌದು ನಿರವ್ ಮೋದಿ ಲಂಡನ್ ನಲ್ಲಿ ನೆಲೆಸಿದ್ದ ಬಗ್ಗೆ ಮಾಧ್ಯಮ ವರದಿ ಪ್ರಕಟವಾದ ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ನೀರವ್ ಬಂಧನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ನೀರವ್ ಮೋದಿ ಬಂಧನವಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಹೌದು ಭಾರತಕ್ಕೆ ಬೇಕಾಗಿರುವ ಸುಮಾರು 1.5 ಶತಕೋಟಿ ರೂಪಾಯಿ ವಂಚನೆ ಪ್ರಕರಣದ ಉದ್ಯಮಿ ನೀರವ್ ಮೋದಿ ಮುಕ್ತವಾಗಿ ಲಂಡನ್ ನಲ್ಲಿ ವಾಸಿಸಿಕೊಂಡು ಓಡಾಡಿಕೊಂಡಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿತ್ತು. ಭಾರತದಲ್ಲಿರುವ ಬ್ಯಾಂಕ್‌ಗಳಿಗೆ ವಂಚನೆಗೈದಿರುವ ಪ್ರಕರಣದಲ್ಲಿ ನೀರವ್ ಮೋದಿ ‘ವಾಂಟೆಡ್’ಲಿಸ್ಟ್‌ನಲ್ಲಿದ್ದಾನೆ ಲಂಡನ್‌ನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನೀರವ್‌ರನ್ನು ಪತ್ರಿಕೆಯ ವರದಿಗಾರ ಮಾತನಾಡಿಸಲು ಯತ್ನಿಸುತ್ತಿದ್ದ ವರದಿಗಾರರಿಗೆ ಭಾರತ ಕಂಡ ವಂಚಕ ಮಹಾನ್ ಕಳ್ಳ ನಿರವ್ ಮೋದಿ ಪ್ರತಿಕ್ರಿಯೆ ನೀಡದೆ ನಡೆದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು.

Also read: ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

ವರದಿಯಂತೆ ಲಂಡನ್ ನ ಐಷಾರಾಮಿ ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲಿ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿರುವ ನೀರವ್ ಮೋದಿಯ ಈಗಿನ ಗೆಟಪ್ ಬದಲಾಗಿದ್ದು ದಪ್ಪ ಮೀಸೆ ಬೆಳೆಸಿಕೊಂಡಿದ್ದಾನೆ. ಗಡೀಪಾರಿನಿಂದ ತಪ್ಪಿಸಿಕೊಳ್ಳಲು ನೀರವ್ ಮೋದಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತನ್ನ ನೋಟವನ್ನು ಬದಲಿಸಿಕೊಂಡಿರಬಹುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿದ್ದವು. ಲಂಡನ್ ನ ಐಷಾರಾಮಿ ಟೊಟ್ಟೆನ್ ಹಾಮ್ ಕೋರ್ಟ್ ರಸ್ತೆಯಲ್ಲಿ ಮೂರು ಬೆಡ್ ರೂಂಗಳ ವರ್ಷಕ್ಕೆ ಸುಮಾರು 8 ಮಿಲಿಯನ್ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ನೀರವ್ ಮೋದಿ ನೆಲೆಸಿದ್ದಾನೆ, ಅಲ್ಲಿ ಹೊಸ ವಜ್ರದ ಉದ್ಯಮ ಆರಂಭಿಸಿದ್ದು ಅದರ ಕಚೇರಿ ಅಪಾರ್ಟ್ ಮೆಂಟ್ ಗೆ ಹೊಂದಿಕೊಂಡಂತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಈ ಉದ್ಯಮ ಆರಂಭಿಸಿದ್ದಾನೆ. ಎಂದು ತಿಳಿದು ಬಂದಿತ್ತು.

ಭಾರತಕ್ಕೆ ಬಂದರೆ ನಿರವ್ ಜೀವಕ್ಕೆ ಅಪಾಯ?

Also read: ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದರು. ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ತಿಳಿಸಿದ್ದರು. ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿಕೆ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿದು. ಒಂದು ವೇಳೆ ಜಾಮೀನು ಕೋರಿ ನೀರವ್​ ಮೋದಿ ಅರ್ಜಿ ಸಲ್ಲಿಸಬಹುದು. ಕೋರ್ಟ್​ ಜಾಮೀನು ನೀಡಿದರೆ ಅವರ ಬಂಧನ ಅಸಾಧ್ಯವಾಗಲಿದೆ. ಎಂದು ತಿಳಿದು ಬಂದಿದೆ.